ರಾಯಬಾಗ: ಅಳಗವಾಡಿ ರಂಗು ರಂಗಿನಲಿ ಮಿಂದೆದ್ದ ರಂಗಣ್ಣನ ಗೆಳೆಯರ ಬಳಗ
ಸೌಂಡ್ ಗೆ ಸಕತ್ ಸ್ಟೆಪ್ ಹಾಕಿದ ಅಳಗವಾಡಿ ಯುವಕರು.
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸಮೀಪದ ಅಳಗವಾಡಿ ಗ್ರಾಮದಲ್ಲಿ ಶ್ರೀರಂಗ ಬಿದರಿಯವರ ಗೆಳೆಯ ಬಳಗ ವಿಭಿನ್ನ ಹಾಗೂ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬವನ್ನ ಆಚರಿಸಿದರು.
ಪ್ರತಿ ವರ್ಷಕ್ಕಿಂತ ಕೂಡ ಈ ಬಾರಿ ಅದ್ದೂರಿಯಾಗಿ ಬಣ್ಣದ ಹಬ್ಬವನ್ನ ಆಚರಿಸಿದರು, ಈ ಹೋಳಿ ಬಣ್ಣ ರಂಗಿನಾಟ ಸ್ಥಳೀಯ ಸಾಮಾಜಿಕ ಹಾಗೂ ಗೆಳೆಯರ ಪ್ರತಿ ರೂಪದ ಪ್ರತೀಕಾರ ಶ್ರೀರಂಗ ಬಿದರಿ ಇವರ ನೇತೃತ್ವದಲ್ಲಿ ಆಚರಣೆ ನಡೆಯಿತು.ರಂಗಣ್ಣ ಇಲ್ಲದ ಹಬ್ಬ ಜಾತ್ರೆ ಕಾರ್ಯಕ್ರಮ ಬಣ, ಬಣ, ರಂಗಣ್ಣ ಇದ್ರೆ ಫುಲ್ ಜೋಷ್ ಡಿಜೆ ಗೆ ಸಕತ್ ಸ್ಟೆಪ್ ಹಾಕಿ ಡಾನ್ಸ್ ಮಾಡಿದ ಅಳಗವಾಡಿ ಹುಲಿಗಳು.ಹಬ್ಬ ಎಂದು ಗೆಳೆಯರು ಕೇಕೆ ಹಾಕಿ ಜೈಕಾರ ಹಾಕಿದರು.
ಇನ್ನು ಮನೆಯಲ್ಲಿ ತೆಲೆ ಮರೆಸಿಕೊಂಡು ಬಣ್ಣ ಆಡದೆ ಕುಳಿತುಕೊಂಡು ಗೆಳೆಯರನ್ನ ಮನೆ ಮನೆ ಹೋಗಿ ಬಣ್ಣ ಹಚ್ಚಿ ಖುಷಿ ಹಂಚಿಕೊಂಡರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗೆಳೆಯರೊಂದಿಗೆ ಹಾಗೂ ಮುಖಂಡರೊಂದಿಗೆ ಹೋಳಿ ಹಬ್ಬದ ಬಣ್ಣವನ್ನು ಎರಚಿ ಗ್ರಾಮದಲ್ಲಿ ಖುಷಿಯಾಗಿ ಖುಷ್ ರೀತಿಯಲ್ಲಿ ಹಬ್ಬವನ್ನ ಶಾಂತವಾಗಿ ಹಾಗೂ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗೆಳೆಯರ ಮುಖಂಡರಾದ ಹಾಗೂ ಸಾಮಾಜಿಕ ಹಿತಚಿಂತಕರಾದ ಶ್ರೀರಂಗ ಬಿದರಿ ಇವರ ನೇತೃತ್ವದಲ್ಲಿ ಡಿಜೆ ಕಾರ್ಯಕ್ರಮ ಗೆಳೆಯರೆಲ್ಲರೂ ಕೂಡಿ 55 ಸಾವಿರ ಹಣ ಸಂಗ್ರಹಣೆ ಮಾಡಿ ಸೌಂಡ ಸಿಸ್ಟಮ್ ಅಳವಡಿಸಿ ಡಾನ್ಸ್ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಗ್ರಾಮ ಪಂಚಾಯತ ಅದ್ಯಕ್ಷರು ಕುಮಾರ್ ಬನಶಂಕರಿ, ಪಿಕೆಪಿಎಸ್
ಕಾರ್ಯದರ್ಶಿ ದುಂಡಪ್ಪ ಹಲಾನಿ, ರವಿ ಬನಶಂಕರಿ, ಪತ್ರಕರ್ತರು ಮಾರುತಿ ಹಳ್ಳುರೆ, ಡಾ ದೀಕ್ಷಿತ, ಮಾಣಿಕ ಹಂಜೆ, ಊರಿನ ಎಲ್ಲ ಅಭಿಮಾನಿ ಬಳಗ ಗೋಪಾಲ ಹಂಜಿ ಅರಿಹಂತ ಹಂಜಿ ಚೇತನ ಬನಶಂಕರಿ. ಶ್ರೀರಂಗ್ ಬಿದರಿ,ಪ್ರೀತಮ ಕುಂಬಾರ,ಅನಿಲ್ ಬೊಮ್ಮನವರ್,ವಿಟ್ಟಲ್ ಬುಡ್ನಿ,ಮಾನಿಂಗ್ ಹೆಗಡೆ,ಪಿರೋಜ್ ಪಕಾಲಿ,ಕಾಂತೇಶ್ ನಾಯ್ಕ್,ಆನಂದ್ ರಾವ್,ರಾಹುಲ್ ಕಲಾಲ್,ಶಿವಪುತ್ರ ಕೋರೆ,ಇವರ ಸಹಕಾರದಲ್ಲಿ ಹೋಳಿ ಸಂಭ್ರಮಿಸಿದರು.
ಹೀಗೆ ಅನೇಕ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ವರದಿ: ಬ್ರಹ್ಮಾಂನಂದ ಪತ್ತಾರ.


