ರಾಯಬಾಗ: ಅಬಕಾರಿ ರೂಲ್ಸ್ ಬ್ರೇಕ್ ಮಾಡುತ್ತಿರುವ ಹೋಟೆಲ್ ಸಾಯಿ ಪ್ಯಾಲೇಸ್..!
ಅಬಕಾರಿ ಇಲಾಖೆಯ ಅಕ್ರಮ ಕರ್ಮಕಾಂಡಕ್ಕೆ ಮಿತಿನೇ ಇಲ್ಲದಂತಾಗಿದೆ. ಎಂತಹ ಅಕ್ರಮವನೊಡಬೇಕು ಅಂದ್ರೆ ರಾಯಬಾಗ ಪಟ್ಟಣದ ಹೋಟೆಲ್ ಸಾಯಿ ಪ್ಯಾಲೇಸ್ ಗೆ ಹೊಗಲೇಬೇಕು.. ಮುಂಜಾನೆಯ ಸೂರ್ಯ ತನ್ನ ದಿನಚರಿ ಶುರು ಮಾಡುವ ಮುಂಚೆನೆ ಈ ಹೆಂಡದಂಗಡಿ ಪ್ರಾರಂಭವಾಗುತ್ತೆ. ಹಾಗಾದ್ರೆ ಸರ್ಕಾರದ ನಿಯಮಗಳು ಈ ಅಮಲಿನಲ್ಲಿ ತೇಲುವ ಮಾಲಿಕನಿಗೆ ಅನ್ವಯವಾಗಲ್ವಾ.?
ರಾತ್ರಿ ಯಾವಾಗ ಬಂದಾಗುತ್ತೆ ಗೊತ್ತಿಲ್ಲಾ.
CL-7ಪರವಾನಗಿ ಪಡೆದಿರುವ ಸಾಯಿ ಪ್ಯಾಲೇಸ್ ಮಾಲಿಕ ಯಾವ ಅಧಿಕಾರಿ ಬಂದ್ರೂ ನಮ್ಮನ್ನೇನು ಮಾಡಲು ಸಾದ್ಯವಿಲ್ಲ ಎಂದು ನಶೆಯ ಗುಂಗಿನಲ್ಲಿದ್ದಾನೆ.
ಮುಂಜಾನೆ 7. ರಿಂದ 7:30ರ ಸಮಯಕ್ಕೆ ಬಾರ್ ತೆರೆದು ಹಾಲು ಮಾರುವ ಬದಲು ಹಾಲ್ಕೋಹಾಲ್ ಮಾರುತ್ತಿರುವ ಬಗ್ಗೆ ಅಬಕಾರಿ ನಿರೀಕ್ಷಕರಾದ ಕಿರಣ್ ರವರಿಗೆ ಸಾಕಷ್ಟು ಬಾರಿ ಮಾಹಿತಿ ನೀಡಿದ್ರೂ ಕ್ರಮ ಕೈಗೊಂಡಲ್ಲಾಂದ್ರೆ ಅವರಿಗೆ ತೀರ್ಥಪ್ರಸಾದ ಸಲ್ಲುತ್ತಿದೆಯೇ ? ಎಂದು ಅಲ್ಲಿನ ಸ್ಥಳಿಯ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜನಸಾಮಾನ್ಯರ ಹಿತ ದೃಷ್ಟಿಯಿಂದ ತಕ್ಷಣವೇ ಈ ಸಾಯಿ ಪ್ಯಾಲೇಸ್ ನ ಪರವಾನಗಿಯನ್ನ ರದ್ದು ಮಾಡಬೇಕಿದೆ. ಅದಾಗದಿದ್ದಲ್ಲಿ ಇಲ್ಲಿ ನಡೆಯುವ ಎಲ್ಲಾ ಸಮಸ್ಯಗಳಿಗೆ ಸಂಬಂಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ. ಎಂದು ಹೋರಾಟಗಾರರು ಅಧಿಕಾರಿಗಳನ್ನು ಬಡೆದೆಬ್ಬಿಸಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ