ಕುಬ್ಜರ ಕ್ರೀಡೆಯಲ್ಲಿ, ಚಿನ್ನದ ಪದಕ ಗೆದ್ದು ಬೀಗಿದ ಕುಬ್ಜ ಕುವರಿ ಮಂಜುಳಾ,ಜರ್ಮನಿಯಲ್ಲಿ ಸಾಧನೆಗೈದ ಗಟ್ಟಿಗಿತ್ತಿ.!
ಅರೆ ಇದೇನಪ್ಪ ಗಟ್ಟಿಗಿತ್ತಿಯ ಸಾಧನೆ ಎನ್ನುತ್ತೀರಾ.?
ಹೌದು ವೀಕ್ಷಕರೇ, ಜರ್ಮನಿಯಲ್ಲಿ ನಡೆದ ಎಂಟನೇ ವಿಶ್ವಕುಬ್ಜರ ಕ್ರೀಡಾ ಕೂಟದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದ ಕುಬ್ಜ ಕುವರಿ ಮಂಜುಳಾ ಗೊರಗುದ್ದಿ ಮೂರು ಪದಕ ಗೆದ್ದು ಸಾಧನೆಗೈದ ಗಟ್ಟಿಗಿತ್ತಿ ಮಹಿಳೆ ಆಗಿರುತ್ತಾಳೆ.
ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಎರಡನೇ ಸ್ಥಾನ, ಜಾವೆಲಿನ್ ಥ್ರೋ ದಲ್ಲಿ ಮೂರನೇ ಸ್ಥಾನ ಪಡೆದು ಕೊಂಡಿರುತ್ತಾಳೆ. ತಂದೆ ಶಿವಪ್ಪ, ತಾಯಿ ಹೊಳೆವ್ವ ರವರ ಮುದ್ದಿನ ಮಗಳಾಗಿ ಹುಟ್ಟಿದ ಮಂಜುಳಾ… ಬಡತನದಲ್ಲಿ ಕಾನೂನು ಪದವಿ ಮುಗಿಸಿಕೊಂಡಿರುತ್ತಾಳೆ.
ಬಡತನದಲ್ಲಿ ಹುಟ್ಟಿ ಸಾಲ ಸೂಲ ಮಾಡಿ ಪದಕ ಗೆದ್ದಿರುವ ಪ್ರತಿಭೆ ಮಂಜುಳಾ ಜರ್ಮನ ದೇಶಕ್ಕೆ ಹೋಗಲು ಸುಮಾರು ಮೂರು ಲಕ್ಷ ರುಪಾಯಿ ಬಡ್ಡಿಗೆ ಸಾಲ ಪಡೆದುಕೊಂಡಿರುತ್ತಾರೆ.
ಜುಲೈ 28ರಿಂದ ಅ.4 ರ ವರೆಗೆ ನಡೆದ ಕ್ರೀಡಾ ಕೂಟದಲ್ಲಿ
ಒಟ್ಟು ಮೂರು ಪದಕ ಗೆದ್ದು ದೇಶಕ್ಕೆ, ರಾಜ್ಯಕ್ಕೆ ಮತ್ತು ಜಿಲ್ಲೆಯಲ್ಲಿ ಹೆಮ್ಮೆಯ ಕುವರಿ ಎನಿಸಿಕೊಂಡಿದ್ದಾಳೆ. ಆದ್ದರಿಂದ ಸರ್ಕಾರ ಇಂತಹ ಬಡ ಪ್ರತಿಭೆಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಹೆಚ್ಚು ಸವಲತ್ತುಗಳನ್ನು ಮಾಡಿಕೊಡಬೇಕೆಂದು ನಮ್ಮ ಟಿವಿ3 ಕನ್ನಡ ವಾಹಿನಿಯ ಆಶಯವಾಗಿದೆ.


