ಮೂಡಲಗಿ; ನಾಯಿ ಕೊಡೆಯಂತೆ ಬೆಳೆದು ನಿಂತ ನಕಲಿ ತಜ್ಞ ವೈದ್ಯ.!
ಬೆಳಗಾವಿ; ಜಿಲ್ಲೆ ಮೂಡಲಿಗಿ ಪಟ್ಟಣದಲ್ಲಿ ಡಾ: ಎ.ಕೆ ಸಮಸ್ವತಿ ಎಂಬ ನಕಲಿ ವೈದ್ಯ ಮೂಲವ್ಯಾದಿ ತಜ್ಞ ಎಂದು ಹೇಳಿ ವಂಚಿಸುತ್ತಿರುವದು ತಡವಾಗಿ ಬೆಳಕಿಗೆ ಬಂದಿದೆ. ಈತ ಮೂಲತ ಬೆರೆ ರಾಜ್ಯದವನಾಗಿದ್ದು ೩೦ ವರ್ಷಗಳಿಂದ ಮೂಡಲಿಗಿಯ ಬಾಡಿಗೆ ಮನೆಯಲ್ಲಿ ತನ್ನ ದವಾಖಾನೆಯನ್ನು ನಡೆಸುತ್ತಾನೆ.
ಈತನ ಅರೆ ಬರೆ ಕನ್ನಡ ಭಾಷೆಗೆ ಬೆರಗಾಗದವರು ಒಬ್ಬರು ಇಲ್ಲ.
ಹೆಚ್ಚು ಕಡಿಮೆ ಹಳ್ಳಿಗಳಿಂದ ಬರುವ ಜನರೇ ಈತನ ಟಾರ್ಗೆಟ್. ಸಮಸ್ಯೆ ಒಂಚೂರ ಆಗಿದ್ದರೆ, ಈತ ಅದಕ್ಕೆ ಸಾವಿರ ಸುಳ್ಳುಗಳನ್ನ ಹೇಳಿ ಕ್ಯಾನ್ಸರ್ ಆಗುತ್ತೆ ಅಂತ ಜನರನ್ನು ಹೆದರಿಸುತ್ತಾನೆ. ದೊಡ್ಡ ದೊಡ್ಡ ದವಾಖಾನೆಗಳು ಸಾಕಷ್ಟು ಇವೆ. ಜಿಲ್ಲೆಯಲ್ಲಿ ಸಾಕಷ್ಟು ಎಂಬಿ ಬಿಎಸ್ ಪದವಿ ಹೊಂದಿದ ಡಾಕ್ಟರಗಳಿದ್ದಾರೆ. ಅಂತವರಿಗೆ ಈತ ತನ್ನ ಉಡಾಫೆ ಮಾತುಗಳಿಂದ, ತಾನೇ ಬಲು ಶಾಣೆ ಎಂಬಂತೆ ಬೇರೆ ಅಸಲಿ ವೈದ್ಯರ ಕುರಿತು ಕೀಳು ಮಟ್ಟದಾಗಿ ಮಾತನಾಡಿ ಜನರ ಬಾಯಿಂದ ತಾನೇ ಭೇಷ್ ಎಂಬಂತೆ ಮಾತನಾಡಿಸಿಕೊಳ್ಳುವುದು ಈತನ ಚಾಳಿಯಾಗಿದೆ.
ದಿನಕ್ಕೆ ನೂರಾರು ರೋಗಿಗಳಿಗೆ ಆಪರೇಷನ್ ಮಾಡಿ ರೋಗಿಗಳ ಹತ್ರ ಸಾಕಷ್ಟು ದುಡ್ಡು ವಸಿಲಿ ಮಾಡುತ್ತಾರೆ.
ಪಿಸ್ತೂಲ್ ಮೂಲವಾದಿ ಇದೆ ಕ್ಯಾನ್ಸರ್ ಆಗುತ್ತದೆ ಎಂದು ಹೆದರಿಸಿ ಆಪರೇಷನ್ ಗೆ ಇಳಿಯುತ್ತಾನೆ ಈ ಭೂಪ.!
ಬೇಕಾದ್ರೆ ಕೇಳಿ ಬಾಜು ಮನಿ ಆಂಟಿ ಗುಳಿಗಿ ಔಷಧ ಅಂತಾ ಸುಮಾರು ೩ ಲಕ್ಷ ಖರ್ಚು ಮಾಡಿರುತ್ತಾಳೆ ಅಂತಾ ಉದಾಹರಣೆ ಕುಡಾ ಕೊಡುತ್ತಾನೆ ಈ ನಕಲಿ ತಜ್ಞ ವೈದ್ಯ.
ಮತ್ತೆ ಹೇಳುತ್ತಾನೆ ನಾನು ಹಾಗಲ್ಲ ದಿನಕ್ಕೆ ೫ ರೋಗಿಗಳಿಗೆ ಮಾತ್ರ ಚಿಕಿತ್ಸೆ ಮಾಡೋದು ಅಂತಾ. ಬೇರೆ ದೊಡ್ಡ ಡಾಕ್ಟರ ಒಂದು ಆಪರೇಷನ್ ಗೆ ೩೫೦೦೦ ರೂಪಾಯಿ ತೆಗೆದುಕೊಳ್ಳುತ್ತಾರೆ. ನಾನು ಹಾಗಲ್ಲ ಕೇವಲ ೧೫000 ರೂಪಾಯಿ ಮಾತ್ರ ತೆಗೆದುಕೊಳ್ಳುತ್ತೇನೆ ಎಂದು ನಮ್ಮ ಸ್ಪ್ರಿಂಗ್ ಆಪರೇಷನ್ ಕಾರ್ಯಾಚರಣೆಯಲ್ಲಿ ಬಡಪಡಿಸಿದ್ದಾನೆ.
ಬಹಳ ದಿನಗಳಿಂದ ಇಷ್ಟೆಲ್ಲಾ ಮಾಹಿತಿ ಗೊತ್ತಿದ್ದರು ಇದನ್ನು ತಡೆಯುವಲ್ಲಿ ತಾಲೂಕ ಆರೋಗ್ಯ ಇಲಾಖೆ ಅಧಿಕಾರಿ ಮುತ್ತಣ್ಣ ಕೊಪ್ಪದ ವಿಫಲರಾಗಿದ್ದಾರೆ.ಕರ್ನಾಟಕ ಖಾಸಗಿ ಆಸ್ಪತ್ರೆಗಳ ಅಧಿನಿಯಮ-೨೦೦೭ ರ ಅಡಿಯಲ್ಲಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿ ಅನುಮತಿ ಪಡೆದುಕೊಂಡು ಕಾರ್ಯ ಆರಂಭ ಮಾಡಬೇಕು. ಒಂದು ವೇಳೆ ಅನುಮತಿ ಪಡೆಯದೆ ಆರಂಭಿಸಿದರೆ ತಕ್ಷಣ ಸ್ಥಗಿತಗೊಳಿಸಿ ಅನುಮತಿ ಪಡೆಯಬೇಕು.
ಅದರಲ್ಲೂ ವೈದ್ಯರು ಅಲ್ಲದವರು ವೈದ್ಯ ವೃತ್ತಿ ಮಾಡುತ್ತಿದ್ದಲ್ಲಿ ಕಾನೂನು ರೀತಿಯಲ್ಲಿ ಎಫ್.ಐ.ಅರ್ ದಾಖಲಿಸಬೆಕು ಅದು ಕೂಡ ಇದುವರೆಗೆ ಯಾರಿಂದ ಆಗಿಲ್ಲ. ವೈದ್ಯ ಪದವಿ ಪಡೆಯದವರು ಗೊತ್ತಿಲ್ಲದ ಔಷಧಿಗಳನ್ನು ಜನತೆಗೆ ನೀಡುವುದರಿಂದ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಆದ್ದರಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಈ ಪ್ರಸಿದ್ಧ ನಕಲಿ ತಜ್ಞ ವೈದ್ಯನ ಓಟಕ್ಕೆ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಜರ್ನಲಿಸ್ಟ: ಚಂದ್ರು ತಳವಾರ


