ಬೆಳಗಾವಿ: ವಿಶ್ವಕರ್ಮ ಅದ್ದೂರಿ ಜಯಂತಿಗೆ ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಆಗಮನ
ನಾಳೆ ನಡೆಯಲಿರುವ ವಿಶ್ವಕರ್ಮ ಪರಬ್ರಹ್ಮ ಸ್ರಷ್ಟಿಕರ್ತನ. ವಿಶ್ವಕರ್ಮನು ಬ್ರಹ್ಮನ ಪುತ್ರನಾಗಿದ್ದು ವಿಶ್ವದ ತಂದೆ ಎಂದೂ ಇವರನ್ನು ಕರೆಯುತ್ತಾರೆ. ಪ್ರತಿಯೊಂದನ್ನು ತಿಳಿದಿರುವ ದೇವರು ಎಲ್ಲವನ್ನೂ ಅರಿತುಕೊಳ್ಳುವ ದೇವರು ಎಂಬುದಾಗಿ ಕೂಡ ವಿಶ್ವಕರ್ಮನನ್ನು ಕರೆಯುತ್ತಾರೆ.
ಸತ್ಯ ಯುಗದಲ್ಲಿ ವಿಶ್ವಕರ್ಮನು ಸ್ವರ್ಗ ಲೋಕವನ್ನು ಸೃಷ್ಟಿಸಿದರು ಎಂದು ಹೇಳಲಾಗಿದೆ. ಅಂತೆಯೇ ತ್ರೇತಾ ಯುಗದಲ್ಲಿ ಲಂಕೆಯನ್ನು, ದ್ವಾಪರ ಯುಗದಲ್ಲಿ ದ್ವಾರಕೆ ಮತ್ತು ಹಸ್ತಿನಾಪುರವನ್ನು ಕಲಿಯುಗದಲ್ಲಿ ಇಂದ್ರಪ್ರಸ್ಥವನ್ನು ನಿರ್ಮಿಸಿದ್ದರು. ದೇವತೆಗಳು, ಪಟ್ಟಣಗಳು, ನಗರಗಳು ಮತ್ತು ದೇವಸ್ಥಾನಗಳಂತಹ ಸ್ಥಳಗಳಿಗಾಗಿ ವಿಶ್ವಕರ್ಮನು ವಿನ್ಯಾಸ ಮತ್ತು ರಚನೆ ಕಲೆಯನ್ನು ಹೊಂದಿದ್ದಾರೆ. ದ್ವಾರಕೆಯು ಕೃಷ್ಣನ ರಾಜಧಾನಿಯಾಗಿತ್ತು ಅಂತೆಯೇ ಹಸ್ತಿನಾಪುರ ಪಾಂಡವರ ರಾಜಧಾನಿಯಾಗಿತ್ತು ಇವರು ಕೌರವರಿಂದ ಯುದ್ಧ ಮಾಡಿ ಈ ಸ್ಥಳವನ್ನು ಪಡೆದುಕೊಂಡಿದ್ದರು.
ಇಂದ್ರಪ್ರಸ್ಥವನ್ನು ಮಹಾಭಾರತದಲ್ಲಿದ್ದ ಪಟ್ಟಣವಾಗಿತ್ತು. ಇದೆಲ್ಲವನ್ನೂ ವಿಶ್ವಕರ್ಮ ನಿರ್ಮಿಸಿದ್ದರು ಎಂದು ಹೇಳಲಾಗಿದೆ. ಜಯಂತಿಯನ್ನ ಅದ್ದೂರಿಯಾಗಿ ಆಚರಣೆ ಮಾಡಲು ಜಿಲ್ಲಾಡಳಿತ ಹಾಗೂ ಸಮಾಜದ ಮುಖಂಡರು ಸಜ್ಜಾಗಿದ್ದಾರೆ.ಪ್ರತಿ ವರ್ಷಕ್ಕಿಂತ ಈ ವರ್ಷ ವಿಶ್ವಕರ್ಮ ಜಯಂತಿಯನ್ನ ಅದ್ದೂರಿಯಾಗಿ ಆಚರಣೆ ಮಾಡಲು ಹಲವೂ ಸಿದ್ದತೆಗಳು ನಡೆದಿವೆ.
ನಾಳೆ ಬೆಳಿಗ್ಗೆ ೯ ಗಂಟೆಗೆ ಕಿಲ್ಲಾ ಕೆರೆಯಿಂದ ಕುಮಾರ ಗಂಧರ್ವ ರಂಗಮಂದಿರ ವರೆಗೆ ವಿಶ್ವಕರ್ಮನ ಅದ್ದೂರಿ ಮೆರವಣಿಗೆ ಮಾಡಲಾಗುತ್ತದೆ. ನಂತರ ವೇದಿಕೆ ಕುರಿತು ಹಲವು ಗಣ್ಯರಿಂದ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗಣ್ಯರಿಂದ ಭಾಷಣ ತದನಂತರ ಪ್ರಸಾದ ವ್ಯವಸ್ಥೆ.ಜಿಲ್ಲೆಯ ಹಾಗೂ ತಾಲೂಕಿನ ಪ್ರಮುಖ ಗಣ್ಯರು ಹಿರಿಯರು ವಿಶ್ವಕರ್ಮ ಸಮಾಜದ ಎಲ್ಲಾ ಕುಲ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆರಗು ತರಬೇಕೆಂದು ವಿಶ್ವಕರ್ಮ ಸಮಾಜದ ಯುವ ಮುಖಂಡರಾದ ಶ್ರೀ ಮಲ್ಲಿಕಾರ್ಜುನ ಪತ್ತಾರ ಹಾಗೂ ಉತ್ತರ ಕರ್ನಾಟಕ ವಿಶ್ವಕರ್ಮ ಅದ್ಯಕ್ಷರಾದ ಉಮೇಶ ಪತ್ತಾರ ವೈದ್ಯರಾದ ರಾಘವೆಂದ್ರ ಪತ್ತಾರ ಮನವಿ ಮಾಡಿಕೊಂಡದ್ದಾರೆ.
ನಾಳೆ ನಡೆಯುವ ಜಯಂತಿಯಲ್ಲಿ ಲೊಕೊಪಯೊಗಿ ಸಚಿವರಾದ ಸತೀಶ ಜಾರಕಿಹೊಳಿ,ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ರಾದ ಲಕ್ಷ್ಮೀ ಹೆಬ್ಬಾಳ್ಕರ ಶಾಸಕರು ಜಿಲ್ಲಾಧಿಕಾರಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವಿದ್ಯಾವತಿ ಭಜಂತ್ರಿ,ಮೌನೇಶ ಪೊತದಾರ, ಹೀಗೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ