ಯಲ್ಲಾಪೂರ:ಯುವತಿ ಕಾಣೆ ಪೊಲಿಸ್ ಪ್ರಕಟಣೆ ದಿನಾಂಕ: 27/12/2023 ರಂದು ಪಿರ್ಯಾದಾರ ಶ್ರೀ ರಾಮಕೃಷ್ಣ ತಂದೆ ಸುಬ್ರಾಯ ಭಟ್ ಪ್ರಾಯ 55 ವರ್ಷ, ವೃತ್ತಿ ರೈತಾಚಿ ಕೆಲಸ ಜಾತಿ ಹಿಂದೂ ಹವ್ಯಕ ಬ್ರಾಹ್ಮಣ ಸಾ॥ ಬೇಸಾಯಿ ಮನೆ ಪೋಸ್ಟ ಚಂದಗುಳಿ ತಾ ।। ಯಲ್ಲಾಪುರ ರವರ ಮಗಳಾದ ಕು। ತೇಜಾ ತಂದೆ ರಾಮಕೃಷ್ಣ ಭಟ್ ಪ್ರಾಯ 26 ವರ್ಷ ವೃತ್ತಿ ಖಾಸಗಿ ಕೆಲಸ ಸಾ ॥ ದೇಸಾಯಿ ಮನೆ ಪೋಸ್ಟ ಚಂದಗುಳಿ ತಾ ॥ ಯಲ್ಲಾಪುರ ಜಿಲ್ಲಾ: ಉತ್ತರ ಕನ್ನಡ. ಇವಳು ದಿನಾಂಕ: 20/12/2023 ರಂದು ಬೆಳಿಗ್ಗೆ 09-30 ಗಂಟೆಗೆ ತಾನು ಕೆಲಸವನ್ನು ಮಾಡುತ್ತಿದ್ದ ಹುಬ್ಬಳ್ಳಿಯ ಕಂಪನಿಗೆ ಹೋಗುವುದಾಗಿ ಯಲ್ಲಾಪುರ ಬಸ್ ನಿಲ್ದಾಣದಿಂದ ಹೋದವಳು ತಾನು ಕೆಲಸವನ್ನು ಮಾಡುತ್ತಿದ್ದ ಸ್ಥಳಕ್ಕೆ ಹೋಗದೇ ತಮ್ಮ ಸಂಬಂಧಿಕರ ಮನೆಗೂ ಹೋಗದೇ ಮರಳಿ ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಹುಡುಕಿ ಕೊಡುವ ಕುರಿತು ಸಲ್ಲಿಸಿದ ದೂರು ಯಲ್ಲಾಪುರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 245/2023 ಕಲಂ ಹೆಂಗಸು ಕಾಣಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪತ್ತೆ ಕಾರ್ಯ ಮುಂದುವರಿಸಿದ್ದು ಇರುತ್ತದೆ.
ಕಾಣೆಯಾದವಳ ವಿವರ ಈ ಕೆಳಗಿನಂತೆ ಇರುತ್ತದೆ. ಹೆಸರು ಕು|| ತೇಜಾ ತಂದೆ ರಾಮಕೃಷ್ಣ ಭಟ್ ವೃತ್ತಿ ಖಾಸಗಿ ಕೆಲಸ ಸಾ ದೇಸಾಯಿ ಮನೆ ಪೋಸ್ಟ ಚಂದಗುಳಿ ತಾ || ಯಲ್ಲಾಪುರ ಸುಮಾರು 5 ಪೂಟ್. 02 ಇಂಚು ಮೈ ಬಣ್ಣ ಗೋಧಿ ವರ್ಣ ಮುಖ ಹಾಗೂ ಚಹರೆ, ದುಂಡನೆ ಮುಖ, ಕಪ್ಪು ಕೂದಲು ಧರಿಸಿದ ಬಟ್ಟೆಗಳು ಹಳದಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಮಾತನಾಡುವ ಭಾಷೆಗಳುಕನ್ನಡ, ಇಂಗ್ಲೀಷ್ ಭಾಷೆ ಮಾತನಾಡುತ್ತಾಳೆ ಈ ಮೇಲಿನಂತೆ ಚಹರೆ ಹೊಂದಿರುವ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
1) ಯಲ್ಲಾಪುರ ಪೊಲೀಸ್ ಠಾಣೆ-08419-261133
2) ಪೊಲೀಸ್ ನಿರೀಕ್ಷಕರು ಯಲ್ಲಾಪುರ- 9480805757
3) ಪಿ.ಎಸ್.ಐ ಯಲ್ಲಾಪುರ- 9480805273 ಈ ಯುವತಿ ಕಂಡು ಬಂದಲ್ಲಿ ಅದರಿ ಈ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಲು ಯಲ್ಲಾಪುರ ಪೋಲಿಸರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಕಾಣೆಯಾದ ಸುದ್ದಿ ತಿಳಿದ ದಿನದಿಂದ ತಾಯಿ ಹಾಸಿಗೆ ಹಿಡಿದಿದ್ದು ದಯವಿಟ್ಟು ಬರಲಿಕ್ಕೆ ಆಗದಿದ್ದರೆ ಪೊನ ಕರೆ ಮುಖಾಂತರ ಅಮ್ಮ ನಾನು ಆರಾಮವಾಗಿದ್ದೆನೆ ಎಂದು ಒಮ್ಮೆಯಾದರು ಮಾತನಾಡು ಎಂದು ತಾಯಿ ಪೋಲಿಸರ ಮುಂದೆ ಅಳಲು ತೊಡಿಕೊಂಡಿದ್ದಾಳೆ.
ವರದಿ ಬ್ರಹ್ಮಾನಂದ ಪತ್ತಾರ