ಮೂಡಲಗಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಬೇಕು ಬಿಇಓ ಮನ್ನಿಕೆರಿ
ಘಟಪ್ರಭಾ: ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಹೆಚ್ಚಿನ ಜಾಗೃತಿ ವಹಿಸುವುದು ಇಂದಿನ ಅಗತ್ಯವಾಗಿದ್ದು, ವಿಜ್ಞಾನ ಪ್ರದರ್ಶನದ ಮೂಲಕ ತುಂಬಾ ಒಳ್ಳೆಯದಾಗಿ ಮಕ್ಕಳಿಗೆ ವೈಜ್ಯಾನಿಕ ಮನೋಭಾವನೆಯನ್ನು ಶಿಕ್ಷಕರು ಮೂಡಿಸುತ್ತಿದ್ದು ಈ ರೀತಿ ಮಾಡುವುದರಿಂದ ಮಕ್ಕಳಿಗೆ ವಿಜ್ಞಾನದ ಮೇಲೆ ಇನ್ನು ಆಸಕ್ತಿ ಹೆಚ್ಚಿಸುತ್ತದೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಸಿ. ಮನ್ನಿಕೆರಿ ಹೇಳಿದರು.
ಅವರು ಇತ್ತೀಚೆಗೆ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ಮತ್ತು ಸಂತೆ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ಮಕ್ಕಳು ಉತ್ತಮ ಕಲಿಕೆ ಹಾಗೂ ಅಭ್ಯಾಸವನ್ನು ಮಾಡುವುದರಿಂದ ಸಮಾಜಮುಖಿ ಚಿಂತನೆಗಳನ್ನು ಹೊಂದಬಹುದು, ಶಿಕ್ಷಣದಿಂದ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಎಂ.ಬಿ ಮಲಬನ್ನವರ ಮಾತನಾಡಿ. ಮಕ್ಕಳ್ಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಥಿತಿಯಾಗಿ ಡಾ| ವ್ಹಿ. ಬಿ. ನಾಯಿಕವಾಡಿ, ಡಾ| ಎಮ್.ಎಮ್. ಹೂಗಾರ, ಪಟ್ಟಣ ಮುಖಂಡರಾದ ಡಿ.ಎಮ್. ದಳವಾಯಿ, ಜಾಮಿಯಾ ಮಸೀದಿ ಅಧ್ಯಕ್ಷರಾದ ಶೌಕತ ಕಬ್ಬೂರ, ಹಿರಿಯರಾದ ಹಜರತ ಕಬ್ಬೂರ, ಮದಾರಸಾಬ ನಾಲಬಂದ, ಹಿರಿಯರಾದ ಗೌಸಖಾನ ಕಿತ್ತೂರಕರ, ನೂರ ಪೀರಜಾದೆ, ಮೋದಿನಸಾಬ ಕಬ್ಬೂರ, ಶರೀಫ ಕಬ್ಬೂರ, ಪ.ಪಂ ಮಾಜಿ ಸದಸ್ಯರಾದ ಸಲೀಮ ಕಬ್ಬೂರ, ಇಮ್ರಾನ ಬಟಕುರ್ಕಿ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ದಿಲೀಪ್ ಕಲಾರಕೊಪ್ಪ, ಉರ್ದು ಸಿ.ಆರ್.ಪಿ ಆರೀಪಹುಸೇನ್ ಟೋಪಿಚಾಂದ, ಶಿಕ್ಷಕರ ಸಂಘದ ಅಧ್ಯಕ್ಷರಾದ ಎಮ್.ಜಿ. ಮಾವಿನಗಿಡದ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಎಮ್.ಎ.ಸಿದ್ದೀಕಿ, ಶಿಕ್ಷಕರಾದ ಶಾನವಾಜ ದಬಾಡಿ, ಮೀರಾಸಾಬ ಮುಲ್ಲಾ, ಜಿ.ಎ.ಬಾಗೆ, ಮಹಮ್ಮದಶಫೀಕ ಜಮಖಂಡಿ, ನಿವೃತ್ತ ಪ್ರಾಚಾರ್ಯರಾದ ಸಿ.ಆರ್. ಗುಡಸಿ, ಎಸ್.ಡಿಎಮ್.ಸಿ ಅಧ್ಯಕ್ಷ ಅಲ್ತಾಫ ಉಸ್ತಾದ, ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರು, ಶಾಲೆಯ ಪ್ರಧಾನ ಗುರುಗಳು ಹಾಗೂ ಸಹ ಶಿಕ್ಷಕರು, ವಿಧ್ಯಾರ್ಥಿಗಳು, ಸಿಬ್ಬಂದಿ ವರ್ಗ ಹಾಗೂ ಘಟಪ್ರಭಾದ ಸುತ್ತಮುತ್ತಲಿನ ಎಲ್ಲಾ ಶಾಲೆಗಳ ಪ್ರದಾನ ಗುರುಗಳು ಹಾಗೂ ಶಿಕ್ಷಕರು ಇದ್ದರು.
ಜರ್ನಲಿಸ್ಟ್: ಚಂದ್ರು ತಳವಾರ