ರಾಯಬಾಗ; ರೊಕ್ಕಾನೂ ಹೋಯಿತು, ಬೆಳೆನು ನಾಶವಾಗಿ ಹೊಯಿತು, ಟಿ.ಸಿ ಗಪ್ಪ ಚುಪ್ಪ ಆಯ್ತು…
ಅರೆ ಇದೇನಪ್ಪಾ ಟಿವಿ3 ಸುದ್ದಿ ವಾಹಿನಿಯವರು ಈ ರೀತಿಯಾಗಿ ಹೇಳುತ್ತಿದ್ದಾರೆ ಎನ್ನುತ್ತೀರಾ.? ಹೌದು ವೀಕ್ಷಕರೇ, ಇದು ಟಿವಿ3 ಬಿಗ್ ಇಂಪೆಕ್ಟ್ ಸುದ್ದಿ…
ಬೆಳಗಾವಿ ಜಿಲ್ಲೆ, ರಾಯಬಾಗ ತಾಲೂಕಿನ ಮಾವಿನಹೊಂಡ ಗ್ರಾಮದ ರೈತ ಬಸವರಾಜ ಕುರಿ ಎಬಾತ ಟಿಸಿ ಗಾಗಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆದು ಬಿಲ್ಲ ಕೂಡ ಪಾವತಿಸಿದ್ದರು. ಅಷ್ಟೇ ಅಲ್ಲದೆ ಮೋಹನ ಗುದ್ದೈಗೋಳ ಎಂಬ ಮಂಟೂರ ಶಾಕಾಧಿಕಾರಿಗೆ ೫೦೦೦ ರೂಪಾಯಿ ಹೆಚ್ಚಿನ ಹಣ ಕೊಟ್ಟಿದ್ದೇವೆ ಎಂದು ಬಸವರಾಜ ಕುರಿ ಆರೋಪಿಸಿದ್ದಾರೆ.
ಇಷ್ಟಾದರೂ ಕೂಡ ಕ್ಯಾರೆ ಮಾಡದ ರಾಯಬಾಗ ಹೆಸ್ಕಾಂ ಅಧಿಕಾರಿಗಳು ರೈತನನ್ನ ಒಂದು ವರ್ಷ ಕಾಲ ಟಿ.ಸಿ ಕೊಡದೆ ಅಲೆದಾಡಿಸುತ್ತಾರೆ.
ತದನಂತರ ಬೇಸತ್ತ ರೈತ ಬಸು ಕುರಿ ಟಿವಿ3 ಸುದ್ದಿ ವಾಹಿನಿ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ.
ಅದಕ್ಕೆ ಸ್ಪಂದಿಸಿದ ಟಿವಿ3 ಸುದ್ದಿವಾಹಿನಿಯು ತನ್ನ ವೆಬ್ಸೈಟ್ನಲ್ಲಿ ಸುದ್ದಿಯನ್ನು ಪ್ರಸಾರ ಮಾಡಿಯೆ ಬಿಟ್ಟಿತ್ತು. ಟಿವಿ3 ಸುದ್ದಿ ಮಾಡಿದ ಎರಡೇ ದಿನಕ್ಕೆ ಎಚ್ಚೆತ್ತ, ಅಧಿಕಾರಿಗಳು ಕಾರ್ಯಪ್ರವತ್ತರಾಗಿ ರೈತನ ತೋಟದಲ್ಲಿ ಟಿಸಿ ಅಳವಡಿಸಿರುವದು ರೈತನ ಬಾಳು ಬಂಗಾರವಾದಂತಾಗಿದೆ.
ಟಿಸಿ ತೋಟದಲ್ಲಿ ಅಳವಡಿಸುತ್ತಿದ್ದಂತೆಯೇ ಬಸವರಾಜ ಕುರಿ ಮತ್ತು ಅವರ ಸಹೋದರರು ಟಿವಿ3 ಸುದ್ದಿ ವಾಹಿನಿಯ ಕಾಯ್ರವನ್ನು ಶ್ಲಾಘಿಸಿ ಗುಣಗಾನ ಮಾಡಿದರು.
ಜರ್ನಲಿಸ್ಟ್ ಚಂದ್ರು ತಳವಾರ


