ರಾಯಬಾಗ ಧ್ವಜಾರೋಹಣ ಮಾಡದೆ ರಾಷ್ಟ್ರ ಗೌರವಕ್ಕೆ ಅ ಗೌರವ ತೋರಿದ ಅಂಗನವಾಡಿ ಕಾರ್ಯಕರ್ತೆ
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮಂಟೂರ ಗ್ರಾಮದ ಬಡಿಗೇರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಸುಸ್ಸರ್ಜಿತವಾದ ಅಂಗನವಾಡಿ ಕಟ್ಟಡವಿದ್ದು ಕಟ್ಟಡದ ಮುಂಭಾಗದಲ್ಲಿ 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಎರಡು ವರ್ಷಗಳ ಹಿಂದೆಯೇ ಧ್ವಜಾರೋಹಣ ಮಾಡುವುದಕ್ಕಾಗಿ ಜೆಂಡಾ ಕಟ್ಟಿಯನ್ನು ಕೂಡ ಕಟ್ಟಿಸಲಾಗಿದೆ.
ಆದರೆ ಅಲ್ಲಿನ ಅಂಗನವಾಡಿ ಮಕ್ಕಳ ದುರ್ದೈವವೇನೋ ಗೊತ್ತಿಲ್ಲ.
ಅಲ್ಲಿನ ಅಂಗನವಾಡಿ ಕಾರ್ಯಕರ್ತೆಯಾದ ಲಕ್ಷ್ಮಿ ಶಿವಾನಂದ ಪಾಟೀಲ ರವರು ಮಾತ್ರ ಧ್ವಜಾರೋಹಣ ಮಾಡೋಕೆ ಮನಸ್ಸು ಮಾಡುತ್ತಿಲ್ಲ.
ಅಂದ್ರೆ ಸರಕಾರದ ಆದೇಶ ಮೀರುತ್ತಿದ್ದೇನೆ ಎಂಬ ಭಯ ಕೂಡಾ ಇವರಿಗೆ ಇಲ್ಲ. ಅಂದ್ರೆ ಏನರ್ಥ…?
ಅಷ್ಟಕ್ಕು ದೇಶಕ್ಕೆ ಅಪಮಾನ ಮಾಡುತ್ತಿದ್ದೇನೆ ಎಂಬ ಭಯ ಇವರಿಗಿಲ್ಲವೋ…?
ಈಗಾಗಲೇ ಇವರ ಪತಿ ಗ್ರಾಮ ಪಂಚಾಯತಿ ಸದಸ್ಯರು ಹಾಗು ಬಸವೇಶ್ವರ ಪಿಕೆಪಿಎಸ್ ಸಂಸ್ಥೆಯ ಅಧ್ಯಕ್ಷರು ಆಗಿರುತ್ತಾರೆ. ಅಷ್ಟಕ್ಕೂ ಲಕ್ಷ್ಮಿ ಶಿವಾನಂದ ಪಾಟೀಲ್ ಧ್ವಜಾರೋಹಣ ಮಾಡಿ ಗ್ರಾಮದಲ್ಲಿ ಮಾದರಿಯಾಗಬೇಕಾಗಿತ್ತು.
ಅಂಗನವಾಡಿ ಕಾರ್ಯಕರ್ತೆ ಧ್ವಜಾರೋಹಣ ಮಾಡದೆ ರಾಜ್ಯ ರಾಷ್ಟ್ರ ಗೌರವಕ್ಕೆ ಅಗೌರವ ತೋರಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಆದಕಾರಣ ಸರಕಾರ ಮತ್ತು ಮೇಲಾಧಿಕಾರಿಗಳು ಯಾವುದೇ ಮುಲಾಜಿಲ್ಲದೆ ಇಂತಹ ನೌಕರಸ್ಥರನ್ನು ಕೆಲಸದಿಂದ ಕಿತ್ತೆಸೆಯಬೇಕೆಂಬುದು ಸ್ಥಳೀಯ ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ಜರ್ನಲಿಸ್ಟ್: ಚಂದ್ರು ತಳವಾರ


