ರಾಯಬಾಗ: ಹಾಲು ಕುಡಿಯೋ ಮಗುವಿಗೆ, ಅಲ್ಕೋಹಾಲ್ ಕುಡಿಸಿದ ಅಜ್ಜ!
ಬೆಳಗಾವಿ ಜಿಲ್ಲೆ ರಾಯಭಾಗ ಪಟ್ಟಣದ ಪ್ರೀತಮ್ ಬಾರ ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ.
ಅಜ್ಜ ಮೊಮ್ಮಗ ಸೇರಿಕೊಂಡು ಪ್ರೀತಮ್ ಬಾರ್ ಗೆ ಎಂಟ್ರಿ ಆಗುತ್ತಿದ್ದಂತೆ ವೇಟರ್ ಹಾಗೂ ಮ್ಯಾನೇಜರ್ ಶಾಕ್ ಆಗಿದ್ರು ಆಗೋದಲ್ದೆ ಮೊಮ್ಮನಿಗೆ 60 ಪೆಗ್ ಹಾಕಿ ಆ ಪುಟ್ಟ ಬಾಲಕನಿಗೆ ಸಾರಾಯಿ ಕುಡಿಸಿದ ಮನಕಲುಕುವ ದೃಶ್ಯಬೆಳಕಿಗೆ ಬಂದಿದೆ.
ಅಜ್ಜನೊಂದಿಗೆ ಬಾರ್ ಗೆ ತೆರಳಿದ್ದ ಬಾಲಕ ವ್ಯಸನಕ್ಕೆ ಬಲಿಯಾಗಿದ್ದಾನೆ.
ಅಜ್ಜ ಮೊಮ್ಮಗ ಮೂಲತಃ ಬಾಗಲಕೋಟೆಯ ಮುದೋಳ ದವರು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮದ್ಯ ಪ್ರಿಯರಿಗೆ ಮದ್ಯ ಪಾನ ಮಾಡಲು ಸರಕಾರ ಮುಕ್ತ ಅವಕಾಶ ಮಾಡಿ ಕೊಟ್ಟಿದೆ. ಆದರೆ ಹಿಂತಾ ಪುಟ್ಟ ಬಾಲಕನನ್ನು ಸ್ವತಃ ತಾತನೆ ಮಾರಕ ವ್ಯಸನಕ್ಕೆ ತಳ್ಳಿರುವ ಅಮಾನವೀಯ ಘಟನೆ ನಡೆದಿದೆ.
ಇನ್ನು ರಾಯಬಾಗ ಅಬಕಾರಿ ಅಧಿಕಾರಿಗಳೇ, ಈ ಪ್ರೀತಮ್ ಬಾರ್ ಗೆ ನಿಮ್ಮ ಅಬಕಾರಿ ನಿಯಂತ್ರಣ ಕಾಯ್ದೆ ಅನ್ವಯ ಆಗಿದ್ದರೆ, ಪ್ರೀತಮ್ ಬಾರ್ ನಲ್ಲಿ ಪುಟ್ಟ ಬಾಲಕನಿಗೆ ಮದ್ಯ ಸೇವಿಸಲು ಅವಕಾಶ ಮಾಡಿ ಕೊಡುತ್ತಿರಲಿಲ್ಲ.
ಇನ್ನು ಪೋಲಿಸರು ಈ ವಿಡಿಯೋ ದೃಶಾವಳಿ ನೋಡಿ ಆದರು ಮಕ್ಕಳ ಸಂರಕ್ಷಣ ಕಾಯ್ದೆ ಅಡಿಯಲ್ಲಿ,ತಪ್ಪಿತಸ್ತರ ಮೇಲೆ ಪ್ರಕರಣ ದಾಖಲಿಸಿ, ಸೂಕ್ತ ಕಾನೂನಿನ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಸುದ್ದಿ ವಾಹಿನಿಯ ಆಶಾಯವಾಗಿದೆ.
ಈ ಘಟನೆ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು,
ಮಕ್ಕಳ ಸುರಕ್ಷತೆ ಬಗ್ಗೆ ಮತ್ತೆ ಪ್ರಶ್ನೆಗಳು ಉದ್ಭವವಾಗಿವೆ. ಬ್ಯುರೋ ರಿಪೋರ್ಟ್ tv3 ಕನ್ನಡ ನ್ಯೂಸ್ ರಾಯಭಾಗ


