ಲೋಕಸಭಾ ಚುನಾವಣೆಗೆ ಸ್ಪರ್ದಿಸುವದು ಖಚಿತ ಶಂಭು ಕಲ್ಲೊಳಿಕರ..!
ಮತ್ತೊಂದು ಸುತ್ತಿನ ಚುನಾವಣಾ ರಣಕನಕ್ಕೆ, ಸೆಡ್ಡು ಹೊಡೆಯಲು ಸಜ್ಜಾದ ಶಂಭು ಕಲ್ಲೋಳಿಕರ ಪಡೆ.!
ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಹೊರವಲಯದ ಅವರ ಪಾರ್ಮ ಹೌಸ ಒಂದರಲ್ಲಿ ಅಭಿಮಾನಿಗಳ ಜೊತೆ ಸಭೆ ನಡೆಸಿದ ಕಲ್ಲೋಳಿಕರ್ ಅವರು ಅನೇಕ ಬೆಂಬಲಿಗರೊಂದಿಗೆ ಇಂದು ಲೊಕಸಭಾ ಚುನಾವಣೆಗೆ ಸ್ಪರ್ದಿಸುವ ಕುರಿತು ಖಚಿತ ಪಡಿಸಿದರು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗೆ ಭಾರಿ ಹೊಡೆತ ನೀಡಿ ಬಹುಮತ ಪಡೆದಿದ್ದ ಶಂಭು ಕಲ್ಲೋಳಿಕರ್ ಇದೀಗ ಲೋಕಸಭಾ ಚುನಾವಣೆಗೆ ಬಾರಿ ಸಿದ್ದತೆ ನಡೆಸಿದ್ದಾರೆ. ಇತ್ತ ಕಾಂಗ್ರೆಸ್ ನಿಂದ ಪ್ರಿಯಾಂಕಾ ಜಾರಕಿಹೊಳಿ ಕಣದಲ್ಲಿ ಇದ್ದರೆ, ಬಿಜೆಪಿಯಿಂದ ಅಣ್ಣಾಸಾಹೇಬ ಜೊಲ್ಲೆ ಪ್ರತಿಸ್ಪರ್ದಿಯಾಗಿದ್ದು, ಸ್ವತಂತ್ರ ಪಕ್ಷದಿಂದ ಶಂಭು ಕಲ್ಲೋಳ್ಕರ್ ನಾನೇನು ಯಾವ ಪಕ್ಷಕ್ಕೂ ಕಡಿಮೆ ಇಲ್ಲ ಎಂಬಂತೆ, ತೊಡೆತಟ್ಟಿರುವುದು ತ್ರಿಕೋನ ಸ್ಪರ್ದೆ ಕುತೂಹಲಕಾರಿ ಆಗಲಿದೆ.
ಇನ್ಮೂ ೮ ವಿಧಾನ ಸಭಾ ಮತಕ್ಷೇತ್ರದ ಶಂಬು ಕಲ್ಲೋಳಿಕರ ಅಭಿಮಾನಿಗಳು, ಕಾರ್ಯಕರ್ತರು, ಮತದಾರರ ಒಲವೂ ನೋಡಿದರೆ, ಶಂಭು ಬೆನ್ನಿಗೆ ದೊಡ್ಡಪಡೆ ಗಟ್ಟಿಯಾಗಿ ನಿಂತಂತಾಗಿದೆ.
ನಿವ್ರತ್ತ ಐಎಎಸ್ ಅಧಿಕಾರಿ ಕಲ್ಲೋಳ್ಕರ ಜಿಲ್ಲೆಯ ಜನೆತೆ ಜೊತೆ ಕಷ್ಟ ಸುಖ ಹಂಚಿಕೊಳ್ಳಲು ಇದೊಂದು ಗೋಲ್ಡನ್ ಅಪಾರ್ಚುನಿಟಿ ಆಗಲಿದೆ. ಪ್ರಭಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಈಗಾಗಲೇ, ನಡುಕ ಹುಟ್ಟಿದಂತಾಗಿದೆ.
ದಕ್ಷ ಅಧಿಕಾರಿ ಲೋಕಸಭಾ ಚುನಾವಣೆ ರಣಕಣಕ್ಕೆ ಮುಂದಾಗಿರುವುದು, ಕಾರ್ಯಕರ್ತರಲ್ಲಿಯು ಕೂಡಾ ಮತ್ತಷ್ಟು ಹುಮ್ಮಸ್ಸು ಮೂಡಿಸುತ್ತಿದೆ.
ವರದಿ:- ಚಂದ್ರು ತಳವಾರ ಟಿವಿ3 ನ್ಯೂಸ್ ಕನ್ನಡ ಚಿಕ್ಕೋಡಿ