ನಿಜಗುಣಾನಂದ ಪ್ರಭು ಮಹಾ ಸ್ವಾಮಿಗಳಿಗೆ ಮೇಲಿಂದ ಮೇಲೆ ಜೀವ ಬೆದರಿಕೆ ಪತ್ರಗಳು ಖಂಡಸಿ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ.!
ಬೆಳಗಾವಿ: ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ಮಹಾ ಸ್ವಾಮಿಗಳಿಗೆ ಮೇಲಿಂದ ಮೇಲೆ ಜೀವ ಬೆದರಿಕೆ ಪತ್ರಗಳು ಬರುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳಿಗೆ ಸೂಕ್ತ ಬಿಗಿ ಭದ್ರತೆ ಒದಗಿಸಬೇಕು ಹಾಗೂ ದುಷ್ಕರ್ಮಿಗಳನ್ನು ಪತ್ತೆಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ವತಿಯಿಂದ ಹಾಗು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾಣಿ ಸಂಘಟನೆಯ ವತಿಯಿಂದ ಜಿಲ್ಲಾ ಅಧಿಕಾರಿ ಮೂಲಕ ಮುಖ್ಯಮಂತ್ರಿಗೆ,ಹಾಗು ಗ್ರಹ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಸ್ಥಳೀಯ ರಾಣಿ ಚನ್ನಮ್ಮನ ಸರ್ಕಲ್ಲ ಮೂಲಕ ಮೌನ ಮೆರವಣೆಗೆಯೊಂದಿಗೆ ತೆರಳಿ ಸಾಮೂಹಿಕವಾಗಿ ಜಿಲ್ಲಾ ಅಧಿಕಾರಿ ಅವರಿಗೆ ಮನವಿ ಸಲ್ಲಿಸಿದರು ಶ್ರೀಗಳಿಗೆ 28 ದಿನಗಳ ಹಿಂದೆ ಜೀವಬೇದರಿಕೆ ಪತ್ರ ಬಂದಿದೆ.
ಸರ್ಕಾರ ಈ ಬಗ್ಗೆ ಶೀಘ್ರಗತಿಯಲ್ಲಿ ತನಿಖೆಯನ್ನು ನಡೆಸಿ, ತಪ್ಪಿತಸ್ಥ ದುಷ್ಕರ್ಮಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಈಶ್ವರ ಗುಡಜ ಮಾತನಾಡಿ ಈ ದೇಶದಲ್ಲಿ ಪ್ರಗತಿಪರ ವಿಚಾರವಾದಿಗಳು ತಮ್ಮ ಮನದಾಳದ ಮಾತನ್ನು ಬಿಚ್ವಿ ಹೇಳಲು ಅವಿಭಕ್ತ ಸ್ವಾತಂತ್ರ್ಯ ಇಲ್ಲದೆ ಇರುವದು ಈ ದೇಶದ ಒಂದು ದುರಂತ. ಮನದಾಳದ ಮಾತನ್ನು ಬಿಚ್ಚಿ ಹೇಳಿದರೆ ಅಂತವರಿಗೆ ಜೀವ ಬೆದರಿಕೆ ಹಾಕುತ್ತಿರುವ ಮತಿ ಇಲ್ಲದ ಕಿಡಿಗೇಡಿಗಳು ಈ ದೇಶದ ಸೌಹಾರ್ದತೆಯನ್ನು, ಪ್ರೀತಿ ವಿಶ್ವಾಸಗಳನ್ನು ಕಲಕಿಸುತ್ತಿರುವ ಮುಟ್ಟಾಳರನ್ನು ಬಂಧಿಸಿ, ಪೂಜ್ಯ ಶ್ರೀಗಳ ಬುದ್ದ ಬಸವ ಅಂಬೇಡ್ಕರ್ ವಿಚಾರಧಾರೆ ಗಳನ್ನು ಫಸಲಿಸುತ್ತಿರುವ ಶರಣರಿಗೆ ಭದ್ರತೆ ಹಾಗೂ ರಕ್ಷಣೆ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಕರ್ನಾಟಕ ಭೀಮ ರಕ್ಷಕ ಸಂಘಟನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಮಂಜುಳಾ ರಾಮಗಾಣಟ್ಟಿ.ಮಾತನಾಡಿ ಬುದ್ದ, ಬಸವ ಅಂಬೇಡ್ಕರ ಅವರ ತತ್ವ ಸಿದ್ದಾಂತಗಳನ್ನು ಜನರಲ್ಲಿ ಬಿತ್ತರಿಸುವ ಮೂಲಕ ಸಮಾಜದಲ್ಲಿಯ ಹರಡಿರುವ ಮೂಢನಂಬಿಕೆಗಳ ವಿರುದ್ಧ ಜನರನ್ನು ಜಾಗೃತಗೊಳಿಸಿ ವಚನ ಸಾಹಿತ್ಯದೊಂದಿಗೆ ಸಮಾಜದಲ್ಲಿ ಸಮಾನತೆ ಮೂಡಿಸುತ್ತಿರುವ ನಿಜಗುಣಾನಂದ ಮಹಾಸ್ವಾಮಿಗಳ ವಿರುದ್ಧ ಈ ರೀತಿಯ ಜೀವ ಬೆದರಿಕೆ ಸಂಸ್ಕೃತಿ ಹೇಯ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ವಾಣಿ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಬಸವರಾಜ ದೊಡಮನಿ ಮಾತನಾಡಿ ಸಮಾಜ ಸುಧಾರಕರ ಮೇಲೆ ಮೇಲಿಂದ ಮೇಲೆ ಇಂತಹ ಬೆದರಿಕೆ ಪತ್ರಗಳು ಬರುತ್ತಿದ್ದು ಇವುಗಳಿಗೆ ನಾವುಗಳು ಆತಂಕ ಪಡಬೇಕಾಗಿಲ್ಲ.
ಚಿಂತಕರನ್ನು ನಾಶ ಮಾಡುಲು ಹೊರಟ ಸಂಪ್ರಧಾಯಗಳ ವಿರುದ್ಧ ಇಂತಹ ಅನೇಕ ಚಿಂತಕರು ಸಮಾಜ ಸುಧಾರಕರು ಹುಟ್ಟಿಕೊಳ್ಳುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪರಿಸ್ಥಿತಿ ಜಾತಿ ಪರಿಶಿಷ್ಟ ಪಂಗಡದ ಸಮಿತಿ ಸದಸ್ಯರಾದ ಕರೆಪ್ಪ ಗುಡೆನ್ನವರ್ ಉದಯ್ ರೆಡ್ಡಿ. ಕರ್ನಾಟಕ ಭೀಮರಕ್ಷಕ ಸಂಘಟನೆಯ ಸಹ ಕಾರ್ಯದರ್ಶಿಯಾದ ಜಿಯಾವುಲ್ಲಾ ವಂಟಮೂರಿ,ಪರಶುರಾಮ ರಾಮಗಾನಟ್ಟಿ.ಅಶೋಕ ಗಾಡಿವಡ್ಡರ, ಅಯ್ಯಪ್ಪ ಮೇಸ್ತ್ರಿ,ರಮೇಶ ಆಲೂರು, ರಾಘವೇಂದ್ರ ಹಾದಿಮನಿ, ದೇವು ದಾವಣೆ, ಪ್ರವೀಣ್ ಮಾದರ,ದಲಿತ ಮುಖಂಡರು ಹಾಜರಿದ್ದರು.


