ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ನ್ಯಾಯಾಲಯದ ಇತಿಹಾಸದಲ್ಲಿ ಸುಮಾರು 200 ಕ್ಕೂ ಅಧಿಕ ವಕೀಲರಿಂದ ಒಂದೇ ಪ್ರಕರಣಗಳಲ್ಲಿ ಕೋರ್ಟ ಕಲಾಪದಲ್ಲಿ ಹಾಜರಾಗಿ ವಕಾಲತ್ತು ವಹಿಸಿದ ಘಟನೆ ಮೂಡಲಗಿ ನ್ಯಾಯಾಲಯದಲ್ಲಿ ನಡೆದಿದೆ.
ಮೂಡಲಗಿ ಪಟ್ಟಣದ ಹಿರಿಯ ವಕೀಲರಾದ ಸುಧೀರ ಗೋಡಿಗೌಡರ ಹಾಗೂ ಅವರ ಪತ್ನಿ ವಕೀಲೆಯಾದ ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆ ಸ್ಪರ್ಧೆಸಿದ್ದ ಶ್ರೀಮತಿ ಶಿಲ್ಪಾ ಗೋಡಿಗೌಡರ ಇಬ್ಬರ ನಡುವೆ ನಡೆದ ಪಾಲು ಕೇಳಿ ದಿವಾಣಿ ವ್ಯಾಜ್ಯವೋಂದರಲ್ಲಿಸುಧೀರ ಗೋಡಿಗೌಡರ ಪರವಾಗಿ ಗೋಕಾಕ ಮತ್ತು ಮೂಡಲಗಿ ನ್ಯಾಯವಾದಿಗಳು ಸಿವಿಲ್ ಕೆಸ್ ಗೆ 200 ಕ್ಕೂ ಅಧಿಕ ವಕೀಲರು ವಕಾಲತ್ತು ವಹಿಸಿದ್ದರು. ಇದು ಮೂಡಲಗಿ ನ್ಯಾಯಾಲಯದಲ್ಲಿ ವಿಶೇಷ ಕಲಾಪದ ದಿನವಾಗಿತ್ತು.
ಸಂಚಲನ ಮೂಡಿಸಿರುವ ಮೂಡಲಗಿ ಕೋರ್ಟ ಪ್ರಕರಣ: ಒಂದು ಪ್ರಕರಣಗಳಲ್ಲಿ ಒಬ್ಬರು,ಇಬ್ಬರು ವಕೀಲರು ಹಾಜರಾಗುವುದನ್ನು ನೋಡಿದೆವೆ. ಆದರೇ ಮೂಡಲಗಿ ನ್ಯಾಯಾಲಯದಲ್ಲಿ 200 ಕ್ಕೂ ಅಧಿಕ ವಕೀಲರು ಒಂದೇ ಕೇಸ್ ಗೆ ಹಾಜರಾಗಿ ವಕಾಲತ್ತು ನೋಡಿ ಇತರೇ ಪಕ್ಷಗಾರರು ಹೌಹಾರಿ ಕೇಲ ಕಾಲ ಗೊಂದಲಕಿಡಾದರು.
ಈ ಸಮಯದಲ್ಲಿ ಹಿರಿಯ ನ್ಯಾಯವಾದಿ ಎಸ್ ಎಮ್ ಹತ್ತಿಕಟ್ಟಗಿ, ಆರ್.ಎಚ್ ಇಟ್ನಾಳ , ಹಾಗೂ ಗೋಕಾಕ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಡಿ ಹುಕ್ಕೇರಿ, ಬಿ.ಎಲ್ ಮಾಳೇದ, ಜಿ.ಎಂ.ಭಟ್ಟಿ , ಎಸ್ ಡಿ, ಪತ್ತಾರ, ಬಿ.ಬಿ ಖಾನಾಪೂರ. ಜೋಕಿ, ಎಸ್.ಎಲ್ ಪಾಟೀಲ ಮುಂತಾದ ವಕೀಲರು ಹಾಜರಿದ್ದರು.


