ಬೆಂಡವಾಡ: ಮಹಾದೇವನ ಕಾಡಿ ಕೆಳಗಿಳಿಸೊದ, ಪೈಜಾಮ್ ಗೌಡ್ಯಾ ಅಧ್ಯಕ್ಷ ಆಗಾವ.! ಯಪ್ಪೊ ಕೇಳ್ರಿ ಕಥೆ..ಪಂಚಾಯತಿಗಿಲ್ಲ ಸಮರ್ಥ ನಾಯಕ,ಒಂದ ದಿನವಾದ್ರೂ ಅಧ್ಯಕ್ಷ ಆಗ್ತಿನಿ ಅಂತಾ ಇದ್ದ; ಅದ್ಯಕ್ಷನ ಕೆಳಗಿಸಲು ಸರಮಾಲೆಗಳ ಪ್ರಕರಣ ತಲೆ ಪಟ್ಟಿ ಕಟ್ಟಿಕೊಂಡ ಖತರ್ನಾಕ ಗಿರಾಕಿ ಒಂದು ಪಂಚಾಯತ ಆಳಲು ಅವಕಾಶ ಸಿಗದೆ.
ಗೊಳಾಡಿ ಪೊನ ಮ್ಯಾಲ ಫೊನ್ ಮಾಡಿ ಮಹಾದೇವ ಲಕ್ಷ್ಮೆಶ್ವರನಿಗೆ ಬಿಗಿ ಹಚ್ಚಿದ್ದಾನೆ. ಈ ಭೂಪ; ಏನಿದು…! ಪಂಚಾಯತ ಪೈಟನಲ್ಲಿ ಸಮರ್ಥ ನಾಯಕನನ್ನ ಅದ್ಯಕ್ಷ ಮಾಡಿದ್ದರು.
ಆದರೆ ಇದನ್ನು ನೊಡಲಾಗದೆ, ಬಸಗೌಡ ನಾಟಕದಲ್ಲಿನ ಖಳನಾಯಕನಂತೆ ನೀಜ ಜಿವನದಲ್ಲೂ ಪಾತ್ರ ಮಾಡುತ್ತಿದ್ದಾನೆ.
ಅದ್ಯಕ್ಷ ಆಗಿಯೆ ತಿರ್ತಿನಿ ಎಂದು ಖಳನಾಯಕನ ಹಾಗೇ ಪಣ ತೊಟ್ಟಿದ್ದಾನೆ.
ಆದರೆ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕೊಡದೆ ಗೂಂಡಾಗಿರಿ,ರಾಜಕೀಯ ಮಾಡ್ಲಿಕ್ಕೆ ಮುಂದಾಗಿದ್ದಾನೆ.ಈ ಬಿಳಿ ಪೈಜಾಮ ಗೌಡ್ಯಾ.! ಆಕಳ ಮೋತಿ ಹುಲಿ ಹಂಗ, ಇವನ ವರ್ತನೆ ನೊಡಾಕ ಆಕಳ ಆದರೆ ಒಳಗ ಇರೊದೆಲ್ಲಾ ಹುಲಿಯ ವೇಷಧಾರಿ…
ಅಯ್ಯೋ ಪಾಪ ಪುಣ್ಯ ಸ್ವಾಭಿಮಾನ ಏನು ಇಲ್ಲವೆ ಈ ಕಿರಾತಕನಿಗೆ ಒಳ್ಳೆಯವರಿಗೆ ಆಡಳಿತ ಮಾಡಲು ಬಿಡುತ್ತಿಲ್ಲ ಈ ದ್ವಿಮುಖ ಗವಾಕ್ಷಿ….ಕೌರವರ ಶಕುನಿಯಂತೆ ಕೌಡಿ ಒಗೆಯುವದೆ ಇವನ ಕೆಲಸವಾಗಿದೆ.
ಕೆಲವು ದುರ್ಬಲ ವರ್ಗದ ಹೆಣ್ಣು ಮಕ್ಕಳಿಗೆ ಮನೆ ಕಟ್ಟಿಸಿ ಕೊಡುತ್ತೇನೆ ಹಂಗ್ ಮಾಡುತ್ತೇನೆ,ಹಿಂಗ ಮಾಡುತ್ತೇನೆ ಅಂತ ಹರಿಕಥೆ ಹೇಳಿ ಆಮಿಷ ತೋರಿಸಿ, ಸುಳ್ಳು ಕೇಸ್ ದಾಖಲಿಸಲು ಪ್ರಚೋದನೆ ನೀಡುತ್ತಾನೆ.ಯಾರೇನ್ ಹೇಳಿದರು ಕೇಳಲ್ಲ ಈ ಗೌಡ.
ದಿನಾಲು ಫೋನ್ ಹಚ್ಚಿ ಕಾಡಿ ಮಹದೇವ್ ಲಕ್ಷ್ಮೇಶ್ವರ ಎಂಬ ಅಧ್ಯಕ್ಷರನ್ನು ಈಗಾಗಲೇ ರಾಜೀನಾಮೆ ಕೊಡಿಸಿದ್ದಾನೆ.
ಒಂದು ದಿನವಾದರೂ ಅಧ್ಯಕ್ಷನಾಗಬೇಕೆಂಬ ದುರಾಸೆಯಿಂದ ದಿನಬೆಳಗಾದರೂ ಫೋನ್ ಮಾಡಿ ಅಧ್ಯಕ್ಷನಿಗೆ ಮಾನಸಿಕ ಒತ್ತಡ ನೀಡಿ ಬೇಜಾರು ಮಾಡಿರುತ್ತಾನೆ.
ಇದ್ದ ಅದ್ಯಕ್ಷನನ್ನ ಕೆಳಗಿಳಿಸಿ. ಒಂದು ದಿನವಾದ್ರೂ ಅದ್ಯಕ್ಷನಾಗಬೇಕೆಂದು ದುರಾಸೆ ಇಟ್ಟು, ನಿದ್ದೆ ಬಿಟ್ಟು ಗಣ ಗಣ ತಿರುಗುತ್ತಿರುವ ಬಸನಗೌಡ ಪಾಟೀಲ.
ಹೌದು ವೀಕ್ಷಕರೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಏಳು ತಿಂಗಳುಗಳಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಮಹಾದೇವ ಲಕ್ಷ್ಮೇಶ್ವರ ರನ್ನು ಇನ್ನು ಅಧಿಕಾರಾವಧಿ ಇರುವಾಗಲೇ
ಪಟ್ಟು ಬಿಡದೆ ಬೆನ್ನಿಗೆ ಬಿದ್ದ ಬೇತಾಳನಂತೆ ಒಂದು ದಿನವಾದರು ಅಧ್ಯಕ್ಷಪಟ್ಟ ಏರ ಬೇಕೆಂಬ ದುರಾಸೆಯಿಂದ ಜೋಡಟ್ಟಿಯ ಬಸನಗೌಡ ಪಾಟೀಲ ತಿರುಕನ ಕನಸು ಕಾಣುತ್ತಿದ್ದಾನೆ.
ಬಸ ಗೌಡನ ಮೇಲೆ ಈಗಾಗಲೆ ಜಾತಿ ನಿಂದನೆ,ಗುಂಡಾಗಿರಿ ಕ್ರಿಮಿನಲ್ ಕೇಸ್ ಕೂಡ ಇದ್ದು ಪ್ರಕರಣ ತನಿಕಾ ಹಂತದಲ್ಲಿದೆ.
ಕಳಪೆ ಕಾಮಗಾರಿ ಅಥವಾ ಇವರ ದೋ ನಂಬರ ದಂಧೆ ಕುರಿತು ಯಾರಾದರೂ ಪ್ರಶ್ನಿಸಿದರೆ ಅಂತವರ ಮೇಲೆ ಈತನ ಚೇಳ ಹೆಂಗಸರನ್ನು ಚೂ ಬಿಟ್ಟು ಸುಳ್ಳು ಕೇಸ್ ದಾಖಲಿಸಲು ಪ್ರಚೋದನೆ ನೀಡುತ್ತಾನೆ ಈ ಆಸಾಮಿ ಗೌಡ… ಅದು ಏನೇ ಆಗಿರಲಿ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಬೆಂಡವಾಡ ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಹರಿಕಾರಣ ಆಯ್ಕೆಯಾಗಲಿ, ಎನ್ನುವುದು ನಮ್ಮ ಟಿವಿ3 ಕನ್ನಡ ಕನ್ನಡ ನ್ಯೂಸ್ ಚಾನೆಲ್ ನ ಆಶಯವಾಗಿದೆ.. ವರದಿ: ಚಂದ್ರು ತಳವಾರ


