ಸಂವಿಧಾನ ಪಿತಾಮಹ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಇಡದೆ ಗಣರಾಜ್ಯೋತ್ಸವ ಆಚರಣೆ ಮಾಡಿದ ಬೀಡಿ ಪಿ ಕೆ ಪಿ ಎಸ್
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೀಡಿ ಗ್ರಾಮದ pkps ಸೊಸೈಟಿಯಲ್ಲಿ ಗಣರಾಜ್ಯೋತ್ಸವ ಆಚರಣೆ ಮಾಡುವ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಇಡದೆ ಮಹಾತ್ಮ ಗಾಂಧೀಜಿ ಫೋಟೋ ಒಂದನ್ನೆ ಇಟ್ಟು ಧ್ವಜಾರೋಹಣ ಮಾಡಿರುತ್ತಾರೆ.
ತಾವು ಆಡಿದ್ದೆ ಆಟ ಮಾಡಿದ್ದೆ ಪಾಠ ಎಂಬಂತೆ, ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಇಡದೆ, ಬಾಬಾ ಸಾಹೇಬರ ಅಭಿಮಾನಿಗಳಿಗೆ ನೋವನ್ನುಂಟು ಮಾಡಿರುತ್ತಾರೆ.
ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕಾಗಿ ಶ್ರಮಿಸಿದ ಮಹನೀಯರ ಫೋಟೋ ಇಡಬೇಕಂತ ಸರ್ಕಾರದ ನಿಯಮ ಇದ್ದರೂ ಕೂಡ ಅದನ್ನು ಕೆಲವು ಬೆರಿಕೆಗಳು ಇದುವರೆಗೂ ಕೈಗೊಂಡು ನಡೆಯದೇ ಬಾಬಾ ಸಾಹೇಬರ ಫೋಟೋ ಇಡುವುದು ಎಂದರೆ ಅಸಡ್ಡೆಯಾಗಿ ತಿಳಿದುರುತ್ತಾರೆ.
ಇದು ಸರ್ಕಾರದ ಗಮನಕ್ಕೆ ಬರುತ್ತಿಲ್ವಾ ? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಸರಕಾರದ ಆದೇಶಗಳಿಗೆ ಕಿಮ್ಮತ ಕೊಡದೇ ಉದ್ದಟತನ ಮೆರೆಯುತ್ತಿರುವ ಇಂತಹ pkps ಸೊಸೈಟಿಗಳ ಮೇಲೆ ತಕ್ಷಣ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಮೇಲಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಇವುರುಗಳ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಜ್ಯೋತಿಬಾ ಬೆಂಡಿಗೇರಿ ಅಧಿಕಾರಿಗಳನ್ನು ಎಚ್ಚರಿಸಿದರು.