ಚಿಕ್ಕೋಡಿ: ಗಾರವಾ ಲಾಡ್ಜ್ ಗೆ ಎಲ್ಲಿಂದ ಸಿಗುತ್ತಿದೆ ಇಷ್ಟೊಂದು ಅಕ್ರಮ ಸಾರಾಯಿ !?
ಹೌದು ಅಕ್ರಮ ಸಾರಾಯಿ ಮಾರಾಟ ಮಾಡುವವನಿಗೆ CL-2 ವೈನ್ಸ್ ನಲ್ಲಿ ಮಾರಾಟವಾಗುವಷ್ಟು ಸಾರಾಯಿ ಎಲ್ಲಿಂದ ಸಿಗುತ್ತಿದೆ ?
ಚಿಕ್ಕ ಚಿಕ್ಕ ಸಾರಾಯಿ ಬ್ರಾಂಡ್ ಜೊತೆಗೆ ಹೆಚ್ಚಿನ ದರದ ಸಾರಾಯಿ ಹಾಗೂ ಬೀಯರ್ ಗಳು ಹೆಚ್ಚಿನ ಪ್ರಮಾಣದಲ್ಲಿ ಗಾರಾವಾ ಲಾಡ್ಜ್ ಮಾಲೀಕ ಭರತ ಪಾಟೀಲನಿಗೆ ಹೇಗೆ ಸಿಗುತ್ತವೆ? ಇದರ ಹಿಂದೆ ಯಾವ ಅಧಿಕೃತ ಬಾರ್ ಅಥವಾ ಯಾವ್ ಅಧಿಕೃತ ವೈನ್ಸ್ ಮಾಲೀಕರ ಕೈವಾಡವಿದೆ ? ಏಕೆಂದರೆ ಪ್ರಸ್ತುತ ದಿನಮಾನದಲ್ಲಿ ಒಂದು ಅಧಿಕೃತ ಬಾರ್ ಆಗಲಿ ಅಧಿಕೃತ ವೈನ್ಸ್ ಮಾಲೀಕರಿಗೆ ನೀವು ಪ್ರತಿ ತಿಂಗಳು ಇಂತಿಷ್ಟು ಬಾಕ್ಸ್ ಮದ್ಯ ಮಾರಾಟ ಮಾಡಲೇಬೇಕು ಎಂಬ ಒತ್ತಡ ಇರುವುದರಿಂದ ಗ್ರಾಮೀಣ ಪ್ರದೇಶಗಳ ವೈನ್ಸ್ ಮಾಲೀಕರು ಈ ತರಹ ಅಂದರೆ ಅಕ್ರಮ ಸಾರಾಯಿ ಮಾರಾಟ ಮಾಡುವವರ ಸಹಾಯದಿಂದ ತಮಗೆ ನೀಡಿದ ಟಾರ್ಗೆಟ್ ಅನ್ನು ಗಾರವಾ ಲಾಡ್ಜ್ ಮಾಲೀಕನಂತವರಿಗೆ ಬಾಕ್ಸ್ ಗಟ್ಟಲೇ ವಿಸ್ಕಿ, ಬಿಯರ್, ವೈನ್ ಗಳನ್ನು ನೀಡಿ ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ಸಾರಾಯಿ ಮಾರಾಟ ಗಾರವಾ ಲಾಡ್ಜ್ ನಲ್ಲಿ ನಡೆಯುತ್ತಿದ್ದರು ಕುಡ ಪ್ರತಿನಿತ್ಯ ಗಸ್ತಿಗೆ ತಿರಿಗುತ್ತಿದ್ದ ಪೋಲಿಸರ ಕಣ್ಣಿಗೆ ಕಾಣಿಸಲೇ ಇಲ್ಲವೇ ? ಹೋಗಲಿ ಅಲ್ಲಿ ಲಾಡ್ಜ್ ಇದೆ ಆ ಲಾಡ್ಜ್ ನ ರೆಜಿಸ್ಟರ್ ಬುಕ್ ಚೆಕ್ ಮಾಡಲು ಹೋದ ಪೋಲುಸರಿಗೂ ಅಲ್ಲಿ ನಡೆಯುವ ಅಕ್ರಮ ಸಾರಾಯಿ ಮಾರಾಟ ದಂಧೆ ಕಾಣದಾಯಿತೆ ? ಲಾಡ್ಜ್ ನ ಅಕ್ಕ ಪಕ್ಕ ಬಿದ್ದಿರುವ ಖಾಲಿ ಬಿಯರ್ ಬಾಟಲಿಗಳ ರಾಶಿ ಅರ್ಧ ಮುರ್ಧ ಸುಟ್ಟು ಬಿಸಾಕಿರುವ ಸಾರಾಯಿ ಪ್ಯಾಕೆಟಗಳ ರಾಶಿ ಬೀಟ್ ಪೋಲಿಸರಿಗೆ ಕಾಣಲೇ ಇಲ್ಲವೇ ? ಕಂಡರೂ ಸುಮ್ಮನಿದ್ದರಾ ಎಂಬ ಅನುಮಾನಗಳು ಮೂಡುತ್ತಿವೆ.
ಅದೆನೆ ಆಗಲಿ ನಮ್ಮ ತಂಡದ ಬಳಿ ಭರತ ಪಾಟೀಲ ಮಾಲೀಕತ್ವದ ಗಾರವಾ ಲಾಡ್ಜ್ ನಲ್ಲಿ ಅಕ್ರಮವಾಗಿ ಮಾರಾಟ ಮಾಡಿರುವ ಸಾರಾಯಿ ಪ್ಯಾಕೆಟ್ ಹಾಗೂ ಅದರ ಮೇಲಿರುವ ಲೆಬಲ್ ಕೂಡ ಇದೆ. ಈ ಸಾಕ್ಷಾಧಾರಗಳಿಂದ ಅದು ಯಾವ ಬಾರ್ ಅಥವಾ ಯಾವ ವೈನ್ಸ್ ನ ಸಾರಾಯಿ ಎಂಬುದು ಖಚಿತವಾಗುತ್ತದೆ. ಸಂಬಂಧಿಸಿದ ಅಬಕಾರಿ ಇಲಾಖೆ ಅಧಿಕಾರಿಗಳೇ, ಇನ್ನಾದರೂ ಎಚ್ಚೆತ್ತುಕೊಂಡು ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲು ಸಹಕರಿಸುತ್ತಿರುವ ಅಧಿಕೃತ ಬಾರ್/ವೈನ್ಸ್ ನ ಪರವಾನಿಗೆ ಸಂಪೂರ್ಣವಾಗಿ ರದ್ದು ಮಾಡಿ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲೇಬೇಕು ಎನ್ನುವುದೇ ನಮ್ಮ ಸುದ್ದಿವಾಹಿನಿಯ ಆಗ್ರಹವಾಗಿದೆ.
ಇನ್ನಷ್ಟು ವಿಡಿಯೋ ಆದಾರಿತ ಗಾರವಾ ಲಾಡ್ಜ್ ನ ಅನಾಚಾರಗಳನ್ನು, ಅಕ್ರಮಗಳನ್ನು, ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ!!
ಜರ್ನಲಿಸ್ಟ್: ಚಂದ್ರು ತಳವಾರ


