ಹುಕ್ಕೇರಿ:-ನರೇಗಾ ಕಾರ್ಮಿಕನ ಮೇಲೆ ಮರ ಬಿದ್ದು ಮೂಳೆ ಮುರಿದರು ಸ್ಥಳಕ್ಕೆ ಬಾರದ ಅಧಿಕಾರಿಗಳು ಹಾಗೂ ಸದಸ್ಯರು. ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಪಂಚಾಯತಿ ವ್ಯಾಪ್ತಿಗೆ ಬರುವ ಅರಣ್ಯ ಇಲಾಖೆಯ ಸರ್ವೆ ನಂಬರ ೧೧೯ ರಲ್ಲಿ (MGNRG)ಯೋಜನೆ ಅಡಿಯಲ್ಲಿ ಕೆರೆ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿತ್ತು. ಕಾಮಗಾರಿ ನಡೆಯುವ ಸ್ಥಳದಲ್ಲಿ ಒರ್ವ ವ್ಯಕ್ತಿಯ ಮೇಲೆ ಮರ ಮುರಿದು ಬಿದ್ದು ಬೆನ್ನೂ ಮೂಳೆ ಮುರಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇನ್ನೂ ನಮ್ಮ ಮೈ ತಿನ್ನುತ್ತದೆಯೆಂದು ಯಾವೊಬ್ಬ ಅಧಿಕಾರಿಗಳು ಕೂಡಾ ಕಾರ್ಮಿಕನ ನೆರವಿಗೆ ಇದುವರೆಗೆ ಧಾವಿಸಿಲ್ಲ. ಉದ್ಯೋಗ ಖಾತರಿ ಕೂಲಿ ಕಾರ್ಮಿಕನ ಮೇಲೆ ಗಿಡ ಮುರಿದು ಬಿದ್ದು ಬೆನ್ನು ಮೂಳೆ ಮುರಿದಿದ್ದು ಕಾರ್ಮಿಕ ಪ್ರಾಣಾಪಾಯದಿಂದ ಏನೊ ಪಾರಾಗಿದ್ದಾನೆ! ಆದರೆ ಬೆನ್ನು ಮೂಳೆ ಮುರಿತದಿಂದ ಕಾರ್ಮಿಕನ ಸ್ಥಿತಿ ಚಿಂತಾ ಜನಕವಾಗಿದೆ. ಇದಕ್ಕೆಲ್ಲ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಅಧಿಕಾರ ದುರುಪಯೋಗ ಕೂಲಿ ಕಾರ್ಮಿಕರನ್ನು ನಿರ್ಲಕ್ಷತನದಿಂದ ನೋಡುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರ್ಮಿಕರು ಕಾಮಗಾರಿ ಮಾಡುವ ಸಂದರ್ಭದಲ್ಲಿ ಯಾರಾದರೂ ಒಬ್ಬ ಆಡಳಿತ ಮಂಡಳಿಯವರು ಇರಬೇಕಾಗಿರುತ್ತದೆ. ಆದರೆ ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಯಾವೊಬ್ಬ ಅಧಿಕಾರಿಯೂ ಕೂಡ ಇರುವುದಿಲ್ಲ. ಅದು ಏನೇ ಆಗಿರಲಿ ಬಡ ಕುಲಿ ಕಾರ್ಮಿಕ ಒಂದು ಹೊತ್ತು ಊಟಕ್ಕಾಗಿ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿರುವಾಗ ಇಷ್ಟೆಲ್ಲಾ ಘಟನೆ ನಡೆದು ಹೋದರು ಪಂಚಾಯಿತಿ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ಕ್ಯಾರೆ ಎನ್ನುತ್ತಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಪಂಚಾಯತಿಯ ಕಾರ್ಯ ವೈಕರಿಗೆ ಹಾಗೂ ಆಡಳಿತ ಮಂಡಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತು ಕೂಲಿ ಕಾರ್ಮಿಕನ ಬೆನ್ನಿಗೆ ನಿಂತು ಸಹಾಯ ಹಸ್ತ ಚಾಚ ಬೇಕೆಂಬುದು ಅಲ್ಲಿನ ಗ್ರಾಮಸ್ಥರ ಒತ್ತಾಯವಾಗಿದೆ.ವರದಿ:-ಚಂದ್ರು ತಳವಾರ


