ನಿಪನಾಳ ಗ್ರಾಮದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ.!
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದಲ್ಲಿ ೫೦ ನೇಯ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.
ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚ ಜನ್ಯವಾಗುತ್ತದೆ. ಕನ್ನಡಕ್ಕಾಗಿ ಕಿರು ಬೆರಳನ್ನೇತ್ತಿದರೂ ಸಹ ಅದು ಗೋವರ್ಧನಗಿರಿಯಾಗುತ್ತದೆ.
ಎಂದು ಹೇಳಿದ ರಸ ಋಷಿ ಕುವೆಂಪು ಅವರ ಮಾತುಗಳನ್ನು ನೆನೆದು ನಾವೆಲ್ಲರೂ ಕನ್ನಡ ರಕ್ಷಣೆಗಾಗಿ ಬದ್ಧರಾಗಿರಬೇಕು. ಕನ್ನಡಕ್ಕಾಗಿ ನಮ್ಮ ತನು ಮನ ಧನವನ್ನು ಸವಿಸಬೇಕು.
ಕನ್ನಡ ರಕ್ಷಣೆಗಾಗಿ ಕಂಕಣ ಬದ್ಧರಾಗಿರಬೇಕು ಎಂದು ಶ್ರೀ ಜಿ ಬಿ ಸಗಟೆ ಸರ್ ಹೇಳಿದರು. ದಿನಾಂಕ ೦೧/೧೧/೨೦೨೩ ರಂದು ಸರ್ಕಾರಿ ಪ್ರೌಢ ಶಾಲೆ ನಿಪನಾಳದಲ್ಲಿ ಕರ್ನಾಟಕ ಸಂಭ್ರಮ 50 ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆಯನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾನಪ್ಪ ಬೋರಗೌಡ ಅವರು ಕನ್ನಡ ಧ್ವಜಾರೋಹಣವನ್ನು ಮಾಡಿದರು.
ವಿದ್ಯಾರ್ಥಿಗಳಿಂದ ಕನ್ನಡ ಪರ ಗೀತೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಬಹುಮಾನವನ್ನು ನೀಡಲಾಯಿತು.
ಶ್ರೀ ಎಂ ಕೆ ನದಾಫ್ ಸರ್ ನುಡಿ ನಮನವನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಸದಸ್ಯರುಗಳಾದ ರಾಯಪ್ಪ ವ್ಯಾಪಾರಿ, ಸುರೇಂದ್ರ ಪೋತದಾರ, ಉಮಾ ನದಾಫ, ಅಣ್ಣಾಸಾಹೇಬ್ ದೇಸಾಯಿ, ವಿಠಲ ಬೋರಗೌಡ, ಮಾಳಪ್ಪ ಹುರಕಡ್ಲಿ ಭಾಗವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವೆಂಕಪ್ಪ ಮಾಯನ್ನವರ ಹಾಗೂ ಗ್ರಾಮ ಪಂಚಾಯತಿಯ ಸದಸ್ಯರುಗಳು, ಕರವೇ ಅಧ್ಯಕ್ಷರು, ಸದಸ್ಯರುಗಳು, ಊರಿನ ಗಣ್ಯರು ಭಾಗವಹಿಸಿದ್ದರು.
ಶಾಲೆಯ ಎಲ್ಲಾ ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು. ವಿಶೇಷವಾಗಿ ಶ್ರೀ ಜಿಟಿ ಬಡಿಗೇರ್ ಸರ್ ಸ್ವಾಗತಿಸಿದರು. ಶ್ರೀ ಎಂ ಜಿ ಜೋಣಿ ಗುರುಗಳು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಸುರೇಂದ್ರ ಪೋತದಾರ


