ರಾಯಬಾಗ: ಬೇಜವಾಬ್ದಾರಿ ಇಓ ಕ್ರಮ ಕೈಗೊಳ್ಳದ ಜಿಲ್ಲಾಡಳಿತ.!
ಹೌದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ ಚಂದರಗಿ ಇವರ ಬೇಜವಾಬ್ದಾರಿತನ ಪದೆ ಪದೆ ಬೆಳಕಿಗೆ ಬಂದರೂ ಜಿಲ್ಲಾಡಳಿತ ಮೂಕನಂತೆ ವರ್ತಿಸಿ ಕ್ರಮ ಕೈಗೊಳ್ಳದೆ ಇರುವುದು ಹಲವೂ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.
ರಾಯಬಾಗ ತಾಲೂಕಿನಾದ್ಯಂತ ಇರುವ ಎಲ್ಲಾ ಗ್ರಾಮ ಪಂಚಾಯತಿ ಗಳಲ್ಲಿ ಸಮಸ್ಯೆಗಳ ಸುರಿಮಳೆ ಸಮುದ್ರದಂತೆ ಹರಿದು ಬಂದರು ಇಓ ಚಂದರಗಿ ಮಾತ್ರ ಕ್ಯಾ ಹೈ ತುಮಾರಾ ಪ್ರಾಬ್ಲಮ್ ಅಂತಾ ಕೆಳ್ತಾನೆ ಇಲ್ಲಾ ಯಾಕೆ..? ಹಲವೂ ಬಾರಿ ಈ ರಾಯಬಾಗ ತಾಲೂಕಿನಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಕಲಿ ಬಿಲ್ ಸ್ರಷ್ಟಿಸಿ ಹಣ ಲೂಟಿ ಮಾಡಿದ ಹಾಗೂ ಕಳಪೆ ಕಾಮಗಾರಿಗಳ ಕುರಿತು ಹಾಗೂ ಅಲ್ಲಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಯಡವಟ್ಟು ಮಾಡಿದ ಕುರಿತು ಟಿವಿ೩ ಸುದ್ದಿಯಲ್ಲಿ ರಾಜ್ಯದ ಜನತೆಗೆ ಇವರು ಮಾಡಿರುವ ಅನೇಕ ನಕಲಿ ಬಿಲ್ ಹಾಗೂ ಕೂಲಿ ಕಾರ್ಮಿಕರ ಪರದಾಟದ ಬಗ್ಗೆ ಸಾಕಷ್ಟು ಸುದ್ದಿ ಮಾಡಿ ಜಿಲ್ಲಾಡಳಿತವನ್ನ ಎಚ್ಚರಿಸಿದೆ.
ಆದರೆ ಇಂತಹ ಅಧಿಕಾರಿಗಳ ವಿರುದ್ದ ಜಿಲ್ಲಾಡಳಿತ ಮೌನವಹಿಸುವದು ಸರಿಯಲ್ಲ ಎಂದು ರಾಯಬಾಗ ತಾಲೂಕಿನ ಸಾರ್ವಜನಿಕರು ಟಿವಿ೩ ಮುಂದೆ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಮಹತ್ವವಾಗಿ ನಾವೇಲ್ಲರೂ ತಿಳಿದುಕೊಳ್ಳಬೇಕಾಗಿರುವದು ಏನೆಂದರೆ ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನ ಸೌಧದ ಎಲ್ಲಾ ಮಹಡಿಗಳ ಮೇಲೆ ಹಾಗೂ ಸರ್ಕಾರದ ಕಛೆರಿಯ ಮುಂಬಾಗದಲ್ಲಿ ಈ ಬೋರ್ಡು ಮಾತ್ರ ನೋಡ್ತಿವಿ ಆದರೆ ಇಲ್ಲಿರುವ ಇಒ ಮಾತ್ರ ಸರ್ಕಾರದ ಕೆಲಸವನ್ನ ಮರೆತು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದರೂ ಕೂಡಾ ಈ ನಿರ್ಲಕ್ಷವನ್ನ ಕೇಳುವ ಒಬ್ಬನಾದರೂ ದಕ್ಷ ಅಧಿಕಾರಿಗಳು ಬೆಳಗಾವಿಯಲ್ಲಿ ಇಲ್ಲವೇ.? ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಕಾಮಗಾರಿ ಕುರಿತು ಪರೀಶಿಲನೆ ಮಾಡಿ ನಕಲಿ ಬಿಲ್ ಸ್ರಷ್ಟಿಸಿ ಹಣ ದೋಚಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದೆ ಇರುವದೇ ಇಒ ನ ಕೆಲಸವಾಗಿದೆ.
ಒಟ್ಟಿನಲ್ಲಿ ಇಓ ಮಾಡುವ ಕರ್ತವ್ಯ ನಿರ್ಲಕ್ಷ್ಯಕ್ಕಿಂತ ದೊಡ್ಡದಾಗಿ ಜನತೆಗೆ ಪರಿಣಾಮಕಾರಿಯಾಗಿದೆ.
ಇಒ ಮಾಡಿದ ಪ್ರತಿ ತಪ್ಪುಗಳನ್ನ ಬಿಟ್ಟು ಬಿಡದೆ ಟಿವಿ೩ ಮಾಧ್ಯಮ ಪ್ರಸಾರ ಮಾಡಿಕೊಂಡು ಬಂದಿದೆ.
ಆದರೆ ಇಒ ಗೆ ಕ್ಯಾರೆ ಅನ್ತಾ ಇಲ್ಲಾ ಜಿಲ್ಲಾಡಳಿತ ಒಂದಾದ್ರೂ ಶೊಕಾ ನೋಟಿಸ್ ನೀಡಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಪಂಚಾಯತಿ ಇಲಾಖೆ ಸುಮ್ಮನೆ ಇದ್ದಾರೆ ಅಂದ್ರೆ ಅದು ಏನೋ ಒಂದು ಬೆರೆನೆ ಇದೆ….?
ಹಲವು ಭಾರಿ ಈ ವಿಷಯದ ಕುರಿತು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೊಯಲ್ ಇವರಿಗೆ ಸುದ್ದಿ ತಿಳಿಸಿದರು ಕರೆ ಮಾಡಿ ನೂರೆಂಟೂ ಬಾರಿ ಸಮಸ್ಯೆ ಹೇಳಿದರು ಬರಿ ರಾಜಕಾರಣಿಗಳಂತೆ ಭರವಸೆ ನೀಡಿಕೊಂಡು ಕಾಲಹರಣ ಮಾಡುತ್ತಿರುವದು ಸೂಕ್ತವಲ್ಲ.
ಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಯ ಜನತೆಗೆ ಬೇಡವೆಂದು ಈಗಾಗಲೇ ಸಾರ್ವಜನಿಕರು ಟಿವಿ೩ ಮುಂದೆ ಇಒ ಬಗ್ಗೆ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ ೧೨ ಶತಮಾನದ ಬಸವ ಕಲ್ಯಾಣದಲ್ಲಿ ಬಸವಣ್ಣನವರ ವಿರುದ್ದ ಒಬ್ಬ ಪದೇ ಪದೇ ಷಡ್ಯಂತ್ರ ಹೂಡಿ ಆ ಶರಣ ಬಸವಣ್ಣನವರ ಹೆಸರು ಕೆಡಸುತ್ತಿದ್ದ ಆತನೇ (ಕೊಂಡಿ ಮಂಚಣ್ಣ) ಆ ಕಾಲದಲ್ಲಿ ಕೊಂಡಿ ಮಂಚಣ್ಣ ಈಗ ನಮಗೂ ಹಾಗೂ ನಿಮಗೂ ನೋಡಲು ಸಿಗುತ್ತಾನೆ ಈ (ಕೊಂಡಿ ಮಂಚಣ್ಣ) ಕೊಂಡಿ ಮಂಚಣ್ಣ ಶರಣರನ್ನ ಕಾಡಿ ಕಾಡಿ ಈಡಿ ರಾಜ್ಯಕಾರಭಾರಿಯನ್ನೆ ನಡೆಸಬೇಕೆಂದು ಕೊಂಡಿ ಮಂಚಣ್ಣ ಹರಸಾಹಸ ಪಟ್ಟು ಈಡಿ ಕಲ್ಯಾಣವನ್ನೆ ಹಾಳು ಮಾಡಿ ಬಿಟ್ಟ ಆದರೆ ಈಗ ರಾಯಬಾಗ ಜನರನ್ನ ಹಾಳು ಮಾಡಲು ಈಗ ಜೂನಿಯರ್ (ಕೊಂಡಿ ಮಂಚಣ್ಣ)ವಿಠ್ಠಲ ಚಂದರಗಿ ಆಗಮಿಸಿದ್ದಾರೆ.
ಪ್ರಭುಗಳ ಆಜ್ನೆಯಂತೆ ಪ್ರಜೆಗಳು ಕೆಲಸ ಮಾಡಬೇಕಿದೆ.
ರಾಯಬಾಗ ತಾಲೂಕ ಪಂಚಾಯತಿಯ ಅಕ್ರಮಗಳ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಸಡಿಲು ಬಿಡದೆ ಎಳೆ ಎಳೆಯಾಗಿ ಸುದ್ದಿ ಬಿತ್ತರಿಸಲಾಗುವುದು ಕಾಯ್ದು ನೋಡಿ!
ಜರ್ನಲಿಸ್ಟ್ ಚಂದ್ರು ತಳವಾರ


