ಚಿಕ್ಕೋಡಿ: ಸತೀಶ್ ಜಾರಕಿಹೊಳಿ ಹೇಳಿಕೆ, ಬೆನ್ನೆಲೆ ಕೆರಳಿ ಕೆಂಡವಾದ ಶಂಭು ಕಲ್ಲೋಳಿಕರ್ ಅಭಿಮಾನಿಗಳು, ಏಟಿಗೆ ಎದುರೇಟು ಫಿಕ್ಸ್..!
ಲೋಕಸಬಾ ಚುನಾವಣೆ ರಣಕಣ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ, ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದ ಬೆಳಗಾವಿಯ ರಾಜಕೀಯ, ಇದೀಗ ಜಾರಕಿಹೊಳಿ ಕುಟುಂಬದ ಕೈಗೊಂಬೆಯಾಗಿಬಿಟ್ಟಿದೆ. ಅನೇಕ ಚುನಾವಣೆಗಳಲ್ಲಿ ಅವರದ್ದೆ ಮೆಲುಗೈ ಎಂಬಂತೆ ಮನಸೋ ಇಚ್ಚೆ ಟಿಕೇಟ ಹಂಚಿಕೆ ಮಾಡುವದು ಇವರ ಕುಟುಂಬ ರಾಜಕಾರಣವಾಗಿದೆ.
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ಮತಕ್ಷೇತ್ರದ ಏಕೈಕ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿ ಅಭಿವ್ರದ್ದಿ ಹರಿಕಾರನೆಂದು ಹೆಸರು ಮಾಡಿದ ಇವರಿಗೆ ವಿಧಾನ ಸಭೆ ಚುನಾವಣೆಯಲ್ಲಿಯೂ ಕೂಡಾ ಕಾಂಗ್ರೇಸ್ ಟಿಕೇಟ ಹಂಚಿಕೆಯಲ್ಲಿ ಕುತಂತ್ರದಿಂದ ಟಿಕೆಟ್ ಕೈತಪ್ಪಿಸಲಾಗಿದೆ. ಇದಕ್ಕೆಲ್ಲಾ ಮಾಸ್ಟರ್ ಮೈಂಡ ಪ್ಲಾನ್, ಹೀಗೆಲ್ಲ ಕುಟುಂಬ ಒಳ ರಾಜಕೀಯ ಮಾಡಿಕೊಂಡು ತಮ್ಮ ಮನೆಯಲ್ಲಿದ್ದವರೆಲ್ಲಾ ರಾಜಕೀಯ ಅಖಾಡಕ್ಕೆ ಬರಬೇಕೆನ್ನುವ ದುರಾಸೆಯೆ ಈ ಗೋಕಾಕ ರಾಜಕೀಯ ಏಕೆಂದರೆ ಎಷ್ಟೋ ವರ್ಷಗಳಿಂದ ಸತತವಾಗಿ ಕಾಂಗ್ರೇಸ್ ಪಕ್ಷದಲ್ಲಿ ಎಡೆಬಿಡದೆ ದುಡಿಯುತ್ತಿದ್ದ ಕಾರ್ಯಕರ್ತರು, ಇದುವರೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಮಾತ್ರ ಸೀಮಿತರಾಗಿರುತ್ತಾರೆ.
ಇವರ ಕಣ್ಣಿಗೆ ಪಕ್ಷಕ್ಕಾಗಿ ದುಡಿದವರು, ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಶಂಭು ಕಲ್ಲೋಳಿಕರ್ ಅಂತಹ ಧಕ್ಷ ಅಧಿಕಾರಿಗಳು ಎಮ್ ಎಲ್ ಎ ಆದರೆ ಅಥವಾ ರಾಜಕೀಯಕ್ಕೆ ಎಂಟ್ರಿ ಕೊಟ್ರೆ ನಮ್ಮ ಬುಡಕ್ಕೆ ಧಾರಾಕಾರವಾಗಿ ಕೈ ಹಾಕಿ ನಮ್ಮನ ನೆಲಕ್ಕುರುಳಿಸುತ್ತಾರೆಂಬ ಭಯವೆ ಈ ಗೊಕಾಕ ರಾಜಕೀಯವಾಗಿ ಬಿಟ್ಟಿದೆ, ಭಲಾಡ್ಯವಾಗಿ ಪಕ್ಷ ಬೆಳೆಸಲು ಪ್ರಯತ್ನಿಸಿದ ಅನೇಕ ಕಾರ್ಯಕರ್ತರ ಸೇವೆಯನ್ನ ಪರಿಗಣಿಸದೆ ಅಂತವರನ್ನ ಹೊರಗಿಟ್ಟಿದ್ದಾರೆ.
ಇದೆ ತರಹ ಅನಿಸುತ್ತದೆ ಈ ಗೋಕಾಕ ರಾಜಕೀಯ.
ಆದರೆ ಸ್ವತಂತ್ರವಾಗಿ ಟಕ್ಕರ ಕೊಟ್ಟು ಜಿಲ್ಲೆಯಲ್ಲಿ ಅನೇಕ ರಾಜಕಾರಣಿಗಳಿಗೆ ಶೆಡ್ಡು ಹೊಡೆದ ಕಲ್ಲೋಳ್ಕರವರಿಗೆ ಬಾರಿ ಜನ ಬೆಂಬಲವಿದೆ.
ಇದನ್ನಾದರೂ ನೋಡಿ ಇಂತವರನ್ನ ಗುರುತಿಸಬೇಕಿದೆ. ಅದನ್ನೆಲ್ಲ ಬಿಟ್ಟು ಸೆಡಿನ ರಾಜಕೀಯ ಜಿಲ್ಲೆಗೆ ಶೋಬೆ ತರುವದಿಲ್ಲ. ಅದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಹಿನ್ನೆಡೆಗೆ ಕಾರಣವಾಗಬಹದು. ಎಂದು ಶಂಭು ಬೆಂಬಲಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಮುಂದೆ ಟಿಕೇಟ ನೀಡಲ್ಲ ಮತ್ತೆ ಸಾಮಾನ್ಯ ಕಾರ್ಯಕರ್ತರನ್ನ ಹುಡುಕುತ್ತೆವೆ ಎನ್ನುವ ಹೇಳಿಕೆ ಇದೀಗ ಶಂಭು ಕಲ್ಲೋಳಿಕರ್ ಅಭಿಮಾನಿಗಳನ್ನು ಮತ್ತಷ್ಟು ರೊಚ್ಚಿಗೇಳುವಂತೆ ಮಾಡಿದೆ.
ಜರ್ನಲಿಸ್ಟ್: ಚಂದ್ರು ತಳವಾರ ಟಿವಿ೩ ನ್ಯೂಸ್ ಕನ್ನಡ ಬೆಳಗಾವಿ