ಚಿಕ್ಕೋಡಿ:ಬೈಕ್ ಡಿಕ್ಕಿ ಸ್ಥಳದಲ್ಲೆ ಸಾವನ್ನಪ್ಪಿದ ಕ್ರೈಂ ಪಿಸಿ ಸತ್ತಿಗೇರಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪೋಲಿಸ ಠಾಣೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೌಮ್ಯ ಸ್ವಭಾವದ ಮಂಜುನಾಥ ಸತ್ತೀಗೇರಿ ವಯಸ್ಸು (26) ಕೆಲಸದ ಮೇಲೆ ರಾಯಬಾಗ ತಾಲೂಕಿನ ಕುಡಚಿ ಪಠ್ಠಣಕ್ಕೆ ಹೋಗಿ ಬರುವಾಗ ನಂದಿಕುರಳಿ ಗ್ರಾಮದಲ್ಲಿ ಬೈಕ ಮುಖಾಮುಖಿ ಡಿಕ್ಕಿಯಾಗಿ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೆ ಮೃತರಾಗಿರುತ್ತಾರೆ.
ಈ ಕುರಿತು ರಾಯಬಾಗ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಪ್ರಮಾಣದ ಕ್ರೈಂ ಲೋಕದ ಇತಿಹಾಸದಲ್ಲಿ ಹೆಸರು ಮಾಡಿದ ಇವರು ಅನೆಕ ಖತರ್ನಾಕ ಗ್ಯಾಂಗಳನ್ನ ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಈ ನಿಧನದ ಸುದ್ದಿ ಕೇಳುತ್ತಿದ್ದಂತೆ ಅವರ ಪ್ರೀತಿಯ ಗೆಳೆಯರು ಶಾಕ್ ಆಗಿ ಕೆಲ ಕಾಲ ಮಾತನಾಡದೆ ನಿಂತು ದಿಗ್ಬ್ರಾಂತರಾದರು. ಕಣ್ಣೀರಿಣ ಹೊಳೆ ಹರಿದಿದೆ. ಹಗಲಿರುಳು ಎಲ್ಲಾ ಬಂದೊಬಸ್ತನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯದ ಜಿಲ್ಲಾ ಪೋಲಿಸರು ಹಾಗು ಆತ್ಮೀಯ ಗೆಳೆಯರು ಕಂಬನಿ ಮಿಡಿಯುವದಷ್ಟೆ ಅಲ್ಲದೇ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಸಾವಿನ ಸುದ್ದಿಗೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಶೋಕ ಸಂದೇಶ ತಿಳಿಸಿದ್ದಾರೆ.
ಜರ್ನಲಿಸ್ಟ್: ಚಂದ್ರು ತಳವಾರ