ಚಿಕ್ಕೋಡಿ ನೀತಿ ಸಂಹಿತೆ ಜಾರಿಯಾದರು; ನಾಮ ಫಲಕ ತೆರವುಗೊಳಿಸದ ಕೇರ್ಲೆಸ್ ಪಿಡಿಓ…!
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಪಂಚಾಯಿತಿ ಬಸ್ ತಂಗುಧಾನದ ಮೇಲೆ ಕಂಡು ಬಂದ ದೃಶ್ಯಾವಳಿ ಇದು.
ನೀತಿ ಸಂಹಿತೆ ಜಾರಿ ಆಗಿ ನಾಲ್ಕು ದಿನ ಕಳೆದರೂ, ಕಂಡರು ಕಂಡರಿಯದಂತೆ ನಡೆ ಅನುಸರಿಸಿದರಾ ಅಧಿಕಾರಿಗಳು..?
ಲೊಕಸಭಾ ಚುನಾವಣಾ ಹಿನ್ನೆಲೆ ಈಗಾಗಲೇ ಸಂಹಿತೆ ಹಾಗೂ ಕಾನೂನು ಉಲ್ಲಂಘನೆ ಆಗಬಾರದೆಂದು ಹಲವು ಅಧಿಕಾರಿಗಳನ್ನ ಚುನಾವಣಾ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿದೆ ಆದರೆ ಇಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದ್ದರೂ ಅಧಿಕಾಗಳು ಕ್ಯಾರೆ ಎನ್ನುತ್ತಿಲ್ಲ.
ಹಾಗಾಗಿ ನಮಗೆ ತಿಳಿಯುತ್ತಿದೆ ಬಹುಶಃ ಇಲ್ಲಿ ಎಮ್ ಪಿ ಚುನಾವಣಾ ನೀತಿ ಸಂಹಿತೆ ಅನ್ವಹಿಸುವದಿಲ್ಲವೆಂದು ತಿಳಿದು ಬರುತ್ತಿದೆ.
ರಾರಾಜಿಸುತ್ತಿರುವ ನಾಮ ಫಲಕಗಳು BJP ಪಾರ್ಟಿಗೆ ಸೇರಿದ ನಾಮ ಫಲಕ ಎಂದು ಮಾಹಿತಿ ಲಭ್ಯವಾಗಿದೆ.
ಅಭ್ಯರ್ಥಿಗಳ ಬಾವಚಿತ್ರ ಸ್ಟೆಟಸ್ ಹಾಕಿದರೆ ಕಠಿಣ ಕಾನೂನು ಕ್ರಮ ಬಸ್ ಸ್ಟ್ಯಾಂಡ್ ಮೇಲೆ ತೂರಾಡಿ ಹಾರಾಡುವ ಭಾವಚಿತ್ರ ತೆರವುಗೊಳಿಸದೆ ಇರುವದು ಪಿಡಿಒ ಕರ್ತವ್ಯ ನಿರ್ಲಕ್ಷ್ಯ
ಹಾಗಾದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ರಾ.
ವಾಟ್ಸ್ಯಾಪ ಪೆಸಬುಕ್ ಇನ್ಸ್ಟಾಗ್ರಾಂ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳ ಮೇಲೆ ನೀಗಾ ಇಟ್ಟಿರುವ ಚುನಾವಣಾ ಇಲಾಖೆಗೆ ಇಷ್ಟೊಂದು ದೊಡ್ಡ ಬೊರ್ಡ ಕಾಣಲಿಲ್ಲವೆ…?
ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದ್ದರಿಂದ ಚುನಾವಣಾ ಅಧಿಕಾರಿಗಳು ತಕ್ಷಣ ಎಚ್ಚೆತ್ತು, ತಪ್ಪಿತಸ್ಥ ಅಭಿವೃದ್ಧಿ ಅಧಿಕಾರಿಯ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು, ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ


