ಮುಂಬೈ: ಖ್ಯಾತ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ರಾಜೀನಾಮೆ ಸುದ್ದಿ ಇಂದು ಹೊರಬಿದ್ದಿದೆ.
ಅಭಿಷೇಕ್ ಸಿಂಗ್ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಬ್ಸರ್ವರ್ ಎಂದು ಬರೆದಿರುವ ವಾಹನದ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಬಳಿಕ ಅವರನ್ನು ಫೆಬ್ರವರಿ 2023 ರಲ್ಲಿ ಸೇವೆಯಿಂದ ಅಮಾನತುಗೊಳಿಸಲಾಯಿತು. ಆದರೆ ಇಂದು ದಿಢೀರನೆ ಅವರ ರಾಜೀನಾಮೆ ಸುದ್ದಿ ಬೆಳಕಿಗೆ ಬಂದಿದ್ದು, ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. 2022 ರಲ್ಲಿ ಗುಜರಾತ್ ಚುನಾವಣಾ ಕರ್ತವ್ಯದಿಂದ ಹೊರಗುಳಿದ ನಂತರ ಅಭಿಷೇಕ್ ಸಿಂಗ್ ಅವರು ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡರು.
ಇಂದು ಇಲ್ಲಿ ಐಎಎಸ್ ಅಧಿಕಾರಿ ಅಭಿಷೇಕ್ ಸಿಂಗ್ ಅವರ ಯಶಸ್ಸಿನ ಕಥೆ ಕೊಡಲಾಗಿದೆ. ಅಭಿಷೇಕ್ ಅವರು UPSC CSE ಪರೀಕ್ಷೆಯಲ್ಲಿ ತೇರ್ಗಡೆಯಾದರು.
2011ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅಭಿಷೇಕ್ ಸಿಂಗ್ ಮನರಂಜನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಮೆಚ್ಚುಗೆ ಪಡೆದ ಸಿರೀಸ್ “ದೆಹಲಿ ಕ್ರೈಮ್” ನಲ್ಲಿ ಅವರ ಕೆಲಸಕ್ಕೆ ಸಾಕಷ್ಟು ಮನ್ನಣೆ ಸಿಕ್ಕಿತು.
ಚಾರ್ ಪಂದ್ರಾಹ್ ಎಂಬ ಕಿರುಚಿತ್ರದಲ್ಲಿಯೂ ಅಭಿಷೇಕ್ ಕಾಣಿಸಿಕೊಂಡಿದ್ದಾರೆ ಮತ್ತು ಬಿ ಪ್ರಾಕ್ನ ದಿಲ್ ತೋಡ್ ಕೆ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ, ಅಭಿಷೇಕ್ ಕಾಲೇಜು ದಿನಗಳಲ್ಲಿ ತಾನು ಪ್ರೀತಿಸಿದ ಹುಡುಗಿ ದ್ರೋಹ ಮಾಡಿದ್ದಳು ಎಂದು ಹೇಳಿದ್ದರು. ಆ ನಂತರ, ಅಭಿಷೇಕ್ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನೂ ಮಾಡಿದ್ದರಂತೆ. ಆದರೆ ತನ್ನನ್ನು ತಾನು ನಿಯಂತ್ರಿಸಿಕೊಂಡ ನಂತರ ಅವರು UPSC ನಾಗರಿಕ ಸೇವೆಗಳ ಪರೀಕ್ಷೆಯ ಸಿದ್ಧತೆಗೆ ನಿರ್ಧರಿಸಿ, ತಯಾರಿ ಆರಂಭಿಸಿದರು. 2011 ರಲ್ಲಿ ಪರೀಕ್ಷೆಯಲ್ಲಿ ಯಶಸ್ಸು ಪಡೆದ ಅಭಿಷೇಕ್ ಸಿಂಗ್ 94 ನೇ Rank ಪಡೆದರು. ಅಭಿಷೇಕ್ ಸಿಂಗ್ ಅವರ ತಂದೆ ಕೂಡ ಐಪಿಎಸ್ ಅಧಿಕಾರಿಯಾಗಿದ್ದು, ಅವರ ತಾಯಿ ಗೃಹಿಣಿಯಾಗಿದ್ದಾರೆ.
ಪತ್ನಿಯೂ ಅಧಿಕಾರಿ
ಅಭಿಷೇಕ್ ಸಿಂಗ್ ಪತ್ನಿ ದುರ್ಗಾ ಶಕ್ತಿ ನಾಗ್ಪಾಲ್ ಕೂಡ ಐಎಎಸ್ ಅಧಿಕಾರಿ. ಐಎಎಸ್ ದುರ್ಗಾ ತಮ್ಮ ಅತ್ಯುತ್ತಮ ಕಾರ್ಯಶೈಲಿ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದಾರೆ. ದುರ್ಗಾ ಶಕ್ತಿ ನಾಗ್ಪಾಲ್ ಛತ್ತೀಸ್ಗಢ ನಿವಾಸಿಯಾಗಿದ್ದು, ಬಿಟೆಕ್ ಮಾಡಿದ್ದಾರೆ.
ಅವರು UPSC ಪರೀಕ್ಷೆಯಲ್ಲಿ 20 ನೇ Rank ಗಳಿಸಿದ್ದರು.
ಕೆಲವು ದಿನಗಳ ಹಿಂದೆ ಅಭಿಷೇಕ್ ಅವರು ಜೌನ್ಪುರದಲ್ಲಿ ಗಣೇಶೋತ್ಸವದ ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರಲ್ಲಿ ಮುಂಬೈನ ಕೆಲವು ಚಲನಚಿತ್ರ ತಾರೆಯರು ಭಾಗವಹಿಸಿದ್ದರು.
ಈ ಕಾರ್ಯಕ್ರಮವು 2024 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪೂರ್ವಭಾವಿಯಾಗಿ ಅವರ ಸಿದ್ಧತೆ ಎಂದು ಪರಿಗಣಿಸಲಾಗಿದೆ.


