ರಾಯಭಾಗ ನೀತಿ ಸಂಹಿತೆ ಜಾರಿ ಆಗಿ ತಿಂಗಳು ಕಳೆದರು, ನಾಮ ಫಲಕ ತೆರವುಗೊಳಿಸದ ಕೇರ್ಲೆಸ್ ಪಿಡಿಓ…!
ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಮೇಕಳಿ ಸರಕಾರಿ ಪ್ರೌಢಶಾಲೆಯ ಮುಂಭಾಗದ ಮೇಲೆ ಕಂಡು ಬಂದ ದೃಶ್ಯಾವಳಿ ಇದು.
ನೀತಿ ಸಂಹಿತೆ ಜಾರಿ ಆಗಿ ತಿಂಗಳು ಕಳೆಯುತ್ತ ಬಂದರು, ಕಂಡರು ಕಂಡರಿಯದಂತೆ ಗಪ್ಪ ಚುಪ್ಪ ಆಗಿದ್ದ ಅಧಿಕಾರಿಗಳು, ಇಂದು ದಿನಾಂಕ ೦೯-೦೪-೨೦೨೪ ದಿಡೀರನೆ ನಾಮ ಫಲಕ ಅಳಿಸುತ್ತಿರುವ ದೃಶ್ಯ ಅಲ್ಲಿನ ಸ್ಥಳಿಯರ ಮೊಬೈಲ್ ನಲ್ಲಿ ಸೆರಿಯಾಗಿವೆ.
ಲೊಕಸಭಾ ಚುನಾವಣಾ ಹಿನ್ನೆಲೆ ಈಗಾಗಲೇ ನಿತಿ ಸಂಹಿತೆ ಹಾಗೂ ಕಾನೂನು ಉಲ್ಲಂಘನೆ ಆಗಬಾರದೆಂದು ಹಲವು ಅಧಿಕಾರಿಗಳನ್ನ ಚುನಾವಣಾ ಇಲಾಖೆ ನೇಮಕ ಮಾಡಿ ಆದೇಶ ಹೊರಡಿಸಿದೆ. ಆದರೆ ಇಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದ್ದರೂ ಅಧಿಕಾಗಳು ಕ್ಯಾರೆ ಎನ್ನುತ್ತಿಲ್ಲ.
ಹಾಗಾಗಿ ನಮಗೆ ತಿಳಿಯುತ್ತಿದೆ ಬಹುಶಃ ಇಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಅನ್ವಹಿಸುವದಿಲ್ಲ ಎಂದು ತಿಳಿದು ಬರುತ್ತಿದೆ.
ಸರಕಾರಿ ಶಾಲೆಗೆ ಮುಂಭಾಗದಲ್ಲಿ ಇದುವರೆಗೆ ರಾರಾಜಿಸುತ್ತಿರುವ ನಾಮ ಫಲಕ BJP ಪಾರ್ಟಿಗೆ ಸೇರಿದ ನಾಮ ಫಲಕ ಎಂದು ಮಾಹಿತಿ ಲಭ್ಯವಾಗಿದೆ.
ಹಾಗಾದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿದ್ರಾ.?
ವಾಟ್ಸ್ಯಾಪ ಪೆಸಬುಕ್ ಇನ್ಸ್ಟಾಗ್ರಾಂ ಹೀಗೆ ಅನೇಕ ಸಾಮಾಜಿಕ ಜಾಲತಾಣಗಳ ಮೇಲೆ ನೀಗಾ ಇಟ್ಟಿರುವ ಚುನಾವಣಾ ಇಲಾಖೆಗೆ ಇಷ್ಟೊಂದು ದೊಡ್ಡ ಬೊರ್ಡ ಕಾಣಲಿಲ್ಲವೆ…?
ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಆದ್ದರಿಂದ ಚುನಾವಣಾ ಅಧಿಕಾರಿಗಳು ತಕ್ಷಣ ಎಚ್ಚೆತ್ತು, ತಪ್ಪಿತಸ್ಥ ಅಭಿವೃದ್ಧಿ ಅಧಿಕಾರಿಯ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು, ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ