ಬೆಳಗಾವಿ: ಡಿ.ಬಿ ಹೆಬ್ಬಾಳಿ ಸರಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ,ನಿಗದಿತ ಶುಲ್ಕಗಿಂತ ದುಪ್ಪಟ್ಟು ಶುಲ್ಕ ವಸೂಲಿಗಿಳಿದ ಕಾಲೇಜು ಆಡಳಿತ ಮಂಡಳಿ..!
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಉ- ಖಾನಾಪೂರದಲ್ಲಿರುವ ಶ್ರೀ ಡಿ ಬಿ ಹೆಬ್ಬಾಳಿ ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬಡ ವಿದ್ಯಾರ್ಥಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ತಂಡ ಈ ಕಾಲೇಜಿನ ವಿದ್ಯಾರ್ಥಿಗಳವಿದ್ಯಾರ್ಥಿಗಳ ಹತ್ತಿರ ಹೋಗಿ ಸ್ಟಿಂಗ್ ಮಾಡಿದಾಗ ಶಾಲಾ ವಿದ್ಯಾರ್ಥಿಗಳು
ಶುಲ್ಕ ವಸೂಲಿಯಾದ ಕುರಿತು ಪ್ರತಿಕ್ರಿಯಿಸಿದರು.
ಸರ್ಕಾರದ ನಿಯಮ ಮೀರಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಯಾಕೆ ಪಡೆಯುತ್ತಿದ್ದೀರಿ ಎಂದು ಈ ಕಾಲೇಜಿನ ಪ್ರಾಂಶುಪಾಲರಾದ ಮಗದುಮರವರನ್ನು ಕೇಳಿದಾಗ
” ಅದು ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನದಂತೆ ಹಣ ಪಡೆಯಲಾಗುತ್ತಿದೆ. ಈ ಕಾಲೇಜ್ ಬಗ್ಗೆ ಶುಲ್ಕದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ನೀವು ಅಧ್ಯಕ್ಷರನ್ನ, ಉಪಾಧ್ಯಕ್ಷರನ್ನ, ಕಮಿಟಿ ಸದಸ್ಯರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ ಎಂದು ಹೇಳುತ್ತಾ….
ನಮ್ಮಲ್ಲಿ ವಿದ್ಯಾರ್ಥಿಗಳು ಜಾಸ್ತಿ ಇದ್ದಾರೆ.
ಸಿಬ್ಬಂದಿ ವರ್ಗ ಕಡಿಮೆ ಇದೆ.
ಸಮವಸ್ತ್ರಕ್ಕೆ, ಅತಿಥಿ ಶಿಕ್ಷಕರ ಗೌರವ ಧನಕ್ಕಾಗಿ, ಹೆಚ್ಚು ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಕ್ರೀಯಿಸಿದರು.
ವಿಪರ್ಯಾಸದ ಸಂಗತಿ ಏನೆಂದರೆ….
ಈ ಕಾಲೇಜ್ ಇರುವುದು ಶಾಸಕರು ಹಾಗೂ ಮಂತ್ರಿಗಳಾಗಿರುವ ಸತೀಶ್ ಜಾರಕಿಹೊಳಿಯವರು ಇರುವ ಯಮಕನಮರಡಿ ಕ್ಷೇತ್ರದಲ್ಲಿ. ಸತೀಶ್ ಜಾರಕಿಹೊಳಿಯವರು ಈ ಕಾಲೇಜಿನ ಆಡಳಿತ ಹಾಗೂ ಅಭಿವೃದ್ಧಿ ಕಮಿಟಿಯ ಅಧ್ಯಕ್ಷರಾಗಿದ್ದಾರೆ.
“ಶಾಸಕರೇ, ದುಬಾರಿ ಶುಲ್ಕ ಇಳಿಸಿ”
ಖಾಸಗಿ ಕಾಲೇಜಿನಲ್ಲಿ ದುಬಾರಿ ಡೊನೇಷನ್ಗೆ ಹೆದರಿ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆಯುತ್ತಾರೆ. ಇಂತಹ ವಿದ್ಯಾರ್ಥಿಗಳಿಂದ ದುಬಾರಿ ಫೀಸ್ ಪಡೆಯುತ್ತಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಶಾಲಾ ಆಡಳಿತ ಮಂಡಳಿಯವರು ಮುಖ್ಯವಾಗಿ ಯಮಕನಮರಡಿ ಕ್ಷೇತ್ರದ ಶಾಸಕರು, ಮಂತ್ರಿಗಳಾದ ಸತೀಶ್ ಜಾರಕಿಹೊಳಿಯವರು ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಯೋಚಿಸಬೇಕಾಗಿದೆ.
ಇನ್ನು ಮೇಲಾದರು ಸಂಬಂಧಿಸಿದ ಅಧಿಕಾರಿಗಳು ಕೂಡಲೆ ಎಚ್ಚೆತ್ತು, ಕಾನೂನು ಬಾಹಿರವಾಗಿ, ಬಡ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡುತ್ತಿರುವ ಕಾಲೇಜಿನ ಆಡಳಿತ ಮಂಡಳಿ,ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂಬುವುದು ನಮ್ಮ ಟಿವಿ3 ಕನ್ನಡ ಸುದ್ದಿ ವಾಹಿನಿಯ ಆಶಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ