ಬೆಂಗಳೂರು: ನಟ ಉಪೇಂದ್ರ ಮತ್ತೊಮ್ಮೆ ಸಂಕಷ್ಟಕ್ಕೆ ಈಡಾಗಿದ್ದಾರೆ.!
ಈಗಾಗಲೇ ಹಲಸೂರು ಗೇಟ್ ಪೊಲೀಸ್ ಠಾಣೆ ಮತ್ತು ಸಿ ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಉಪೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪೈಕಿ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ನಾಲ್ಕು ಪ್ರಬಲ ಐಪಿಸಿ ಸೆಕ್ಷನ್ ಗಳನ್ನು ಹಾಕಲಾಗಿತ್ತು. ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ದೂರುದಾರ ಕರ್ನಾಟಕ ರಣಧೀರ ಪಡೆಯ ಅಧ್ಯಕ್ಷ ಹರೀಶ್ ಕುಮಾರ್ ಅವರು ಈ ಹಿಂದೆ ಠಾಣೆಯಿಂದ ಗೃಹ ಸಚಿವರ ಮನೆಯ ವರೆಗೆ ಪಾದಾಯಾತ್ರೆ ನಡೆಸಿ ಉಪೇಂದ್ರ ಬಂಧನಕ್ಕೆ ಆಗ್ರಹಿಸಿದ್ದರು.
ಈ ಮಧ್ಯೆ ಹೈಕೋರ್ಟ್ ಪ್ರಕರಣಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರಿಂದ ತಾತ್ಕಾಲಿಕವಾಗಿ ಉಪೇಂದ್ರ ಬಚಾವ್ ಆಗಿದ್ದರು.
ಇದೀಗ ಬೈರಪ್ಪ ಹರೀಶ್ ಕುಮಾರ್ ಅವರು ಮಾಧ್ಯಮ ಆಹ್ವಾನವನ್ನು ಪತ್ರಕರ್ತರಿಗೆ ಕಳುಹಿಸಿದ್ದು, ಇಂದು ಸಂಜೆ 5 ಗಂಟೆಗೆ ನಾನು ಉಪೇಂದ್ರ ವಿರುದ್ಧ ಮತ್ತೊಂದು ದೂರು ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಉಪೇಂದ್ರ ವಿರುದ್ಧ ದಾಖಲಾಗುವ ಮತ್ತೊಂದು ದೂರು ಯಾವುದು.? ಈ ಬಾರಿ ಉಪೇಂದ್ರ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟನಾ.? ಎಂಬ ಮಾತುಗಳು ಕೇಳಿ ಬರುತ್ತಿದೆ.


