ರಾಯಬಾಗ; ಶಾಸಕರ ನಿರ್ದೇಶನದಂತೆ ತಡೆಗೋಡೆ ನಿರ್ಮಾಣ,ನಕಲಿ ನರೇಗಾ ಬಿಲ್ ಸೃಷ್ಟಿಸಿ,ಹಣ ಪೀಕಲು ಮುಂದಾದ ಕದೀಮರು!
ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮ ಪಂಚಾಯಿತಿ, ಜೋಡಟ್ಟಿ ಗ್ರಾಮದಲ್ಲಿರುವ ವೈಯಕ್ತಿಕ ಖಾಸಗಿ ಜಮೀನಿನಲ್ಲಿ ತೆರೆದ ಬಾವಿಗೆ ಸನ್ 2020 ರಲ್ಲಿ ಬಾವಿಗೆ ಅಡ್ಡಲಾಗಿ ಕಟ್ಟಿದ ತಡೆ ಗೋಡೆಗೆ ನರೇಗಾ ಯೋಜನೆ ಅಡಿಯಲ್ಲಿ ಶ್ರೀಶೈಲ ಬೆನ್ನಾಳೆ ಎಂಬುವವರ ಜಮೀನಿನಿಂದ ಹನಗಂಡಿ ಎಂಬುವವರ ಜಮೀನದವರೆಗೆ ಇರುವ ಹಳ್ಳಕ್ಕೆ ರಕ್ಷಣಾ ತಡೆಗೋಡೆ ನಿರ್ಮಾಣ ಈ ರೀತಿಯಾಗಿ ಮಾಡಲಾಗಿದೆ. ಭಾಗ -1,ಭಾಗ 2, ಭಾಗ-3 ಹಮ್ಮಿಕೊಂಡ ಕಾಮಗಾರಿಳು ಒಂದೇ ಕಾಮಗಾರಿ ಈ ಹಿಂದೆ 2020 ಫೆಬ್ರವರಿ 15 ಒಳಗಾಗಿ ಮಾಡಿ ಪೂರ್ಣಿಗೊಳಿಸಿರುತ್ತಾರೆ.
ಆದರೆ ಅದೆ ಕಾಮಗಾರಿ ಹೆಸರಿನಲ್ಲಿ ವಿಭಿನ್ನವಾಗಿ ಮೂರು ಕಾಮಗಾರಿ ಮಾಡಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಕಳ್ಳರು. ಮತ್ತು ನಾಮಕರಣ ಮಾಡಿದ ಮೂರು ಕಾಮಗಾರಿಗಳ ಹೆಸರಿನಲ್ಲಿ ಹಣ ಲಫ್ಡಾಯಿಸುವ ದುರುದ್ದೇಶದಿಂದ ತರಾತುರಿಯಲ್ಲಿ ಕ್ರಿಯಾಯೋಜನೆ ಇಲ್ಲದೆ ಮುಂಚಿತವಾಗಿ ಆಡಳಿತಾತ್ಮಕ ಮಂಜೂರಾತಿ ಕೊಟ್ಟು ನಕಲಿ ಬಿಲ್ಲುಗಳನ್ನು ಸೃಷ್ಟಿಸಿದ ಭ್ರಷ್ಟ ಟೆಕ್ನಿಕಲ್ ಇಂಜಿನಿಯರ ವಿನಾಯಕ ಸುಭಾನಾಜಿ, ಹಾಗೂ ಭ್ರಷ್ಟರ ಆಪ್ಪಾ, ಮಳ್ಳ ಮಳ್ಳ ಮಂಚಕ್ಕೆ ಎಷ್ಟು ಕಾಲು ಎಂದರೆ ಆರು ಮೂರು ಎನ್ನುವ ಲಂಚ ಕೋರ ಪಿಡಿಓ ಕುಂತುನಾಥ ಶಿರಗೊಂಡ ಈ ಇಬ್ಬರು ಆಸಾಮಿಗಳು ಸಾಮಾನ್ಯದವರೆನಲ್ಲ. ತಮ್ಮ ಮನಸೋ ಇಚ್ಛೆ ಹೆಂಗ ಬೇಕ ಹಂಗ ನಕಲಿ ಬಿಲ್ ತೆಗೆದು ಹಣ ಲಪಡಾಯಿಸಿ ತಿಂದು ತೇಗಿ ಇಂಗು ತಿಂದ ಮಂಗನಂತಾಗಿದ್ದಾರೆ. ಇವರು ಯಾವೆಲ್ಲ ಕಾಮಗಾರಿಯಲ್ಲಿ ಹಣ ಪಿಕಿದ್ದಾರೆ ಎಲ್ಲದರ ಕುರಿತು ಪಿನ್ನ ಟು ಪಿನ್ ಡೀಟೇಲ್ಸ್ ನಮ್ಮ ಬಳಿ ಇದೆ.
ನಕಲಿ ಕಾಮಗಾರಿಗಳು ಈ ಕೆಳಗಿನಂತಿವೆ.
work code no:-
93393042892292644
Bill recipt no Bill amount
1 72682.42
2 51720.8
3 58101.45
4 62024.63
5. 77572
6. 55840
7. 74046
8. 23271.6
9. 58668.07
10. 81816.96
Work code no:-93393042892293476
11. 80369.42
12. 72694.14
13. 51721.8
14. 57956.87
15. 77572
16. 35703.61
17. 32001.05
18. 49364
19. 55840
20. 58604.7
Another work code no:-93393042892292648
21. 27554.87
22. 71431.68
23. 48231.8
24. 55611.48
25. 28208
26. 23620.1
ಹೀಗೆ ಮೂರು ಕಾಮಗಾರಿಗಳಿಗೆ ಸುಮಾರು 14,58,324 ರೂಪಾಯಿ ನಕಲಿ ಬಿಲ್ ಸೃಷ್ಟಿಸಿದ ವಿನಾಯಕ ಶುಭಾನಜಿ ಹಾಗು ಭ್ರಷ್ಟ ಅಭಿವೃದ್ಧಿ ಅಧಿಕಾರಿ ಕುಂತಿನಾಥ ಶಿರಗೊಂಡ ಮತ್ತು ಶ್ರೀ ಬಾಲಾಜಿ ಟ್ರೇಡರ್ಸ್ ಅಂಗಡಿ ಮಾಲೀಕನ ವಿರುದ್ಧ ಕುಡಾ ಕ್ರಿಮಿನಲ್ ಪ್ರಕರಣ ದಾಖಲಿಸಿಬೇಕು ಇತನೆ ನಕಲಿ ತೆರಿಗೆ ಪಾವತಿ ಕೊಟ್ಟಿರುವುದು ಕಂಡು ಬಂದಿದೆ.
KARNATAKA TRANSPARENCY IN PUBLIC PROCUREMENT ACT-1999 ನಿಯಮಾನುಸಾರ ಕಾರ್ಮಿಕರ ಸಹಿಗಳನ್ನು ಪರಿಶೀಲಿಸಿ, ವಿನಾಯಕ ಶುಭಾನಜಿ ಹಾಗು ಪಂಚಾಯತಿ ಭ್ರಷ್ಟ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸರಕಾರ ಮತ್ತು ಸಂಬಂಧಿಸಿದ ಮೆಲಾದಿಕಾರಿಗಳು ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ಮುಂದಿನ ಸಂಚಿಕೆಯಲ್ಲಿ ಇಂತಹ ನೀಚರ, ಭ್ರಷ್ಟರ, ಬಣ್ಣ ಬಟಾ ಬಯಲು ಮಾಡಲು, ಟಿವಿ3 ಕನ್ನಡ ವಾಹಿನಿಯು ಸದಾ ಸನ್ನದ್ಧವಾಗಿರುತ್ತದೆ ವೀಕ್ಷಿಸಿ…
ವರದಿ:-ಚಂದ್ರು ತಳವಾರ ಸ್ಪೆಷಲ್ ಬೀರೋ ಟಿವಿ3 ಕನ್ನಡ ರಾಯಬಾಗ


