ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ
ಸಂಘದ ಖಜಾಂಚಿಯಾಗಿ ಎ.ಆರ್.ಬಡಿಗೇರ
ಧಾರವಾಡ : ಬೆಂಗಳೂರಿನ ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ 2025-2027ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಕೆ.ಬಿ. ಬೆಟ್ಟೇಗೌಡ, ಉಪಾಧ್ಯಕ್ಷರಾಗಿ ಎಂ. ಕೃಷ್ಣಪ್ಪ, ಎಚ್. ಸುಬ್ಬಣ್ಣ, ಜಂಟಿ ಕಾರ್ಯದರ್ಶಿಯಾಗಿ ಡಿ.ಎಸ್. ಅಶೋಕಕುಮಾರ ಹಾಗೂ ಖಜಾಂಚಿಯಾಗಿ ಧಾರವಾಡ ಮೂಲದ ನಿವೃತ್ತ ಎಸ್ಪಿ ಅಡಿವೆಪ್ಪ ರುದ್ರಪ್ಪ ಬಡಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಲಯ ಸಂಘಟನಾ ಕಾರ್ಯದರ್ಶಿಗಳಾಗಿ ಕೆ.ಸಿ. ವೆಂಕಟರಾವ್ ಮಾನೆ, ಸಿದ್ಧರಾಮಯ್ಯ, ಟಿ.ಡಿ. ಜಯರಾಮು, ಎಚ್.ಸಿ. ರಾಜಗೋಪಾಲ, ಕಾರ್ಯಕಾರಿಣಿ ಸದಸ್ಯರಾಗಿ ಎ.ಎನ್. ನಾಗಲಿಂಗಯ್ಯ, ವಿ. ಶ್ರೀನಿವಾಸಮುರ್ತಿ, ವಿ. ರಾಮಯ್ಯ, ಎನ್.ಎಸ್. ರಾಮಚಂದ್ರಪ್ಪ ಅವರುಗಳು ಅವಿರೋಧವಾಗಿ ಚುನಾಯಿತರಾಗಿದ್ದಾರೆ.
ಸಂಘದ ವಿವಿಧ ಸ್ಥಾನಗಳಿಗೆ ಸಂಖ್ಯೆಗನುಗುಣವಾಗಿ ಮಾತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳು ದಿ. 3ರಂದು ಪ್ರಕಟಿಸಿದರು.


