ಚಿಕ್ಕೋಡಿ: ತುಂಬು ಗರ್ಭಿಣಿ ಮಹಿಳೆ ಜೊತೆ ಸರಕಾರಿ ಆಸ್ಪತ್ರೆ ವೈದ್ಯನ ಅಸಭ್ಯ ವರ್ತನ
ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆ ಯ ಸಂತೋಷ ವಿಭೂತಿಮಠ ಎಂಬ ವೈದ್ಯ ಗರ್ಭಿನಿ ಮಹಿಳೆಗೆ ಬೈದು ನಿಂದಿಸಿರೋದು ತಡವಾಗಿ ಬೆಳಕಿಗೆ ಬಂದಿದೆ.
ಮಹಿಳೆಯು ಹೆರಿಗೆಗೆಂದು ತಪಾಸಣೆ ಮಾಡಿಸಿಕೊಳ್ಳಲು ಹೋದಾಗ ವೈದ್ಯರು ಅಸಭ್ಯ ವಾಗಿ ವರ್ತಿಸಿ ಅವಾಚ್ಯ ಪದಗಳಿಂದ ಬೈದರು ಎಂದು ತಿಳಿದು ಬಂದಿದೆ.
ವೈದ್ಯ ನಾರಾಯನಮೋ ಹರಿ….ವೈದ್ಯರು ದೇವರಿಗೆ ಸಮಾನ ಎಂದು ಹೇಳುತ್ತಾರೆ.
ಆದರೆ ಈ ಹರಕಲು ಬಾಯಿಯ ವೈದ್ಯ ಮಾತ್ರ ಹಾಗಲ್ಲ.
ಈತ ಬಾಯಿ ತೆರೆದರೆ ಸಾಕು ಅವಾಚ್ಯ ಶಬ್ದಗಳೇ ಈತನ ಬಾಯಿಂದ ಬಡ ಬಡಿಸುತ್ತಾನೆ.
ಹಾಗಂತ ಅಲ್ಲಿನ ಸ್ಥಳೀಯರು ಕೂಡ ವೈದ್ಯನ ನಡೆಯನ್ನು ಖಂಡಿಸಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಈ ಹೊಲಸು ಬಾಯಿ ವೈದ್ಯನಿಗೆ, ಹೇಳೋರು ಕೇಳುವವರು ಯಾರು ಇಲ್ಲ ಅನಿಸುತ್ತದೆ.
ಈತನ ಕುರಿತು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯ ಗಮನಕ್ಕೆ ತಂದಾಗ, ತನ್ನ ತಪ್ಪನ್ನು ಒಪ್ಪಿಕೊಂಡು ತಪ್ಪಾಯ್ತು ಕ್ಷಮಿಸಿ ಎಂದು ಅಂಗಲಾಚಿ ಬೇಡಿದ್ದಾನೆ.
ಅದು ಏನೇ ಆಗಿರಲಿ, ಸಂಬಂಧಪಟ್ಟ ಮೇಲಾಧಿಕಾರಿಗಳು ಈ ವೈದ್ಯನ ಹೊಲಸು ಬಾಯಿಂದ ಉದುರುವ ಅಸಭ್ಯ ಪದಗಳಿಗೆ ಬ್ರೇಕ್ ಹಾಕಿ, ಈತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಈತನ ಕುರಿತು ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲಿ ಬಿಚ್ಚಿಡುತ್ತೇವೆ. ಟಿವಿ3 ಕನ್ನಡ ವಾಹಿನಿಯಲ್ಲಿ ನಿರೀಕ್ಷಿಸಿ!!
ಜರ್ನಲಿಸ್ಟ್: ಚಂದ್ರು ತಳವಾರ