ಪತ್ರಿಕಾ ಪ್ರಕಟಣೆ
ಬೆಳಗಾವಿ ನಗರ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಮೋಟಾರ್ ಬೈಕ್ ಕಳ್ಳತನ
ಪ್ರಕರಣದಲ್ಲಿ ಆರೋಪಿತನ ಬಂಧನ
ಬೆಳಗಾವಿ ನಗರದ ವಿವಿಧ ಠಾಣೆಗಳಲ್ಲಿ ದಾಖಲಾದ ಮೋಟಾರ್ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಶ್ರೀ ಯಡಾ ಮಾರ್ಬನ್ಯಾoಗ್ ಬೆಳಗಾವಿ ನಗರ, ಸ್ನೇಹ ಪಿ ವಿ ಉಪ-ಪೊಲೀಸ್ ಆಯುಕ್ತರು (ಅ&ಸಂ) ಬೆಳಗಾವಿ ನಗರ, ಮತ್ತು ಹೆಚ್ ಶೇಖರಪ್ಪ ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ್ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ತಿಲಕವಾಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ:24/07/2024 ರಂದು ಆರೋಪಿತರಾದ ಹೈದರ್ ಅಲಿ ಮುಸ್ಲಿಂ ಅಲಿ ಶೇಖ್ ಸಾ!! ವೀರಭದ್ರನಗರ್ ಬೆಳಗಾವಿ ಮತ್ತು ನದೀಮ್ ಶಮ್ಸುದ್ದಿನ್ ಟೋಪಿಗಾರ್ ಸಾ!! ಅಮನ್ ನಗರ ಬೆಳಗಾವಿ ಇವರಿಗೆ ತಿಲಕವಾಡಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 72/2024 ಕಲಂ 379, 411IPCನೇದ್ದರಲ್ಲಿ ದಸ್ತಗಿರಿ ಮಾಡಿ ಇವರಿಂದ ತಿಲಕವಾಡಿ ಮತ್ತು ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸುಮಾರು 09 ಮೋಟಾರ್ ಬೈಕ್ ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಬೈಕ್ ಜಪ್ತಿ ಮಾಡಿದ್ದು ಒಟ್ಟು 7,00,000/ ಮೊತ್ತದ
10 ಮೋಟಾರ್ ಬೈಕ್ ಗಳನ್ನು ದಿನಾಂಕ: 24/07/2024 ರಂದು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.
ಸದರಿ ತನಿಖಾತಂಡದಲ್ಲಿ ತಿಲಕವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ರವರಾದ ಶ್ರೀ ಪರಶುರಾಮ್ ಪೂಜೇರಿ, ಪಿ.ಎಸ್.ಐ ಸಂತೋಷ್ ದಳವಾಯಿ, ಸಿ ಎಚ್ ಸಿ ಗಳಾದ ಮಹೇಶ್ ಪಾಟೀಲ್, ಸೋಮಲಿಂಗ ಕರ್ಲಿಂಗನವರ್, ಸಿಪಿಸಿಗಳಾದ ಸಂಜು ಸಂಗೋಟಿ ಮಲ್ಲಿಕಾರ್ಜುನ್ ಪಾತ್ರೋಟ್ , ಲಾಡ್ಜಿಸಾಬ್ ಮುಲ್ತಾನಿ, ತಾಂತ್ರಿಕ ವಿಭಾಗದ ಸಿಬ್ಬಂದಿವರಾದ ರಮೇಶ್ ಅಕ್ಕಿ, ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.