ಬೆಳಗಾವಿ: ಅಕ್ರಮ ಅಕ್ಕಿ ಚೋರ ವಿಶ್ವಜಿತ್ ಪಾಟೀಲನ; ಲಾರಿ ಜಪ್ತಿ: ಹಿಂದಿದೆಯಾ ಸ್ಥಳೀಯ ಜನಪ್ರತಿನಿಧಿಗಳ ಕೈವಾಡ ?
ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ರೀತಿಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಈ ಹಿಂದೆ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ಮಾಡಲು ಕೊಂಡ್ಯೊಯುವಾಗ ಸಿಜ್ ಮಾಡಲಾಗಿತ್ತು. ಬಡವರಿಗೆ ವಿತರಣೆ ಆಗಬೇಕಾಗಿರುವ ಪಡಿತರ ಅಕ್ಕಿಯನ್ನ ಹಗಲುಗಳ್ಳ ವಿಶ್ವಜೀತ ಪಾಟೀಲ ಎಂಬಾತ ಬಡವರಿಂದ ಖರೀದಿಸಿ ಹೊರರಾಜ್ಯಕ್ಕೆ ರಾಜಾರೋಷವಾಗಿ ಮಾರಾಟ ಮಾಡಿ ಕೋಟ್ಯಾಂತರ ರೂ. ಕೊಳ್ಳೆ ಹೊಡೆಯುವ ಕೆಲಸ ಇಂದಿಗೂ ನಿಲ್ಲುತ್ತಿಲ್ಲ.
ಬೆಳಗಾವಿ, ಏಪ್ರಿಲ್ 09: ರಾಜ್ಯದಲ್ಲಿ ಅನ್ನಭಾಗ್ಯ ಅಕ್ಕಿ (rice) ಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಜಟಾಪಟಿ ನಡಿತಾನೇ ಇದೆ. ಆದರೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ದಂಧೆಗೆ ಮಾತ್ರ ಇದುವರೆಗೆ ಬ್ರೇಕ್ ಬಿಳುತ್ತಿಲ್ಲ.
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿ KA22 A8564 ಸಂಖ್ಯೆಯ ಟ್ರಕ್ ಒಂದರಲ್ಲಿ ವಿಶ್ವಜಿತ್ ಪಾಟೀಲ್ ಎಂಬ ದಂದೆಕೊರನು ಅಕ್ರವಾಗಿ ಸಂಗ್ರಹಿಸಿರುವ ಪಡಿತರ ಅಕ್ಕಿಯನ್ನು ಸಾಗಿಸುತ್ತಿದ್ದನು.
ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಖುದ್ದು ಸಾಮಾಜಿಕ ಹೋರಾಟಗಾರ ಜಾನ್ಸ್ ಕುಮಾರ್ ಕರಿಯಪ್ಪಗೋಳ, ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷರು ಚುನಪ್ಪಾ ಪೂಜಾರಿ ಪೊಲೀಸರಿಗೆ ಒಪ್ಪಿಸಿದಂತಹ ಘಟನೆ ನಗರದ ಬಾಕ್ಸೈಟ್ ರೋಡ ಬಳಿ ನಡೆದಿದೆ. ಜಿಲ್ಲೆಯಾದ್ಯಂತ ಬಡವರ ಹೊಟ್ಟೆ ಸೇರಬೇಕಿರುವ ಅನ್ನಭಾಗ್ಯ ಅಕ್ಕಿ ವಿಶ್ವಜೀತ್ ಪಾಟೀಲ್ ನಂತಹ ಖದೀಮರ ಪಾಲಾಗುತ್ತಿದೆ. ಕಳೆದ ತಡರಾತ್ರಿ ಬಾಕ್ಸೈಟ್ ರೋಡ್ ಬಳಿ ಕೆಎ22 A8564 ಸಂಖ್ಯೆಯ ಲಾರಿಯಲ್ಲಿ ಸುಮಾರು 1500 ಕೆಜಿ ಗು ಅಧಿಕ ಪಡಿತರ ಅಕ್ಕಿಯನ್ನ ಅಕ್ರಮವಾಗಿ ಹೊರರಾಜ್ಯಕ್ಕೆ ಮಾರಾಟ ಮಾಡಲು ಕೊಂಡ್ಯೊಯಲಾಗುತ್ತಿತ್ತು. ಈ ವೇಳೆ ಸ್ಥಳೀಯರ ಮಾಹಿತಿ ಮೇರೆಗೆ, ನಗರದ ಬಳಿ ಲಾರಿ ಅಡ್ಡಗಟ್ಟಿದ ಗ್ರಾಮಸ್ಥರು ಪರಿಶೀಲನೆ ನಡೆಸಿದ್ದು, ಆಗ ಸ್ಥಳದಿಂದ ಲಾರಿ ಚಾಲಕ ಎಸ್ಕೆಪ್ ಆಗಿದ್ದಾನೆ. ಸದ್ಯ ಲಾರಿಯನ್ನ ಸ್ಥಳೀಯ ಠಾಣೆ ಪೊಲೀಸರು ಸಿಜ್ ಮಾಡಿ ಆರೋಪಿತರ ಮೇಲೆ ಕೇಸ್ ಜಡೆದಿದ್ದಾರೆ.
ಇನ್ನು ಈ ರೆಡ್, ಸ್ಥಳೀಯ ಮಾರ್ಕೆಟ್ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳ ಸಹಯೋಗದಲ್ಲಿ ನಡೆದಿರುತ್ತದೆ. ಎಂದು ಸ್ಥಳೀಯ ಹೋರಾಟಗಾರರು ಮಾಧ್ಯಮ ತಂಡಕ್ಕೆ ಮಾಹಿತಿ ನೀಡಿರುತ್ತಾರೆ.
ಬಡವರಿಗೆ ತಲುಪಬೇಕಾಗಿದ್ದ ಸಿದ್ದರಾಮಯ್ಯನವರ ಅನ್ನಭಾಗ್ಯದ ಅಕ್ಕಿಯನ್ನು,ಇನ್ನು ಮುಂದೆ ಯಾರೂ ಅಕ್ರಮವಾಗಿ ಸಾಗಿಸದಂತೆ, ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕೆಂದು ಸಮಾಜ ಸೇವಕ ಜಾನ್ ಕರೆಪ್ಪಗೋಳ ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿಯವರು ಬೆಳಗಾವಿ ಡಿಸಿಯವರಿಗೆ ಬೆಳಗಾವಿ ನಗರ ಕಮಿಷನರವರಿಗೆ ಮತ್ತು ಎಸ್ ಪಿ ಯವರಿಗೆ ಮನವಿ ಸಲ್ಲಿಸಿದ್ದಾರೆ. ಬಡವರಿಗೆ ತಲುಪಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೊರ ರಾಜ್ಯಕ್ಕೆ ಕಳುಹಿಸಿ ಬಡವರ ಹೊಟ್ಟೆ ಮೇಲೆ ಹೂಡೆದು ಲಕ್ಷ ಲಕ್ಷ ಹಣ ಪಿಕಿ ಮೆರೆಯುತ್ತಿದ್ದ ವಿಶ್ವಜೀತ್ ಪಾಟೀಲನಿಗೆ ತಕ್ಕ ಶಾಸ್ತಿಯಾದಂತಾಗಿದೆ.
ಮುಂದಿನ ದಿನಗಳಲ್ಲಿ ನಿರ್ಭಯದಿಂದ ಅಕ್ಕಿ ಚೋರರ ಬಂಡವಾಳ ಬೈಲಿಗೇಳಿಯುತ್ತೇವೆ ಕಾಯ್ದು ನೋಡಿ!!
ಜರ್ನಲಿಸ್ಟ್: ಚಂದ್ರು ತಳವಾರ