ಅವರಗೋಳ: ತುರ್ಸಾ ತುರ್ಸಿ ಚುನಾವಣೆಯಲ್ಲಿ ಗೆದ್ದು ಬೀಗಿದ ನಾಗೇಶ ಪಾಟೀಲ.
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದಲ್ಲಿ ಪಿಕೆಪಿಎಸ್ ಸಹಕಾರಿ ಸಂಘದ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಲ್ಲಾಸದಸ್ಯರ ಫಲಿತಾಂಶ ತಿಳಿದಿದೆ ಆದರೆ ಈ ಚುನಾವಣೆ ನ್ಯಾಯಾಲಯದ ಆದೇಶದಂತೆ ನಡೆಯಿತು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆದಾಗ ಅಂದೆ ಮತದಾನ ಅಂದೆ ಫಲಿತಾಂಶ ಇರುತ್ತಿತ್ತು ಆದರೆ ಇಲ್ಲಿ ಸಂಘ ಮಾಡಿದ ಹಲವು ಗೊಂದಲಗಳಿಂದ ಸಾಲಗಾರರು ಬೇರೆ ಬಿನ್ ಸಾಲಗಾರರು ಬೇರೆ ಎಂಬಂತೆ ಮಾಡಿ ಹಲವೂ ಸದಸ್ಯರನ್ನ ಕಡೆಗಣೆಸಿದ್ದರು ಆದರೆ ನ್ಯಾಯಾಲಯ ಹಾಗೂ ಮಾಧ್ಯಮದ ಮೊರೆ ಹೋದ ಬಿನ್ ಸಾಲಗಾರ ನಾಗರಾಜ ಪಾಟೀಲ ಇವರು ನ್ಯಾಯಾಲಯದ ಆದೇಶದಂತೆ ಚುನಾವಣೆ ನಿಯಮಗಳನ್ನು ಅಳವಡಿಸಿ ಇಂದು ಪಿಕೆಪಿಎಸ್ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ನಾಗರಾಜ ಪಾಟೀಲ ೧೭೦ ಮತಗಳಿಂದ ಗೆದ್ದರು, ಒಟ್ಟು ೮ ಮತಗಳಿಂದ ಜಯಬೇರಿ ಬಾರಿಸಿದ ನಾಗರಾಜ ಪಾಟೀಲ, ಸೋಲಿನ ಸರದಾರ ಎನಿಸಿಕೊಂಡಿದ್ದಾರೆ,ಬಹಳ ದಿನಗಳಿಂದ ಕೂತುಹಲ ಮೂಡಿಸಿದ ಪಿಕೆಪಿಎಸ್ ಚುನಾವಣೆ ಎಲ್ಲರಿಗೂ ನಿದ್ದೆಗೆಡಿಸಿತ್ತು,ಆದರೆ ಇಂದು ಪಿಕೆಪಿಎಸ್ ಚುನಾವಣೆ ಫಲಿತಾಂಶ ನೊಡಲು ಗ್ರಾಮಸ್ಥರು ಮೂಗಿ ಬಿದ್ದಿದ್ದರು,ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಪಟಾಕಿ ಹಾರಿಸುವ ಮೂಲಕ ಸಿಹಿ ಹಂಚಿ ಶಾಲು ಮಾಲೆ ಹಾಕಿ ವಿಜಯೋತ್ಸವ ಆಚರಣೆ ಮಾಡಿದರು. ವರದಿ ಚಂದ್ರು ತಳವಾರ


