ಬೆಳಗಾವಿ: ಮೊನ್ನೆ ನಡೆದ ಎಸ್ಪಿ ಪೊನ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸುರಿಮಳೆಗಳನ್ನು ಹಂಚಿಕೊಂಡ ಬೆಳಗಾವಿ ಸಾರ್ವಜನಿಕರು.ಹೌದು ಬೆಳಗಾವಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಜಿಲ್ಲೆಯ ಸಮಸ್ಯೆಗಳನ್ನು ತಿಳೊದುಕೊಂಡು ಪರಿಹಾರ ಕಂಡುಕೊಳ್ಳಲು ಬೆಳಗಾವಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಸಂಜೀವ ಪಾಟೀಲರು ನೂತನವಾಗಿ ಪ್ರಾರಂಭ ಮಾಡಿದ ಪೊನ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿಗಳ ಜೊತೆ ಹಂಚಿಕೊಂಡರು ಈ ಸಂದರ್ಭದಲ್ಲಿ ಎಲ್ಲಾ ತಾಲೂಕಿನ ಸಾರ್ವಜನಿಕರು ಸರಾಯಿ ಮಾರುವದು ಮಟ್ಕಾ ಹಾವಳಿ ಹೀಗೆ ಹತ್ತು ಹಲವು ಸಮಸ್ಯೆಗಳನ್ನ ಹೇಳಿದರು.ಇನ್ನೂ ವಿಶೆಷವಾಗಿ ಚಿಕ್ಕೋಡಿ ಗಾಂಧಿ ನಗರದಿಂದ ಕರೆ ಮಾಡಿ ಇಸ್ಪಿಟ ಆಟ ಬಲು ಜೋರಾಗಿ ನಡೆದಿದೆ ಚಿಕ್ಕೋಡಿ ಯಲ್ಲಿ ಅಕ್ರಮ ಇಸ್ಫಿಟ್ ಅಡ್ಡ…ಗಾಂಧಿ ನಗರದ ಮಾರ್ಕೆಟನ ಹತ್ತಿರ…
ಪ್ರವೀಣ ಬ್ಯಾಕುಡೆ ಎಂಬ ವ್ಯಕ್ತಿ ಇಸ್ಪಿಟ ಆಟ ಆಡಿಸುತ್ತಾನೆ.. ಈ ಆಟದಿಂದ ಚಿಕ್ಕೋಡಿಯ ಭೀಮ ನಗರ,ಜಾರಿ ಗಲ್ಲಿ,ಅಲ್ಲಿನ ಸುಮಾರು ಬಡಕುಟುಂಬ ಗಳು ತತ್ತರಿಸಿ ಹೋಗಿದ್ದು,ಇದಕ್ಕೆ ಚಿಕ್ಕೋಡಿ ಪೊಲೀಸ ಠಾಣೆ ಯ ಟೌನ್ ಡ್ಯೂಟಿ ಮಾಡುವ ರಾಯಪ್ಪ ಕರಿಗಾರ ಇವನು ಮೇಲಧಿಕಾರಿಗಳ ಗಮನಕ್ಕೆ ಬಾರದ ಹಾಗೆ ಸಹಕರಿಸುತ್ತಿದ್ದಾನೆ.. ದಯವಿಟ್ಟು ಕ್ರಮ ತೆಗೆದುಕೊಳ್ಳಿ ಎಂದು ಪೊನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ್ದರು.ಇನ್ನೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಆ ಅಡ್ಡೆ ಮೇಲೆ ದಾಳಿ ಮಾಡುತ್ತೆವೆ ಮತ್ತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೆವೆಂದು ಹೇಳಿದರು.ಇನ್ನೂ ಅನೇಕ ಸಮಸ್ಯೆಗಳಿಗೆ ಕಡಿವಾಣ ಹಾಕಲು ಎಸ್ಪಿ ಸಂಜೀವ ಪಾಟೀಲರು ಅಕ್ರಮ ಮಾಡುವವರಿಗೆ ಸಿಂಹಸ್ವಪ್ನರಾಗಿದ್ದಾರೆ. ಈಗಾಗಲೇ ಸಾಕಷ್ಟು ಅಕ್ರಮ ಚಟುವಟಿಕೆಗಳನ್ನು ಮಾಡುವವರು ತಂಡಾ ಹೊಡೆದು ಅಕ್ರಮಕ್ಕೆ ಹಾಗೂ ಕೆಲ ಧಾಬಾಗಳಲ್ಲಿ ಸರಾಯಿ ಮಾರುವವರು ಎಸ್ಪಿ ಪೊನ್ ಇನ್ ಕಾರ್ಯಕ್ರಮಕ್ಕೆ ಹೆದರಿ ಬಂದ ಮಾಡಿದ್ದಾರೆ ಸಾರ್ವಜನಿಕರು ಎಸ್ಪಿ ಸಾಹೇಬ್ರಿಗೆ ಧನ್ಯವಾದಗಳನ್ನ ತಿಳಿಸಿ ಜನರು ಶ್ಲಾಘಿಸಿದ್ದಾರೆ.ವರದಿ:-ಚಂದ್ರು ತಳವಾರ
ಬೆಳಗಾವಿ ಮೊನ್ನೆ ನಡೆದ ಎಸ್ಪಿ ಪೊನ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸುರಿಮಳೆಗಳನ್ನು ಹಂಚಿಕೊಂಡ ಬೆಳಗಾವಿ ಸಾರ್ವಜನಿಕರು
Leave a comment
Leave a comment


