ಬೆಳಗಾವಿ: ಜಿಲ್ಲಾ ಮಟ್ಟದ ಚರ್ಮ ಕುಶಲ ಕರ್ಮಿಗಳ ಕುಂದು ಕೊರತೆ ನಿವಾರಣೆ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾಗಿ ಆಕಾಶ ಬೇವಿನಕಟ್ಟಿ ಆಯ್ಕೆ.!
ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಗೌಡವಾಡ ಗ್ರಾಮದ ಶ್ರೀ ಆಕಾಶ ವಸಂತ ಬೇವಿನಕಟ್ಟಿ ಅವರನ್ನು ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು, ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರಿಗೆ.
ಮತ್ತು ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ದಲಿತ ಮುಖಂಡರುಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ. ಮತ್ತು ದಲಿತ ಸಮುದಾಯದ ಪಾರಂಪರಿಕ ಚರ್ಮ ಕುಶಲ ಕರ್ಮಿಗಳ ಸಮಸ್ಯೆಗಳನ್ನು ಸಮೀಪದಿಂದ ಬಲ್ಲವರಾಗಿದ್ದು ಅವರ ಸಮಸ್ಯೆಗಳನ್ನು ಪರಿಹರಿಸಲು ಸತತವಾಗಿ ಪ್ರಯತ್ನಿಸುತ್ತಿರುವ. ಶ್ರೀ ಆಕಾಶ ವಸಂತ ಬೇವಿನಕಟ್ಟಿ ಅವರನ್ನು
ಪರಿಶಿಷ್ಟ ಜಾತಿಗೆ ಸೇರಿದ ಚರ್ಮ ಕುಶಲಕರ್ಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳ ಅದ್ಯಕ್ಷತೆಯಲ್ಲಿ, ಬೆಳಗಾವಿ ಜಿಲ್ಲಾ ಮಟ್ಟದ ಚರ್ಮ ಕುಶಲಕರ್ಮಿಗಳ ಕುಂದು ಕೊರತೆ ಸಮಿತಿಯ ನಾಮನಿರ್ದೇಶಿತ_ಸದಸ್ಯನಾಗಿ ಆಯ್ಕೆಯಾದ ಶ್ರೀ ಆಕಾಶ ವಸಂತ ಬೇವಿನಕಟ್ಟಿ ಅವರಿಗೆ ಹುಕ್ಕೇರಿ ತಾಲೂಕಿನ ಎಲ್ಲ ದಲಿತ ಮುಖಂಡರು. ಸದಸ್ಯರ ಹಾಗೂ ಗುರು ಹಿರಿಯರು ಹೃತ್ಪೂರ್ವಕ. ಅಭಿನಂದನೆಗಳನ್ನು ನಮ್ಮ ಹಲೋ ಹುಕ್ಕೇರಿ ವಾಹಿನಿ ಮೂಲಕ ಸಲ್ಲಿಸಿರುತ್ತಾರೆ.