ಅಭಿವೃದ್ಧಿ ಕಾಣದ ನಿಪಾನಾಳ ಗ್ರಾಮ; ಪಂ ಸಂಪೂರ್ಣ ವಿಫಲ: ಗ್ರಾಮದ ಸರ್ವಾಂಗಿನ ಅಭಿವೃದ್ಧಿಗೆ ಬೇಕಿದೆ ಉತ್ತಮ ನಾಯಕತ್ವ.!
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ನಿಪನಾಳ ಗ್ರಾಮ ಪಂಚಾಯಿತಿ, ಅಭಿವೃದ್ಧಿ ದೃಷ್ಟಿಯಲ್ಲಿ ಬಾರಿ ಹಿನ್ನಡೆ ಅನುಭವಿಸುತ್ತಿದೆ. ಎಂದು ಸಾರ್ವಜನಿಕರು ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಲಭೂತ ಸೌಕರ್ಯ ನೀಡುವಲ್ಲಿ ಗ್ರಾ. ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ.
ಪ್ರಮುಖವಾಗಿ ಗ್ರಾಮದಲ್ಲಿ ಸುಸರ್ಜಿತವಾದ ಸಾರ್ವಜನಿಕ ಶೌಚಾಲಯಗಳಿಲ್ಲದೆ ಹೆಣ್ಣು ಮಕ್ಕಳು ಪರದಾಡುವಂತಾಗಿದೆ.
ಇನ್ನು ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ, ಗಬ್ಬೆದ್ದು ನಾರುತ್ತಿರುವ ಗಟಾರಗಳು, ನಡು ರಸ್ತೆಯಲ್ಲಿ ಹೆಸರಿಗೆ ಮಾತ್ರ ಹೈ ಮಾಸ್ಕ್ ಅಳವಡಿಸಲಾಗಿದೆ.
ಪ್ರಮುಖ ಬೀದಿಗಳಲ್ಲಿ ಕೆಲವು ಕಡೆ ವಿದ್ಯುತ್ ಬಲ್ಪ್ ಗಳು ಚಾಲನೆಯಲ್ಲಿಲ್ಲ.
ವಾರ್ಡ್ ನಂಬರ ಒಂದರ ನಿಪನಾಳ ತುಕ್ಕಾನಟ್ಟಿ ರಸ್ತೆಯ ನಂದಿ ತೋಟದ ಹತ್ತಿರದ ಹಳ್ಳದ ಬ್ರಿಜ್ ಗತಿ ಅದೋಗತಿ ಆಗಿದೆ. ಇತ್ತೀಚಿಗಷ್ಟೇ ಬ್ರಿಜ್ ಮೇಲಿಂದ ಬುಲೆರೋ ವಾಹನ ಬಿದ್ದು ಹೆಣ್ಣು ಮಗಳು ಸೇರಿದಂತೆ ನಾಲ್ಕು ಜನ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಇಷ್ಟೆಲ್ಲ ನಡೆದರು ಯಾರು ಕ್ಯಾರೆ ಅನ್ನುತ್ತಿಲ್ಲ. ಗ್ರಾಮದ ಜನರು ಇಂತಹ ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ನೋಡಿದರೆ ಅಧಿಕಾರಿಗಳ ಮತ್ತು ಸದಸ್ಯರ ಮನ ಮರುಗುವುದಿಲ್ಲವೇ.? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡ ತೊಡಗಿದೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದ ಸದಸ್ಯರುಗಳು, ಸಾರ್ವಜನಿಕ ಹಿತಾಸಕ್ತಿ ಗಿಂತ ತಮ್ಮ ಅಧಿಕಾರವೇ ಮುಖ್ಯ ಎಂಬಂತೆ ಹಪಿ ಹಪಿಸುತ್ತ ಪ್ರೆಸ್ಟೀಜ್ ಗಾಗಿ ಆರು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ಅಧ್ಯಕ್ಷ, ಉಪಾಧ್ಯಕ್ಷರ ಬದಲಾಯಿಸುತ್ತಾ, ಪ್ರವಾಸ, ಚೈನಿ ಮಜಾ ಮಾಡಿ ಕಾಲಹರಣ ಮಾಡುತ್ತಾರೆ.
ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿದರೆ, ಜನಪರ ನಾಯಕನ, ಅಭಿವೃದ್ಧಿ ಹರಿಕಾರರ, ಕೊರತೆ ಎದ್ದು ಕಾಣುತ್ತಿದೆ. ಸರಿಯಾದ ಸೂಕ್ತ ಸಮಯದಲ್ಲಿ, ಉತ್ತಮ ನಾಯಕರನ್ನು ಆಯ್ಕೆ ಮಾಡಲಿಲ್ಲ. ನಮ್ಮ ಆಯ್ಕೆ ಸರಿಯಾಗಿದ್ದರೆ ಇಂತಹ ಪರಸ್ಥಿತಿ ನಮ್ಮ ಗ್ರಾಮಕ್ಕೆ ಬರುತ್ತಿರಲಿಲ್ಲವೇನೋ ಎಂದು ಸಾರ್ವಜನಿಕರು ಗ್ರಾಮ ಪಂಚಾಯಿತಿಯ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಅದು ಏನೇ ಆಗಿರಲಿ ಸರ್ಕಾರ ಮತ್ತು ಮೇಲಾಧಿಕಾರಿಗಳು ಈಗಲಾದರೂ ಎಚ್ಚೆತ್ತು, ನಿಪನಾಳ ಗ್ರಾಮಕ್ಕೆ, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಗ್ರಾಮವನ್ನು ರಾಜ್ಯದಲ್ಲಿಯೇ ಮಾದರಿಯ ಗ್ರಾಮ ಮಾಡಬೇಕೆಂದು ಗ್ರಾಮಸ್ಥರ ಮತ್ತು ಟಿವಿ3 ಸುದ್ದಿ ಮಾಧ್ಯಮದ ಆಶಯವಾಗಿದೆ.
ಕಳಪೆ ಕಾಮಗಾರಿ, ಬೋಗಸ್ ಬಿಲ್, ನಕಲಿ ಜಾಬ್ ಕಾರ್ಡ್, ಇದೇ ತರಹ ಸಾಕಷ್ಟು ಮಾಹಿತಿಗಳು ನಮ್ಮ ಟಿವಿ3 ಸುದ್ದಿ ಮಾಧ್ಯಮಕ್ಕೆ ಲಭ್ಯವಿದ್ದು, ಶೀಘ್ರದಲ್ಲಿ ಎಳೆ ಎಳೆಯಾಗಿ, ಸಡಿಲು ಬಿಡದೆ, ನಿರ್ಭೀತಿಯಿಂದ ಬಿಚ್ಚಿಡುತ್ತೇವೆ. ಕಾಯ್ದು ನೋಡಿ!
ಜರ್ನಲಿಸ್ಟ್ ಚಂದ್ರು ತಳವಾರ


