ಕಾಂಗ್ರೆಸ್ ಕಾರ್ಮಿಕ ಘಟಕದ ನಗರ ಅಧ್ಯಕ್ಷೆಯಾಗಿ ಆಯ್ಕೆಯಾದ ಭಾರತಿ ಢವಳಿಗೆ ಸನ್ಮಾನ
ಬೆಳಗಾವಿ: ಕೆಪಿಸಿಸಿ ಕಾರ್ಮಿಕ ಘಟಕದ ನಗರದ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ಸಚಿವ ಸತೀಶ ಜಾರಕಿಹೊಳಿಯವರ ಕಾರ್ಯಕರ್ತೆಯಾಗಿರುವ
ಭಾರತಿ ಡವಳಿಯವರನ್ನ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಸತ್ಕರಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀಮತಿ.ಭಾರತಿ ಪಾಟೀಲ್ ಭಾರತಿ ಡವಳಿಯವರು ಕಳೆದ ಏಳೆಂಟು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ದುಡಿಯುತ್ತಾ ಬಂದಿದ್ದು ಅವರ ನಿಸ್ವಾರ್ಥ ಸೇವೆಯನ್ನ ಸಚಿವರಾಗಿರುವ ಸತೀಶಣ್ಣಾ ಜಾರಕಿಹೊಳಿ ಹಾಗೂ ಶಾಸಕ ರಾಜು ಸೇಠ್ ಅವರಿಗೆ ಈ ಜವಾಬ್ದಾರಿ ಕೊಟ್ಟಿದ್ದು ಅದನ್ನ ಸಮರ್ಪಕವಾಗಿ ನೆರವೇರಿಸಕೊಂಡು ಹೋಗಲಿ ಅದಕ್ಕೆ ನಮ್ಮ ಮಹಿಳಾ ಘಟಕದ ಪೂರ್ಣ ಬೆಂಬಲ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಲತಾ ಮಾನೆ,ಮಚ್ಚೆ ಗ್ರಾಪಂ ಸದಸ್ಯೆ ಕಸ್ತೂರಿ ಕೊಲಕಾರ,ರೇಣುಕಾ ಹೊಸೂರಕರ,ಶಮೀನಾ,ಸವಿತಾ ಸಾತಪುತೆ,ಪುರ್ಧೊಸ,ದಿಲದಾರ,ಅಣ್ಣಪೂರ್ಣ ಮತ್ತು ಇತರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.