ರಾಯಬಾಗ; ಪರವಾನಿಗಿ ಪಡೆದ ರೈತನಿಗೆ ಟ್ರಾನ್ಸ್ಫಾರ್ಮರ್ ಕೊಡದೆ ಸತಾಯಿಸುತ್ತಿರುವ ರಾಯಬಾಗ ಹೆಸ್ಕಾಂ ಅಧಿಕಾರಿಗಳು.!
ಹೌದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಮಾವಿನಹೊಂಡಾ ಗ್ರಾಮದ ರೈತ ಬಸವರಾಜ ಮಾಲಿಂಗಪ್ಪ ಕುರಿ ಹಾಗು ಅವರ ಸಹೋದರ ರಮೇಶ ಮಾಲಿಂಗಪ್ಪ ಕುರಿ ಇಬ್ಬರು ಹೆಸರಿಗೆ ೨೧೧೨೦+೨೧೧೨೦=೪೨೨೪೦ ರೂಪಾಯಿ ಹಣ ಪಾವತಿಸಿ ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ದಿನಾಂಕ ೨೮/೦೨/೨೦೨೨ ರಂದು ಅನುಮೋದನೆ ಪಡೆದುಕೊಂಡಿರುತ್ತಾರೆ.
ಅಷ್ಟೇ ಅಲ್ಲದೆ ಮಂಟೂರ ಕೆ.ಇ.ಬಿ ಶಾಖಾಧಿಕಾರಿಯಾದ ಮೋಹನ ಗುದ್ದಯಿನವರ ೫000 ಸಾವಿರ ರೂಪಾಯಿ ಲಂಚ ಪಡೆದುಕೊಂಡಿರುತ್ತಾನೆ ಎಂದು ರೈತನ ಆರೋಪವಾಗಿದೆ.
ಅದು ಏನೇ ಆಗಿರಲಿ ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದೆ. ಅಂತದರಲ್ಲಿ ವರ್ಷಾನು ಗಟ್ಟಲೆ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿರುವುದು ರೈತರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ಲಂಚ ಪಡೆಯಬಾರದು ಎಂಬ ಸರಕಾರದ ಆದೇಶವಿದ್ದರೂ ಅದನ್ನು ಕ್ಯಾರೆ ಮಾಡದೆ ಬೇಕಾಬಿಟ್ಟಿ ಲಂಚದ ಹಣ ಪಡೆದು ಸಮಯಕ್ಕೆ ಸರಿಯಾಗಿ ರೈತರಿಗೆ ಟ್ರಾನ್ಸ್ಫಾರ್ಮರ್ ಕೊಡದೆ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಹೆಸ್ಕಾಂ ಅಧಿಕಾರಿಗಳ ನಡೆ ರೈತನ ಜೀವನವನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.
ಆದ್ದರಿಂದ ಸರ್ಕಾರ ಮತ್ತು ಮೇಲಾಧಿಕಾರಿಗಳು ಕೂಡಲೆ ಎಚ್ಚೆತ್ತು ಕಂಗಾಲಾದ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸಬೇಕು ಎಂಬುದು ನಮ್ಮ ಟಿವಿ3 ಕನ್ನಡ ಸುದ್ದಿ ವಾಹಿನಿಯ ಆಶಯವಾಗಿದೆ.
ಅದೆ ರೀತಿಯಾಗಿ ಇಂತಹ ಸಾಕಷ್ಟು ಹೆಸ್ಕಾಂ ಹಗರಣಗಳನ್ನು ಮುಂದಿನ ಸಂಚಿಕೆಯಲ್ಲಿ ದಾಖಲೆ ಸಮೇತವಾಗಿ ಪ್ರಸ್ತುತ ಪಡಿಸುತ್ತೇವೆ. ಕಾಯ್ದು ನೋಡಿ,
ಜರ್ನಲಿಸ್ಟ್: ಚಂದ್ರು ತಳವಾರ


