ಬೆಳಗಾವಿ: ಕುಂದಾನಗರಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ಕರ್ನಾಟಕ ಮದ್ಯಪಾನ ಪ್ರಿಯರ ವಿಚಿತ್ರ ಹೋರಾಟ ಮಾಡಿದ್ದಾರೆ. ಜೊತೆಗೆ ವಿವಿಧ ಬೇಡಿಕೆ ಇಟ್ಟಿದ್ದಾರೆ. ಇವರ ಬೇಡಿಕೆಗಳನ್ನು ಕಾಂಗ್ರೆಸ್ ಸಚಿವ ಸಂತೋಷ್ ಲಾಡ್ ಆಲಿಸಿದ್ದಾರೆ.
ಮದ್ಯಪಾನ ಪ್ರಿಯರ ಹೋರಾಟ ಸಂಘವು ನಿತ್ಯ ದುಡಿ, ಸತ್ಯ ನುಡಿ, ಸ್ವಲ್ಪ ಕುಡಿ, ಮನೆಗೆ ನಡಿ ಎಂಬ ಹೋರಾಟ ಮಾಡಿದೆ. ಈ ವಿಚಿತ್ರ ಹೋರಾಟ ಕಂಡು ಶಾಕ್ ಆದ ಸಚಿವ ಸಂತೋಷ ಲಾಡ್ ಸರ್ಕಾರದ ಪರವಾಗಿ ಪ್ರತಿಭಟನಾಕಾರರ ಮನವಿ ಸ್ವೀಕಾರ ಮಾಡಲು ಬಂದಿದ್ದಾರೆ.
ಮದ್ಯಪ್ರಿಯರು ಸಂತೋಷ್ ಲಾಡ್ ಮುಂದೆ ರಾಜ್ಯ ಕುಡುಕರಿಗೆ ಆಗುತ್ತಿರುವ ಅನ್ಯಾಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಅತ್ತ ಸಚಿವರು ಒಂದು ಕಡೆ ನಗಲಾರದೆ ಮತ್ತೊಂದು ಕಡೆ ಗಂಭೀರವಾಗಿ ಮನವಿ ಆಲಿಸಿದ್ದಾರೆ.
ಬೇಡಿಕೆಗಳೇನು?
ಡಿಸೆಂಬರ್ 31 ರಂದು ಮದ್ಯಪಾನ ದಿನಾಚರಣೆನ್ನಾಗಿ ಮಾಡಬೇಕು.
ಅಂದು ಎಲ್ಲಾ ರೀತಿಯ ಬಾರ್ , ರೆಸ್ಟೋರೆಂಟ್ ನಲ್ಲಿ 50 ರಷ್ಟು ರಿಯಾಯಿತಿ ನೀಡಬೇಕು.
ಕುಡುಕ ಎಂಬ ಪದಬಳಕೆ ನಿಷೇಧ ಮಾಡಬೇಕು.
ಮದ್ಯಪಾನ ಪ್ರಿಯರ ಅಭಿವೃದ್ಧಿ ನಿಗಮ ಆರಂಭಿಸಿ ಹತ್ತರಷ್ಟು ಅನುದಾನ ನೀಡಬೇಕು.
ಪ್ರತಿ ಬಾಟಲ್ ಗೆ ಇನ್ಸ್ಯೂರೆನ್ಸ್ ಮಾಡಬೇಕು.
ಪ್ರತಿ ಬಾರ್ ಮುಂದೆ ಆಂಬುಲೆನ್ಸ್ ಸೇವೆ ನೀಡಬೇಕು.
ಬಾರ್ ಪಕ್ಕದಲ್ಲಿ ಕುಡುಕರ ವಿಶ್ರಾಂತಿಗಾಗಿ ಭವನ ನಿರ್ಮಾಣ ಮಾಡಬೇಕು.
ಹೊಸ ವರ್ಷದ ದಿನಾಚರಣೆ ಇನ್ನೇನು ಕೆಲವೇ ದಿನಗಳಿವೆ. ಮತ್ತೊಂದೆಡೆ ಮದ್ಯಪಾನದ ಬೆಲೆಯೂ ಏರಿಕೆಯಾಗಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಕುಡುಕರ ಸಂಘ ಬೇಡಿಕೆಗಳು ಇಟ್ಟಿದ್ದಾರೆ. ಸದ್ಯ ಮದ್ಯಪಾನ ಪ್ರಿಯರು ಬೇಡಿಕೆಗಳು ಎಲ್ಲರಿಗೂ ಅಚ್ಚರಿ ಮೂಡಿಸಿದೆ.


