ನಿಪನಾಳ ಸರಕಾರಿ ಪ್ರೌಢ ಶಾಲೆಯಲ್ಲಿ; ವಾರ್ಷಿಕ ಸ್ನೇಹ ಸಮ್ಮೇಳನ…!
ಬೆಳಗಾವಿ: ಜಿಲ್ಲೆ ರಾಯಬಾಗ ತಾಲೂಕಿನ ಸರ್ಕಾರಿ ಪ್ರೌಢಶಾಲೆ ನಿಪನಾಳದಲ್ಲಿ ದಿನಾಂಕ: ೧೩/೦೩/೨೦೨೫ ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಅತ್ಯಂತ ಅರ್ಥಪೂರ್ಣವಾಗಿ ಜರಗಿತು. ಮುಂಜಾನೆ ೮ ಗಂಟೆಗೆ ಮಹಾ ಸರಸ್ವತಿ ಮಹಾಲಕ್ಷ್ಮೀ ಹಾಗೂ ಮಹಾಗಣಪತಿ ಪೂಜೆ ನೆರವೇರಿಸುವುದರೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಜ್ಞಾನದ ಸಂಕೇತವಾದ ದೀಪದಾನ ಸಮಾರಂಭವು ಎಲ್ಲ ಸಮಸ್ತ ಗುರು ವ್ರಂದದವರಿಂದ ಜರುಗಿತು.
ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸುವ ಸಲುವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಸದರಿ ವಸ್ತು ಪ್ರದರ್ಶನವನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸದಾಶಿವ ಹಚಡದ ಎಪಿಸಿ ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಹಾಗೂ ಆಮಂತ್ರಿತ ಆತಿಥಿಗಳ ಉಪಸ್ಥಿತಿಯಲ್ಲಿ ಜರುಗಿತು.
ನಂತರ ವೇದಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯುವ ಸನ್ಯಾಸಿಗಳು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರು ಹಾಗೂ ಖ್ಯಾತ ವಾಘ್ಮಿಗಳಾದ ಪೂಜ್ಯ ಶಶಿಕಾಂತ ಗುರೂಜಿ ಅವರು ವಹಿಸಿಕೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಿ ಬಿ ಸಂಗಟೆ ಗುರುಗಳು ವಹಿಸಿಕೊಂಡು ಆಗಮಿಸಿದ ಅತಿಥಿಗಳನ್ನು ಪೂಜ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸದಾಶಿವ ಹಚಡದ ಅವರು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಕುರಿತು ಮಾರ್ಗದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಖಾನವ್ವ ಲಟ್ಟಿ, ಎಸ್ಡಿಎಂಸಿ ಅಧ್ಯಕ್ಷರಾದ ಖಾನಪ್ಪ ಬೋರಗೌಡ, ತಾಲೂಕ ಸರ್ಕಾರಿ ನೌಕರ ಸಂಘದ ನಿರ್ದೇಶಕರಾದ ಸುಖದೇವ್ ಕಾಂಬಳೆ, ಸಿದ್ದಲಿಂಗ ನರಗಟ್ಟಿ, ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಪಾಟೀಲ್ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಶ್ರೀರಾಮ್ ಪಾಟೀಲ್ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಖ್ಯಾತ ಜಾನಪದ ಗಾಯಕರಾದ ಮಾಳು ನಿಪನಾಳ ಅವರ ಕಂಠದಿಂದ ಗಾಯನ ಮೂಡಿ ಬಂದಿತು. ೨೦೨೩-೨೪ನೇ ಸಾಲಿನಲ್ಲಿ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರತ್ನ, ವಿದ್ಯಾವಿಭೂಷಣ, ವಿದ್ಯಾಭೂಷಣ, ವಿದ್ಯಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅನೇಕ ಮಹನೀಯರು ನಗದು ರೂಪದ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕ್ರೀಡಾ ರತ್ನ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗ್ರಾಮ ಪಂಚಾಯಿತಿ ಸದಸ್ಯರು ಬಿ ಸಿಯೂಟಕ್ಕೆ ಅಗತ್ಯವಾದ ತಟ್ಟೆಗಳನ್ನು ದೇಣಿಗೆಯಾಗಿ ನೀಡಿದರು. ನಿರ್ಮಲಾ ಪಾಟೀಲ್ ಅವರು ಸೌಂಡ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಖಾನಪ್ಪ ಬೋರಗೌಡ್, ವಿಠ್ಠಲ ಬೋರಗೌಡ, ಮಾಳಪ್ಪ ಹುರಕಡ್ಲಿ, ಅನಿಲ್ ಬಸ್ತವಾಡೆ,ಸುರೇಂದ್ರ ಪೋತದಾರ್ ಗುರುಲಿಂಗಯ್ಯ ಹಿರೇಮಠ, ದೇವರುಷಿ ಶ್ರೀ ಮಾಳಪ್ಪ ಪೆಂಡಾರಿ, ಸಿದ್ದಪ್ಪ ಮೀಸಿ,ರಾಯಪ್ಪ ವ್ಯಾಪಾರಿ, ಸದಾಶಿವ್ ಹಿರೇಕೋಡಿ, ರಾಜು ಹಳಬರ, ಆನಂದ ಘೋರ್ಪಡೆ ಮುಂತಾದವರು ಮಕ್ಕಳಿಗೆ ಪ್ರೋತ್ಸಾಹ ರೂಪದಲ್ಲಿ ಬಹುಮಾನಗಳನ್ನು ವಿತರಿಸಿದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ವಂದೇಮಾತರಂ ಗೀತೆಯೊಂದಿಗೆ ಮುಕ್ತಾಯಗೊಂಡಿತು.
ಇದೇ ಸಂದರ್ಭದಲ್ಲಿ ಶಾಲೆಯ ಬಾಲಕಿಯರಿಂದ ಕರಾಟೆ ಪ್ರದರ್ಶನ ಏರ್ಪಡಿಸಲಾಗಿತ್ತು.
ಸಮಸ್ತ ಶಿಕ್ಷಕ ಸಿಬ್ಬಂದಿ, ಪಾಲಕ ಬಂಧುಗಳು, ಗ್ರಾಮದ ನಾಗರಿಕರು, ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಾನಿಧ್ಯ ವಹಿಸಿ ಮಾತನಾಡಿದ ಶಶಿಕಾಂತ್ ಗುರೂಜಿ ಅವರು ಭಾರತ ದೇಶವನ್ನು ನಿಜವಾಗಿ ಕಟ್ಟುತ್ತಿರುವವರು ಶಿಕ್ಷಕರು.
ಒಬ್ಬ ಒಳ್ಳೆಯ ಶಿಕ್ಷಕ ನೂರಾರು ಸಾವಿರಾರು ವಿದ್ಯಾರ್ಥಿಗಳನ್ನು ಸು ಸಂಸ್ಕೃತರನ್ನಾಗಿ ಮಾಡಿ ಅವರ ಭವ್ಯ ಭವಿಷ್ಯಕ್ಕೆ ಕಾರಣೀಕರ್ತರಾಗಿದ್ದಾರೆ. ವಿದ್ಯಾರ್ಥಿಗಳು ಗುರುವಾಜ್ಞೆ ಮೀರದೆ ತಮ್ಮ ಕನಸನ್ನು ಈಡೇರಿಸಿಕೊಳ್ಳುವತ್ತ ಸದಾ ಸನ್ನದ್ಧರಾಗಿರಬೇಕು ಎಂದು ಕರೆ ಕೊಟ್ಟರು.