ಚಿಕ್ಕೋಡಿ:(criminal activities in the garava Lodge) ಚಟುವಟಿಕೆಗಳ ಗೂಡಾದ ಕಡಕಲಾಟ್ ಗಾರವಾ ಲಾಡ್ಜ್
ಚಿಕ್ಕೋಡಿ : ತಾಲೂಕಿನ ಖಡಕಲಾಟ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಬರವ ಚಿಕ್ಕಲವಾಳ ಗ್ರಾಮದ ಗಾರವಾ ಲಾಡ್ಜ್ ನಲ್ಲಿ ರಾಜಾರೋಷವಾಗಿ ನಡೆದಿರುವ ಆಕ್ರಮ ಚಟುವಟಿಕೆಗಳು!
ಹೌದು ಲಾಡ್ಜ್ ಅಧಿಕೃತನಾ ಅನಧಿಕೃತನಾ? ಎನ್ನುವದೇ ಬಾರಿ ಸಂಶಯಕ್ಕೆ ಕಾರಣವಾಗಿದೆ. ಏಕೆಂದರೆ ಕರ್ನಾಟಕದ ಯಾವುದೇ ಮೂಲೆಯಲ್ಲಿ ಲಾಡ್ಜ ನಡೆಸಬೇಕೆಂದರೆ ಸರ್ಕಾರದ ನಿಯಮಾನುಸಾರ ಪರವಾಣಿಗೆ ಪಡೆದಿರಬೇಕು. ಆದರೆ ಈ ಲಾಡ್ಜ ಮಾಲಿಕನ ಬಳಿ ಕೇವಲ ಸ್ಥಳೀಯ ಪಂಚಾಯತಿಯ ಉದ್ಯೋಗ ಲೈಸೆನ್ಸ್ ಬಿಟ್ಟರೆ ಬೇರೆ ಯಾವ ರೀತಿಯ ಪರವಾಣಿಗೆಗಳು ಇಲ್ಲದಂತೆ ಮೆಲ್ನೊಟಕ್ಕೆ ಕಾಣುತ್ತಿದೆ.
ಜೊತೆಗೆ ಕೇವಲ ೩೦೦ ರೂಪಾಯಿಗೆ ಹಗಲು ಪೂರ್ತಿ ಮತ್ತೆ ೪೦೦ ರೂಪಾಯಿಗೆ ರಾತ್ರಿಪೂರ್ತಿ ರೂಮ್ ನೀಡುತ್ತೆವೆ ಎಂದು ಚಿಕ್ಕೋಡಿ ಭಾಗದಲ್ಲಿ ಬಹಳ ಖ್ಯಾತಿ ಹೊಂದಿದ ಗಾರವಾ ಲಾಡ್ಜ್, ಸೊಶಿಯಲ್ ಮಿಡಿಯಾ ವ್ಲಾಗರ್ ಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದುಡ್ಡು ಕೊಟ್ಟು ಪ್ರಮೊಶನ್ ಕೂಡ ಮಾಡಿದ್ದಾನೆ ಮಾಲೀಕ.
ಭರತ ಪಾಟೀಲ ಈತನೇ, ಗರವಾ ಲಾಡ್ಜ್ ನ ಮಾಲೀಕನಾಗಿರುತ್ತಾನೆ.
ಚಿಕ್ಕೋಡಿ ನಿಪ್ಪಾಣಿ ಸೇರಿದಂತೆ, ಗ್ರಾಮೀಣ ಪ್ರದೇಶಗಳಿಂದಲೂ ಕೂಡ ಸಾಕಷ್ಟು ಪ್ರೇಮಿಗಳು ಹಾಗು ಕಾಲೇಜು ವಿಧ್ಯಾರ್ಥಿಗಳು ಈ ಲಾಡ್ಜನ್ನು ಅನೈತಿಕ ಚಟುವಟಿಕೆಗಳನ್ನು ನಡೆಸುವ ಅಡ್ಡವನ್ನಾಗಿ ಮಾಡಿಕೊಂಡು ಈ ಲಾಡ್ಜನ್ನು ಬಳಸಿಕೊಳ್ಳುತ್ತಿದ್ದಾರೆ. ಇದೆಲ್ಲದರ ಜೊತೆಗೆ ಸಾಲದ್ದಕ್ಕೆ ಇದೇ ಲಾಡ್ಜನಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಕೂಡ ಎಗ್ಗಿಲ್ಲದೆ ಸಾಗಿದೆ. ಇದರಿಂದ ಅಲ್ಲಿನ ಸ್ಥಳಿಯರು ರೋಷಿ ಹೋಗಿದ್ದಾರೆ.
ಸಾರಾಯಿ ಮಾರಾಟಕ್ಕು ಕೂಡ ಯಾವುದೇ ಪರವಾಣಿಗೆ ಇಲ್ಲ. ಆದರೆ ಅಬಕಾರಿ ಇಲಾಖೆಯವರು ಮೌನ ವಹಿಸಿರುವುದು ಯಾಕೆ? ಹಾಗಾದ್ರೆ ಪೋಲಿಸ್ ಹಾಗೂ ಅಬಕಾರಿ ಇಲಾಖೆಯವರ ಗಮನಕ್ಕೆ ಇಲ್ವಾ ಈ ಆಕ್ರಮ ಚಟುವಟಿಕೆಗಳು?
ಇದನ್ನೆಲ್ಲ ತಿಳಿದ ನಮ್ಮ ರಹಸ್ಯ ಕಾರ್ಯಾಚರಣೆ ತಂಡ ಗಾರವಾ ಲಾಡ್ಜಗೆ ತೆರಳಿ ಅಲ್ಲಿ ನಡೆಯುವ ಅಕ್ರಮಗಳನ್ನು ವಿಡಿಯೋ ಸಾಕ್ಷಿ ಸಮೇತ ಸೆರೆ ಹಿಡಿದು ಸಂಬಂಧಪಟ್ಟ ಪೋಲಿಸ್ ಠಾಣೆಗೆ ತೆರಳಿ ಮಾಹಿತಿ ನೀಡಿದಾಗ ನಾವು ಈಗಾಗಲೇ ಮೂರು ನಾಲ್ಕು ಬಾರಿ ಆತನ ವಿರುದ್ಧ ನಾವು ಪ್ರಕರಣ ದಾಖಲಿಸಿದ್ದೆವೆ ಎಂದು ಹಾರಿಕೆ ಉತ್ತರ ಕೊಟ್ಟಿರುತ್ತಾರೆ.
ಇಷ್ಟು ಬಾರಿ ಈತನ ಮೇಲೆ ಕೇಸ ದಾಖಲಾದರೂ ಕೂಡ ಅದೇ ಜಾಗದಲ್ಲಿ ಈತ ಮತ್ತೆ ಅನಧಿಕೃತವಾಗಿ ಇವೆಲ್ಲ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಇದರ ಹಿಂದೆ ಎಷ್ಟು ಕಾಣದ ಕೈಗಳು ಕೆಲಸ ಮಾಡುತ್ತಿವೆ ಯಾರೂ ಬಲ್ಲರು ? ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ನಡೆಯುವ ಅನಾಚಾರಗಳನ್ನು, ತಡೆದು ಗಾರವಾ ಲಾಡ್ಜ್ ಅನ್ನು ಸಂಪೂರ್ಣವಾಗಿ ಬಂದ ಮಾಡಿಸಿ ಮಾಲೀಕನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇನ್ನು ಗಾರವಾ ಲಾಡ್ಜ್ ನ ಬೆನ್ನಿಗೆ ನಿಂತು ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಅವುರುಗಳ ಮುಖವಾಡಗಳನ್ನು ಮುಂದಿನ ಸಂಚಿಕೆಯಲ್ಲಿ ಕಳಚಲಿದ್ದೇವೆ ನಿರೀಕ್ಷಿಸಿ!!
ಜರ್ನಲಿಸ್ಟ್: ಚಂದ್ರು ತಳವಾರ್


