ಮೆದುಳು ನಾಲಿಗೆಗೆ ಸಂಪರ್ಕವಿಲ್ಲದ ಅರಣ್ಯ ಅಧಿಕಾರಿ ನಾಯಿಕ ವಿರುದ್ದ ದಲಿತ ಮುಖಂಡರ ಪ್ರತಿಭಟನೆ…..!
ಅರೆ ಹುಚ್ಚನಂತೆ ಮಾತನಾಡಿ ಪೇಚಿಗೆ ಸಿಲುಕಿದ್ದ DCFO ಶಿವಾನಂದ ನಾಯಿಕನ ವಿರುದ್ಧ ರಾಯಬಾಗ ಪಟ್ಟಣದಲ್ಲಿ ಸಿಡಿದೆದ್ದ ದಲಿತಪರ ಸಂಘಟನೆಗಳು.!
ಅಬ್ಬಬ್ಬಬ್ಬಾ ಈತನ ಬಾಯೊ ಬೊಂಬಾಯೊ..?
ಇತನೊಬ್ಬ ಅಧಿಕಾರಿ ಆಗಿ ಸಾರ್ವಜನಿಕ ವಲಯದಲ್ಲಿ ಯಾರ ಜೊತೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂಬ ಕಾಮನ್ ಸೆನ್ಸ್ ಈತನಿಗೆ ಇಲ್ಲ. ರಾಯಭಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ ಅವರು ಕಟ್ಟಡದ ವಿಷಯವಾಗಿ ಫೋನ್ ಸಂಭಾಷಣೆಯಲ್ಲಿ ಅತಿ ನಮ್ರತೆಯಿಂದ ಸಾಹೇಬ್ರೆ ಎಂದು ಮಾತನಾಡುತ್ತಿರುವಾಗಲೇ ಇ ದಗಲ್ ಬಾಜಿ ಅಧಿಕಾರಿ ಬೆನ್ನು ಬಿಡದ ಬೇತಾಳನಂತೆ, ಕೆಣಕಿ ತಿನಿಕಿದ ಪ್ರಸಂಗ ನಡೆದಿದೆ. ಇ ಕುಡುಕ, ಅರೆ ಹುಚ್ಚ, ಐಎಫ್ಎಸ್ ಅಧಿಕಾರಿ ಶಾಸಕರ ಜೊತೆ ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವಿಲ್ಲದೆ, ದನ ಕಾಯುವರಂತೆ ಅವಾಜ್ ಹಾಕಿ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಇನ್ನು ಈತ ಕ್ಷೇತ್ರದ ಶಾಸಕನಿಗೆ ಈ ರೀತಿಯಾಗಿ ಅವಾಜ್ ಹಾಕಿ ಬೆದರಿಸುತ್ತಾನೆ ಎಂದರೆ, ಇನ್ನು ಸಾಮಾನ್ಯ ಜನರ ಗತಿ ಎನು..? ಇತ ಅಧಿಕಾರಿ ಅನ್ನೋಕೆ ನಾಚಿಕೆ ಆಗುತ್ತಿದೆ. ಎಂದು ದಲಿತಪರ ಮುಖಂಡರು ರಾಯಬಾಗ ಪಟ್ಟಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿ, DCFO ಶಿವಾನಂದ ನಾಯಿಕ ವಿರುದ್ಧ ಉಗ್ರವಾಗಿ ಪ್ರತಿಭಟಿಸಿ ದಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.