ಮದಿಹಳ್ಳಿ ಗ್ರಾಮದಲ್ಲಿ ಕುರಿ ಬಲಿ ಪಡೆದ ಖತರ್ನಾಕ ತೋಳ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ಬೆಳಂ ಬೆಳಿಗ್ಗೆ ತೋಳದ ಬಾಯಿಗೆ ಸಿಲುಕಿ15 ಕುರಿಗಳು ಬಲಿಪಡೆದ ಘಟನೆ ಬೆಳಿಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಕರೆಪ್ಪಾ ಖುಬಾನಗೋಳ ಎಂಬುವವರು ಸಾಕಿದ ಮದಿಹಳ್ಳಿ ಗ್ರಾಮದಲ್ಲಿ ನಿನ್ನೆ ಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಮನೆಯವರೆಲ್ಲ ಬಯಲು ನಾಟಕ ನೊಡಲು ಹೊಗಿದ್ದರೆನ್ನಲಾಗಿತ್ತು.ರಾತ್ರಿ ಸಮಯದಲ್ಲಿ ದಾಳಿ ಮಾಡಿದ ತೋಳ ಸುಮಾರು 15 ಕುರಿಗಳ ಮೇಲೆ ಮುರಿದು ಬಿಟ್ಟಿದೆ. ಇನ್ನೂ ಕರಿಯಪ್ಪ ಹಲವೂ ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದರು ಮೂಲತಃ (ಕುರುಬರೆ) ಒಟ್ಟು60 ಕುರಿಗಳ ಪೈಕಿ 15 ಕುರಿಗಳ ಮೇಲೆ ದಾಳಿ ಮಾಡಿದ ತೋಳ ಕುರಿಗಳನ್ನ ಬಲಿ ಪಡೆದಿದೆ. ಇವುಗಳಲ್ಲಿ 2 ಕುರಿಗಳನ್ನು ಎಳೆದೊಯ್ದಿದೆ. 12 ಕುರಿಗಳನ್ನು ಕೊಂದು ಅಲ್ಲೆ ಬಿಟ್ಟು ಹೊಗಿದೆ.ಎಂದು ಕುರಿಗಳ ಮಾಲೀಕ ಕರೆಪ್ಪ ಖುಬಾನಗೊಳ ಮಾಹಿತಿ ನೀಡಿದ್ದಾರೆ. ಇನ್ನೂ ಘಟನೆ ಬಗ್ಗೆ ಮಾಹಿತಿ ತಿಳಿದ ಹುಕ್ಕೇರಿ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದ್ದಾರೆ. ಪಶು ಇಲಾಖೆ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ವರದಿ:-ಚಂದ್ರು ತಳವಾರ
ಮದಿಹಳ್ಳಿ ಗ್ರಾಮದಲ್ಲಿ ಕುರಿ ಬಲಿ ಪಡೆದ ಖತರ್ನಾಕ ತೋಳ!
Leave a comment
Leave a comment


