ಕಣದಲ್ಲಿರುವ ದೇವಸ್ಥಾನ ಜೀರ್ಣೋದ್ಧಾರಕ ಕೈ ಹಿಡಿಯುತ್ತಾನಾ ಖಾನಾಪುರ ಮತದಾರ
ಖಾನಾಪುರ:ರಾಜ್ಯಸಭಾ ಚುನಾವಣೆ ರಂಗೇರುತ್ತಿದ್ದು ರಾಜಕೀಯ ಪಕ್ಷಗಳು ತಮ್ಮ ಬಲಾಬಲ ತೋರಿಸುವಲ್ಲಿ ನಿರತವಾಗಿದ್ದು ಅದರಂತೆ ಖಾನಾಪುರ ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ನಾಸೀರ್ ಭಾಗವಾನ್ ಖಾನಾಪುರದ ದೇವಸ್ಥಾನಗಳ ಜೀರ್ಣೋದ್ಧಾರಕ ಎಂದೇ ಪ್ರಸಿದ್ದಿಯಾಗಿದ್ದು ಅಲ್ಲದೇ ಪೂರ್ವದ ಕನ್ನಡ ಭಾಗದ ಏಕೈಕ ಅಭ್ಯರ್ಥಿಯಾಗಿದ್ದು ಈ ಬಾರಿ ಖಾನಾಪುರ ಮತದಾರ ಕೈ ಹಿಡಿಯುತ್ತಾನಾ ಎಂದು ಕಾದು ನೋಡಬೇಕಿದೆ ಈ ನಡುವೆ ಅಬ್ಬರದ ಪ್ರಚಾರ ನಡೆಸಿತ್ತಿರುವ ನಾಸೀರ್ ಭಾಗವಾನ್ ಹೋದ ಕಡೆಯಲ್ಲೆಲ್ಲ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
ಯಾವುದೇ ಸ್ಟಾರ್ ಪ್ರಚಾಕರಿಲ್ಲದೆ ತನ್ನ ಕರ್ಯಕರ್ತರೇ ಸ್ಟಾರ್ ಪ್ರಚಾರಕರೆಂದು ಕುಮಾರಣ್ಣ ಹೇಳಿದ್ದು ಅವರ ಮಾತಿನಂತೆ ನಡೆಯುತ್ತಿರುವ ನಾಸೀರ್ ಭಾಗವಾನ್ ಯಾವುದೇ ಸ್ಟಾರ್ ಪ್ರಚಾರಕರನ್ನ ಕರೆಸದೇ ತಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು ನಮಗೆ ನೀವೆ ಸ್ಟಾರ್ ಪ್ರಚಾರಕರೆಂದು ಕಾರ್ಯಕರ್ತರನ್ನ ಹುರಿದುಂಬಿಸುತ್ತಿದ್ದಾರೆ ನಾಸೀರ್ ಭಾಗವಾನ್ ಅವರು ದೇವಸ್ಥಾನಗಳ ಜೀರ್ಣೋದ್ಧಾರ ಅಷ್ಟೇ ಅಲ್ಲದೇ ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ತಮ್ಮ ಸ್ವಂತ ಹಣದಿಂದ ಬ್ರಿಡ್ಜ್ ನಿರ್ಮಿಸಿಕೊಟ್ಡಿದ್ದು ಆ ಭಾಗದ ಜನ ನಿತ್ಯದ ಕೆಲಸಗಳಿಗೆ ಶಾಲಾ ಮಕ್ಕಳಿಗೆ ಜೀವನೋಪಾಯಕ್ಕೆ ದಾರಿಯಾಗಿದೆ
#ತಂದೆಗೆ ತಕ್ಕ ಮಕ್ಕಳು ತಂದೆಯನ್ನ ಗೆಲ್ಲಿಸುವದೇ ಗುರಿ ಎಂದ ಹಿರಿಯ ಮಗ ರಯೀಸ್ ಭಾಗವಾನ್ #
ನಾಸೀರ್ ಭಾಗವಾನ್ ಅವರ ಹಿರಿಯ ಸುಪುತ್ರ ರಯೀಸ್ ಅವರು ಹೆಚ್ಚಾಗಿ ಕ್ಷೇತ್ರದಲ್ಲಿ ಇದುವರೆಗೆ ಕಾನೊಸಿಕೊಂಡಿದ್ದಿಲ್ಲ ಆದರೆ ಈ ಬಾರಿ ಚುನಾವಣೆಯಲ್ಲಿ ತಂದೆಯನ್ನ ಗೆಲ್ಲಿಸುವ ಗುರಿ ಹೊಂದಿರುವ ರಯೀಸ್ ಬಾಗವಾನ್ ಅವರು ಎರಡು ಜಿಲ್ಲಾ ಪಂಚಾಯತ ಕ್ಷೇತ್ರಗಳ ಜವಾಬ್ದಾರಿ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹಗಲಿರುಳು ಜನ ಸಂಪರ್ಕದಲ್ಲಿ ತೊಡಗಿದ್ದಾರೆ
#ತನೂ ಯಾರಿಗೇನು ಕಮ್ಮಿ ಇಲ್ಲ ಎಂದ ಮಗಳು ಅನಿಸಾ#
ತನ್ನ ಸಹೋದರರಂತೆ ತಾನೂ ಯಾವುದಕ್ಕೂ ಕಡಿಮೆ ಇಲ್ಲ ಎನ್ನವಂತೆ ಕ್ಷೇತ್ರದಲ್ಲಿ ಮನೆಮನೆಗೂ ತೆರಳಿ ಪ್ರಚಾರ ನಡೆಸಿರುವ ಮಗಳು ಅನಿಸಾ ಭಗವಾನ್ ಕಿಲ್ಲೆದಾರ್ ಕಕ್ಕೇರಿ ಪಾರೀಶ್ವಾಡ್ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ಓಡಾಡಿ ತಂದೆಯ ಪರ ಮತ ಯಾಚಿಸುವದಲ್ಲದೆ ಕುಮಾರಣ್ಣನ ಅಭಿವೃದ್ಧಿ ಪರ ಕೆಲಸಗಳು ಮತ್ತು ಯೋಜನೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದು ಮಕ್ಕಳ ಜೊತೆಗೂಡುವುಕೆಯಿಂದ ಆನೆ ಬಲ ಬಂದಂತಾಗಿದೆ ಎಂದ ನಾಸೀರ್ ಭಾಗವಾನ್
#ಈ ಬಾರಿ ನಮ್ಮ ಸರಕಾರ ಅಧಿಕಾರಕ್ಕೆ ನಾಸೀರ್ ಭಾಗವಾನ್ #
ಮಾತನಾಡಿದ ಅಭ್ಯರ್ಥಿ ನಾಸೀರ್ ಭಾಗವಾನ್ ರಾಜ್ಯದಲ್ಲಿ ಕುಮಾರಣ್ಣ ಜನಸ್ನೇಹಿ ಆಡಳಿತ ನಡೆಸಿದ್ದು ಜನರ ಮನಸಲ್ಲಿ ಅಚ್ಚಳಿಯದೆ ಉಳಿದಿದ್ದು ಈ ಬಾರಿ ಪ್ರಣಾಳಿಕೆಯಲ್ಲಿ ರೈತರು ಮತ್ತು ಹೆಣ್ಣುಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಈ ಬಾರಿ ನಮ್ಮ ಸರಕಾರ ಬಹುಮತದಿಂದ ಗೆದ್ದು ಬರಲಿದ್ದು ಖಾನಾಪುರದಲ್ಲಿ ಈಗಿನ ಶಾಸಕರ ಕಾರ್ಯವೈಖರಿ ತಾವೆಲ್ಲ ನೋಡಿದ್ದು ತಾಲೂಕಿನ ರಸ್ತೆಗಳು ಹೆಸರುವಾಸಿಯಾಗಿವೆ ಅಲ್ಲದೆ ಕೇವಲ ಚುನಾವಣೆ ಬಂದಾಗ ಮಾತ್ರ ನಮ್ಮ ಶಾಸಕರು ಕಾನಿಸುತ್ತಾರೆ ಹೊರತಾಗಿ ಉಳಿದ ದಿನ ಎಲ್ಲಿತ್ತಾರೆ ಎನ್ನುವದು ಯಕ್ಷಪ್ರಶ್ನೆಯಾಗಿದ್ದು ಇದಕ್ಕೆಲ್ಲ ನಾಂದಿ ಹಾಡುವ ಸಮಯ ಬಂದಿದ್ದು ತಾಲೂಕಿನ ಮತದಾರರು ಎಚ್ಚೆತ್ತುಕೊಳ್ಳಬೇಕಿದೆ ಎಂದರು ಅಲ್ಲದೇ ನನ್ನ ಮಕ್ಕಳು ನನ್ನ ಬೆನ್ನೆಲುಬಾಗಿ ನಿಂತಿರುವದು ನನಗೆ ಹೊಸ ಹುನ್ನಸ್ಸು ತಂದಿದ್ದು ಈ ಬಾರಿ ಖಾನಾಪುರ ಮತದಾರ ನನ್ನ ಕೈ ಹಿಡಿಯುವ ಸಂಪೂರ್ಣ ವಿಶ್ವಾಸವಿದೆ ಎನ್ನುತ್ತಾರೆ