ಗೋಕಾಕ: ಭಯ ಹೋಗಲಾಡಿಸಲು, ಶವ ಸಂಸ್ಕಾರಕ್ಕೆ ಜೋಡಿಸಿದ ಕಟ್ಟಿಗೆ ಮೇಲೆ ಕುಳಿತ ದೆವ್ವ ನಿವಾರಕ ನಾಯಕ.!!
ಯುವ ನಾಯಕ ಜನರ ಪ್ರಸಂಶೆಗೆ ಪಾತ್ರನಾಗಿದ್ದಾನೆ.
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಅರ್ಜುನ ಗಂಡವ್ವಗೊಳ ಎಂಬ ದಲಿತ ನಾಯಕ.
ಪಟ್ಟಣದಲ್ಲಿ ವ್ಯಕ್ತಿ ಓರ್ವ ತಿರಿ ಹೋದ ಸಂದರ್ಭದಲ್ಲಿ ಶವ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅರ್ಜುನ ಗಂಡವಗೊಳ…..
ಮೌಡ್ಯಗಳನ್ನು ವಿರೋಧಿಸುವುದು ಬಾಯಲ್ಲಿ ಮಾತ್ರವಲ್ಲ.
ಅದನ್ನು ಕಾರ್ಯ ರೂಪದಲ್ಲಿಯೂ ತರಬೇಕೆಂದು ಅಲ್ಲಿದ್ದ ಸ್ಥಳೀಯರಿಗೆ ತಾವೇ ಖುದ್ದಾಗಿ, ಸತ್ತ ವ್ಯಕ್ತಿಯನ್ನು ಸುಡಲು ಜೋಡಿಸಿದ್ದ ಕಟ್ಟಿಗೆಯ ಮೇಲೆ ದಿಢೀರನೆ ಕುಳಿತು. ಮಲಗಿಕೊಂಡು, ಯಾರು ಭಯಪಡಬೇಡಿ. ಎಂದು ಜನರನ್ನು ಆಶ್ಚರ್ಯಗೊಳಿಸಿದರು. ಮೌಡ್ಯಗಳನ್ನು ನಾವು ಕಾರ್ಯ ರೂಪದಲ್ಲಿ ಹೋಗಲಾಡಿಸಬೇಕು ಎಂದು ತಿಳಿ ಹೇಳಿದರು.
ಅಂತ್ಯ ಸಂಸ್ಕಾರ ಕಾರ್ಯದಲ್ಲಿ ನೆರೆದಿದ್ದ ಸಾಕಷ್ಟು ಜನರು, ಇವರ ಕಾರ್ಯ ಶ್ಲಾಘಿಸಿ ಭೇಷ್ ಎಂದರು. ಇದೆ ಸಂದರ್ಭದಲ್ಲಿ ಮಾತನಾಡಿ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು….ಬುದ್ಧ ಬಸವ ಅಂಬೇಡ್ಕರ್ ಹೆಸರನ್ನು ಬರಿ ಬಾಯಿ ಮಾತಲ್ಲಿ ಹೇಳುವುದಷ್ಟೇ ಅಲ್ಲ. ಅವರ ಕಾರ್ಯಗಳನ್ನು ನಿಜ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಸಂದೇಶ ಸಾರಿದರು.
ಜರ್ನಲಿಸ್ಟ್: ಚಂದ್ರು ತಳವಾರ