ಎಸಿ ವರ್ಗಾವಣೆಗೆ ವಕೀಲರ ಬಿಗಿ ಪಟ್ಟು: ಮಾನವ ಸರಪಳಿ ನಿರ್ಮಿಸಿ ಹೋರಾಟ
ರಾಯಭಾಗ: ಚಿಕ್ಕೋಡಿ ಉಪವಿಭಾಗಾಧಿಕಾರಿಗಳ ವಿರುದ್ಧ ಕೆಂಡಮಂಡಲರಾದ ವಕೀಲರ ಸಂಘದ ಸದಸ್ಯರು ಕೋರ್ಟ್ ಕಲಾಪಗಳಿಂದ ಅನಿರ್ದಿಷ್ಟ ಅವಧಿವರೆಗೆ ಹೊರಗುಳಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದ ನ್ಯಾಯಾಲಯದಲ್ಲಿ ನಡೆದಿದೆ
ಉಪ ವಿಭಾಗಾಧಿಕಾರಿಯಾಗಿ ಚಿಕ್ಕೋಡಿಗೆ ನೇಮಕವಾದ ದಿನದಿಂದ ಇಲ್ಲಿಯವರೆಗೆ ವಕೀಲರ ಬಗ್ಗೆ ಮತ್ತು ವಕೀಲರ ವೃತ್ತಿಯ ಬಗ್ಗೆ ಅಗೌರವ ತೋರುತ್ತಿರುವ ಸಂಗತಿಗಳು ಹಲವಾರು ಬಾರಿ ವಿಭಾಗಾಧಿಕಾರಿಗಳು ಮಾಡಿದ್ದಾರೆ ವಕೀಲರು ನ್ಯಾಯ ಕೇಳಿ ತಮ್ಮ ಪಕ್ಷಗಾರರ ಪರವಾಗಿ ಕಚೇರಿಗೆ ಹೋದರೆ ವಕೀಲರನ್ನು ಏಕೆ ಕರೆದುಕೊಂಡು ಬರುತ್ತೀರಿ ಎಂದು ಜನರಿಗೆ ಹೇಳುತ್ತಾರೆ ಇದರಿಂದ ವಕೀಲರ ವೃತ್ತಿಗೆ ಮತ್ತು ವಕೀಲರಿಗೆ ಅವಮಾನವಾಗುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ
ಪಟ್ಟಣದ ನ್ಯಾಯವಾದಿಗಳು ವಾಹನ ಬಿಡುಗಡೆಗೆ ಸಂಬಂಧಿಸಿದಂತೆ ಕಳೆದ ಹಲವಾರು ತಿಂಗಳುಗಳಿಂದ ಕಚೇರಿಗೆ ಹೋಗಿ ನ್ಯಾಯಾಲಯ ಕಲಾಪಗಳಿಗೆ ಹಾಜರಾಗಿ ಕಾನೂನು ಬದ್ಧವಾಗಿ ಎಲ್ಲ ಪ್ರಕ್ರಿಯೆಗಳನ್ನು ಮಾಡಿದರು ಕೂಡ ಉಪ ವಿಭಾಗಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಾವೇ ಖುದ್ದಾಗಿ ಹಿಡಿದುಕೊಂಡು ನನ್ನ ಮುಂದೆ ಹಾಜರು ಪಡಿಸಬೇಕೆಂದು ಹೇಳಿದ್ದಾರೆ ಇದರಿಂದ ಉಪವಿಭಾಗಾಧಿಕಾರಿಗಳಿಗೆ ಕಾನೂನಿನ ಮತ್ತು ನ್ಯಾಯಾಲಯದ ಕಲಾಪಗಳ ಕನಿಷ್ಠ ಜ್ಞಾನ ಇಲ್ಲ ಎಂಬುದನ್ನು ತೋರಿಸಿಕೊಡುತ್ತದೆ.
ಆದ್ದರಿಂದ ಈ ಅಧಿಕಾರಿಯನ್ನು ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕೆಂದು ವಕೀಲರು ಸರ್ಕಾರಕ್ಕೆ ಒತ್ತಾಯಿಸಿದರು.
ಉಪವಿಭಾಗಾಧಿಕಾರಿಗಳ ಕಾರ್ಯವೈಖರಿಯ ಕುರಿತು ಅಸಮಾಧಾನಗೊಂಡ ವಕೀಲರ ಸಮುದಾಯ ಐಎಎಸ್ ಅಧಿಕಾರಿ ಮಾದವ ಗಿತ್ತೆ ವರ್ಗಾವಣೆಗೆ ಬಿಗಿಪಟ್ಟು ಹಿಡಿದಿದ್ದಾರೆ.
ಇವರ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ನಿರ್ಧಾರ ಕೈಗೊಂಡ ವಕೀಲರು ನಾಳೆಯಿಂದ ಅಧಿಕಾರಿ ವರ್ಗಾವಣೆ ಆಗುವ ತನಕ ಕೋರ್ಟ್ ಕಲಾಪಗಳಿಂದ ಹೂರಗೊಳಿಯುವ ನಿರ್ಧಾರ ಮಾಡಿದ್ದಾರೆ ನಂತರ ಪಟ್ಟಣದ ಮುಖ್ಯ ವೃತ್ತದಲ್ಲಿ ಜಮಾವಣೆಗೊಂಡ ವಕೀಲರು ಘೋಷಣೆ ಕೂಗುತ್ತಾ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು
ಹಿರಿಯ ವಕೀಲರಾದ ಬಿ ಎನ್ ಬಂಡಗಾರ ಮಾತನಾಡಿ ವಕೀಲರು ಜನರಿಗೆ ನ್ಯಾಯ ಕೊಡಿಸಲು ಕಚೇರಿಗಳಿಗೆ ಬರುತ್ತಾರೆ.
ಸಾರ್ವಜನಿಕ ಅಧಿಕಾರಿಯಾಗಿರುವ ಉಪವಿಭಾಗಾಧಿಕಾರಿಗಳು ತಮ್ಮ ಅಧಿಕಾರದ ದರ್ಪವನ್ನು ವಕೀಲರ ಮೇಲೆ ತೋರುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ ಎಂದು ಉಪ ವಿಭಾಗಾಧಿಕಾರಿಯ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು
ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ವಿರುದ್ಧ ಕಿಚಡೆ ವಕೀಲರು ಅರ್ಜಿ ಸಲ್ಲಿಸಿದ್ದರು.
ಕಾರಣ ವಕೀಲರ ಸಂಘದಲ್ಲಿ ತುರ್ತು ಸಭೆ ಸೇರಿದ ನ್ಯಾಯವಾದಿಗಳು ಕೆಲ ಕಾಲ ಚರ್ಚೆ ನಡೆಸಿದರು
ವಕೀಲರು ನೊಂದ ವ್ಯಕ್ತಿಗಳ ಪರವಾಗಿ ಕಚೇರಿಗೆ ಆಗಮಿಸಿದರೆ ಕನಿಷ್ಠ ಸೌಜನ್ಯವನ್ನು ಕೊಡದೆ ಅವರನ್ನು ಕಚೇರಿಯಿಂದ ಹೊರಗೆ ನಿಲ್ಲುವಂತೆ ಸೂಚಿಸುತ್ತಾರೆ.
ಇದರಿಂದ ವಕೀಲರ ವೃತ್ತಿಗೆ ಮತ್ತು ಘನತೆಗೆ ಅವಮಾನವಾಗುತ್ತಿದೆ ಎಂದು ಸಭೆಯಲ್ಲಿ ಹಿರಿಯ ನ್ಯಾಯವಾದಿ ರಾಜು ಶಿರಗಾಂವೆ ದೂರಿದರು ಕಂದಾಯ ನ್ಯಾಯಾಲಯಗಳನ್ನು ಸರಿಯಾಗಿ ನಡೆಸಲು ಬರುವುದಿಲ್ಲ ಮತ್ತು ಆದೇಶಗಳನ್ನು ಸರಿಯಾಗಿ ಮಾಡುವುದಿಲ್ಲ ಎಂದು ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದರು.
ಉಪ ವಿಭಾಗ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕು ನ್ಯಾಯಾಲಯಗಳ ವಕೀಲರು ಇವರ ನಡೆಯಿಂದ ತೀವ್ರ ಅಸಮಾಧಾನಗೊಂಡಿದ್ದಾರೆ ಜನರ ಪರವಾಗಿ ಕೆಲಸ ಮಾಡುವ ಅಧಿಕಾರಿ ಜನರಿಗೆ ತೊಂದರೆ ಕೊಡುವ ರೀತಿಯಲ್ಲಿ ವರ್ತನೆ ಮಾಡುತ್ತಿರುವುದು ಸರಿಯಾದ ನಡೆಯಲ್ಲ ಎಂದು ದೂರಿದರು.
ಜಿಲ್ಲಾಧಿಕಾರಿಗಳು ವಕೀಲರ ಸಂಘಕ್ಕೆ ಆಗಮಿಸುವ ತನಕ ಹೋರಾಟವನ್ನು ಕೈಬಿಡುವುದಿಲ್ಲ ಮತ್ತು ಕೂಡಲೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಸಂದರ್ಭದಲ್ಲಿ ವಕೀಲರ ಸಂಘದ ಹಿರಿಯ ಕಿರಿಯ ನ್ಯಾಯವಾದಿಗಳು ಹಾಜರ ಇದ್ದರು.


