ಹುಕ್ಕೇರಿ: ಭಾರಿ ಅಪಘಾತ ಸ್ಥಳದಲ್ಲೆ ಇಬ್ಬರ ಧಾರುಣ ಸಾವು ಹುಕ್ಕೇರಿ ಸಮೀಪ ಹುಕ್ಕೇರಿ ಬೆಳಗಾವಿ ರಸ್ತೆಯಲ್ಲಿ ಸರಿಸುಮಾರು ೫ ಗಂಟೆಗೆ ಬಸ್ ಒಂದನ್ನು ಒವರಟೇಕ ಮಾಡಲು ಹೋಗಿ ಅಪಘಾತ ಸಂಭವಿಸಿದೆ,ಬೆಳಗಾವಿಯಿಂದ ಅಥಣಿ ತಾಲೂಕಿನ ನಂದಗಾವ ಗ್ರಾಮಕ್ಕೆ ತೆರಳುತ್ತಿದ್ದ ಕಾರ್ ಹಾಗೂ ಹುಕ್ಕೇರಿಯಿಂದ ಬೆಳಗಾವಿಕಡೆಗೆ ಹೊಗುವ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ,ವಾಹನಗಳು ನುಜ್ಜುಗುಜ್ಜಾಗಿವೆ,ಅದ್ರಷ್ಟವಶಾತ ಅಜ್ಜಿ ಮೊಮ್ಮಗ ಹಾಗೂ ಚಾಲಕ ಮೂರು ಜನರಿಗೆ ಗಂಭಿರವಾದ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಸ್ಥಳದಲ್ಲಿ ಒರ್ವ ವ್ಯಕ್ತಿ ಜಯಪಾಲ್ ಸಕಲಕ್ಕನವರ,ಹಾಗೂ ಜೈಯಶ್ರೀ ಎನ್ನುವ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಇನ್ನೂ ಹುಕ್ಕೇರಿಯಿಂದ ಬೆಳಗಾವಿ ಕಡೆಗೆ ಹೊಗುವ ಎಕ್ಸ ಯು ವಿ ೫೦೦ ಎಂಬ ಕಾರು ಅತಿ ವೇಗವಾಗಿ ಬರುತ್ತಿತ್ತು.
ಇನ್ನೂ ಬೆಳಗಾವಿ ಕಡೆಯಿಂದ ಅಥಣಿ ತಾಲೂಕಿನ ನಂದಗಾವ ಗ್ರಾಮಕ್ಕೆ ಹೋಗುವ ಸ್ವಿಪ್ಟ ಡಿಜೈರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ವಿಪ್ಟ ಕಾರನಲ್ಲಿದ್ದವರು ಮ್ರತರಾಗಿದ್ದಾರೆ.
ಸ್ವಿಪ್ಟ ಕಾರು KA 59 0946 ಇದ್ದು.ಎಕ್ಸ ಯ ವಿ ೫೦೦ ವಾಹನ ಸಂಖ್ಯೆKA49 M 4244 ಇನ್ನೂ ಗಂಭಿರವಾಗಿ ಗಾಯಕ್ಕೊಳಗಾದವರನ್ನ ಸಮೀಪದ ಹುಕ್ಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಭೆಟಿ ನೀಡಿ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವರದಿ:ಚಂದ್ರು ತಳವಾರ


