ಹೊತ್ತಿ ಉರಿದ ಲಾರಿ; ಇದು ಬೆಳಗಾವಿ ಬ್ರೇಕಿಂಗ್ ಸುದ್ದಿ.!
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಹೊಸ ಲಾರಿ ಒಂದು ಅನಾಥವಾಗಿ ಹೊತ್ತಿ ಊರಿದ ಪ್ರಸಂಗ ಇಂದು ಬೆಳಗಿನ ಜಾವ ನಡೆದುಹೋಗಿದೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಬೆಳಗಿನ ಜಾವ ಅಗ್ನಿ ಅವಘಡ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಈ ಬೆಂಕಿ ಅವಘಡಕ್ಕೆ ಇನ್ನಷ್ಟೇ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದು ಎಂದು ತಿಳಿದುಬಂದಿದೆ.
ವರದಿ: ಚಂದ್ರು ತಳವಾರ


