ಗೋಕಾಕ: MSIL ನಲ್ಲಿ ಎಂಆರ್ಪಿ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ, ಕಣ್ಮುಚ್ಚಿ ತೆಪ್ಪಗೆ ಕುಳಿತ ಅಧಿಕಾರಿಗಳು..!?
ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ದಂಡಾಪುರ ಕ್ರಾಸ್ ನಲ್ಲಿರುವ ಎಂಎಸ್ಐಎಲ್ ನಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತದೆ. ಇದರಿಂದ ಮಧ್ಯ ಪ್ರಿಯರು ದುಬಾರಿ ಬೆಲೆ ತೆತ್ತು ರೋಷಿ ಹೋಗಿದ್ದಾರೆ. MSIL ನ ಮಾಲೀಕ ಶ್ರೀಪತಿ ಹಾಲಪ್ಪ ಗಣೇಶವಾಡಿ ಎಂದು ತಿಳಿದು ಬಂದಿದೆ.
ರಾಜಾರೋಷವಾಗಿ ಮದ್ಯವನ್ನು ನಿಗದಿಗಿಂತ ಹೆಚ್ಚು ಬೆಲೆಗೆ ಮಾರುತ್ತಿದ್ದರೂ ಅಬಕಾರಿ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಇಷ್ಟೊಂದು ಬೆಲೆನಾ ಎಂದು ಕೇಳಿದರೆ ಬೇಕಿದ್ದರೆ ತಗೊಳ್ಳಿ, ಇಲ್ಲವೆಂದರೆ ಬಿಡಿ, ದೂರು ಕೋಡೋದಾದ್ರೆ ಕೊಡಿ ಎಂದು ಮದ್ಯ ಮಾರಾಟಗಾರರು ಗ್ರಾಹಕರಿಗೆ ದಬಾಯಿಸುತ್ತಿದ್ದಾರೆ ಎನ್ನಲಾಗಿದೆ.
ದಂಡಾಪುರ ಕ್ರಾಸ್ ನಲ್ಲಿ,ದಲಿತ ಸಮುದಾಯದ ಜನರು ವಾಸ ಮಾಡುತ್ತಿದ್ದರು MSIL ಗೆ ಪರವಾನಿಗೆ ನೀಡಿದ್ದು, ಇದರಿಂದ ದಿನನಿತ್ಯ ಅಲ್ಲಿನ ಜನರು ರೋಷಿ ಹೋಗುವಂತಾಗಿದೆ.
ಹಂತದರಲ್ಲಿ ಕ್ವಾಟರ್ ಒರಿಜಿನಲ್ ಚಾಯ್ಸ್ ೮೫
ನೈಂಟಿಗೆ ೪೫, ಕಿಂಗ್ಫಿಶರ್ ಬೀರಿಗೆ ೨೭೫ ರಂತೆ ಬೆಲೆ ಜಾಸ್ತಿ ಅಂದ್ರೆ ಏನರ್ಥ… ಹಾಗಾದ್ರೆ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ವಾ…?
ಈ ಎಲ್ಲಾ ವಿಷಯದ ಕುರಿತು ಅಲ್ಲಿನ ಅಧಿಕಾರಗಳಿಗೆ ಮಾಹಿತಿ ನೀಡಿದ್ರೆ, ಅಬಕಾರಿ ಇನ್ಸ್ಪೆಕ್ಟರ್ ಸ್ಥಾನ ಕಾಲಿ ಇದೆಯಂತೆ, ಹಾರಿಕೆ ಉತ್ತರ ನೀಡುತ್ತಾರೆ. ಈಗ ಸಬ್ ಇನ್ಸ್ಪೆಕ್ಟರ್ ತೇರದಾಳ ಮೇಡಂ ರವರು ಇನ್ ಚಾರ್ಜ್ ಅಧಿಕಾರಿಯಾಗಿದ್ದಾರೆ.
ಇನ್ ಚಾರ್ಜ್ ಅಧಿಕಾರಿ ಮೇಡಮ್ ಮತ್ತು ಬೀಟ್, ಅಬಕಾರಿ ಪೊಲೀಸರಿಗೆ ಸಾರ್ವಜನಿಕರು ದೂರು ನೀಡಿದರೂ ಕೂಡ ಸುಮ್ಮನೆ ಇರುವುದು ಜನರಲ್ಲಿ ಬೇಸರ ತಂದಿದೆ.
ಆದ್ದರಿಂದ ಸರಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ಎಚ್ಚೆತ್ತು MSIL ನ ಪರವಾನಿಗೆಯನ್ನು ರದ್ದು ಮಾಡಬೇಕು.
ಅಡ್ಡ ದಾರಿ ಹಿಡಿದು ಹಣ ಗಳಿಸಲು ಮುಂದಾದರ ಶ್ರೀಪತನಿಗೆ ಚೆಕ್ ಮೇಟ್ ಹಾಕುತ್ತಾರಾ ಎಂದು ಕಾಯ್ದು ನೋಡಬೇಕಿದೆ.
ಜರ್ನಲಿಸ್ಟ್: ಚಂದ್ರು ತಳವಾರ