ಎಲಿಮುನ್ನೋಳಿ: ನೇಣಿಗೆ ಶರಣಾದ ಯುವಕ.
ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಹೊರವಲಯದ ತೋಟದ ಪಟ್ಟಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಿಪ್ಪದ ಘಟನೆ ಬೆಳಂ ಬೆಳಿಗ್ಗೆ ತಡವಾಗಿ ಬೆಳಕಿಗೆ ಬಂದಿದೆ ಬೆಳಿಗ್ಗೆ ೬ ಗಂಟೆ ಸುಮಾರು ಹೊಲಕ್ಕೆ ಹೋಗುವ ಜನರು ನೋಡಿ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಅಪ್ಪಾಸಾಹೇಬ ಕಾಂಬಳೆ ಎಂಬ ವ್ಯಕ್ತಿ ವಯಸ್ಸು (೪೦) ನೇಣು ಬಿಗಿದುಕೊಂಡು ಸಾವಿಗಿಡಾಗಿದ್ದಾನೆ.ಇನ್ನೂ ಸಾವಿಗೆ ಹಲವು ಅನುಮಾನಗಳು ಕಂಡು ಬರುತ್ತಿವೆ ಎಂದು ಸ್ಥಳಿಯರು ಹಾಗೂ ಸಂಬಂದಿಕರು ಆರೋಪಿಸಿದ್ದಾರೆ.ಇನ್ನೂ ಘಟನೆ ನಡೆದು ೧೩ ಗಂಟೆಗಳಾದರೂ ಸ್ಥಳಕ್ಕೆ ಬಾರದ ಪೋಲಿಸರು ಪೋಲಿಸರು ಯಾಕೆ ಬರುತ್ತಿಲ್ಲ ನಮ್ಮಣ್ಣನ್ನು ಕೆಳಗೆ ಇಳಿಸಿ ಪೋಲಿಸರು ಬರುತ್ತಿಲ್ಲವೆಕೆ ಎಂದು ಹೆಣ್ಣು ಮಕ್ಕಳು ಅಳುತ್ತಾ ಅಳುತ್ತಾ ಆಕ್ರೋಶ ಹೊರಹಾಕಿದ್ದಾರೆ.ಹೌದು ಪೋಲಿಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿ ೧೩ ತಾಸುಗಳಾದರೂ ಸ್ಥಳಕ್ಕೆ ಬರುತ್ತಿಲ್ಲ ಘಟನೆ ನಡೆದ ಸ್ಥಳದಿಂದ ಪೋಲಿಸ್ ಠಾಣೆಗೆ ಇರುವ ಅಂತರ ಕೇವಲ ೩ ಕಿಮೀ ಮಾತ್ರ ೩ ಕಿಲೊಮೀಟರ್ ದೂರಕ್ಕೆ ಕ್ರಮಿಸಲು ಪೋಲಿಸರಿಗೆ ಬೇಕಾಗಿದೆ ೧೩ ತಾಸು ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಿದೆ.