ಜೋಡಿ ಕುದುರೆ ಬಂಡಿ,ಮಿಂಚಿನ ರೇಸ್ ಗೆ ಥ್ರಿಲ್ ಆದ ಪ್ರೇಕ್ಷಕರು.!
ಹೌದು ವೀಕ್ಷಕರೇ, ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ಯ ಕುದರೆ ಬಂಡಿ ಓಡಿಸೋ ಸ್ಪರ್ಧೆ.!
ನೆರೆದಿದ್ದ ಸಹಸ್ರಾರು ಜನರಿಗೆ ಭರ್ಜರಿ ಮನರಂಜನೆ ನೀಡಿತು. ನಿಪನಾಳದಿಂದ ಬೆಂಡವಾಡ ಕ್ರಾಸ್ ವರೆಗೆ ಜನರ ಕೇಕೆ, ಸಿಳ್ಳೆ, ಚಪ್ಪಾಳೆಗಳ ಸದ್ದು ಮುಗಿಲು ಮುಟ್ಟಿತ್ತು.
ಗೆಲುವು ನನ್ನದೇ, ಅಖಾಡದಲ್ಲಿ ನಂದೇ ಹವಾ ಎನ್ನುತ್ತಾ, ಧೂಳೆಬ್ಬಿಸಿಕೊಂಡು ಓಡ್ತಿದ್ದ ಕುದುರೆಗಳ ಓಟ ನೋಡಿ ಕೆಲವರು ಅವರ ಜೊತೆಗೆ ಬೈಕ್ ಗಳನ್ನು ಬೆನ್ನು ಹಚ್ಚಿ ಮತ್ತಷ್ಟು ಕುದುರೆ ಗಾಡಿ ಗೆಲುವಿಗಾಗಿ ಹುಮ್ಮಸ್ಸು ನೀಡ್ತಿದ್ರು.
ಕಟ್ ಮಸ್ತಾಗಿದ್ದ ಕುದುರೆಗಳ ಶರವೇಗದ ಓಟ ಎಂಥವರೂ ವ್ಹಾ… ವ್ಹಾ ಅನ್ನುವಂತಿತ್ತು.
ಕುದುರೆಗಳ ಓಟ ಭರ್ಜರಿಯಾಗಿತ್ತು. ಅಖಾಡಕ್ಕೆ ಧುಮ್ಕಿದ್ದ ಕುದುರೆಗಳು ಪ್ರೇಕ್ಷಕರ ಎದೆ ಜಲ್ ಎಣಿಸುವಂತಿತ್ತು. ಮಿಂಚಿನ ಓಟ, ಓಡ್ತಿರೋ ಕುದುರೆಗಳು ನೆರೆದಿದ್ದ ಜನರಲ್ಲಿ ಉತ್ಸಾಹ ಉಂಟು ಮಾಡಿತ್ತು.
ನಿಪನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಕುದುರೆ ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಹಲವು ಕುದುರೆ ಬಂಡಿ ಸ್ಪರ್ಧಿಗಳ ಮಧ್ಯ ಬಾರಿ ಪೈಪೋಟಿ ನಡೆದಿತ್ತು.
ಇವುಗಳಲ್ಲಿ ಪ್ರಥಮ ಸ್ಥಾನ ಭೀಮಸಿ ಬಾಂಬೆ ಗಿಟ್ಟಿಸಿಕೊಂಡರೆ, ದ್ವಿತೀಯ ಬಹುಮಾನ ದುಂಡಪ್ಪ ಇಂಗಳಿ ಪಡೆಯುವಲ್ಲಿ ಯಶಸ್ಸು ಆಗಿದ್ದಾರೆ.
ಶರ್ತುಗಳ ಆಯೋಜಕರಾಗಿ ಜಿತೇಂದ್ರ ಮರಿಯಪ್ಪಗೋಳ ದೇವೇಂದ್ರ ನಿಪನಾಳ, ಮಂಜುನಾಥ ತಳವಾರ, ಸಿದ್ದು ಮ್ಯಾಗಡಿ, ಲವಪ್ಪ ಮರಿಯಪ್ಪಗೋಳ ಶ್ರೀಕಾಂತ ಮಹಿಮಗೋಳ, ಶೆಟ್ಟಪ್ಪ ತಳವಾರ, ಪಾಪು ನಿಪ್ಪನಾಳಕರ, ಲವಪ್ಪ ತಳವಾರ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಶರ್ತುಗಳು ಅಂತರ್ ರಾಜ್ಯ ಮಟ್ಟದಲ್ಲಿ ಮಟ್ಟದಲ್ಲಿ ನೆರವೇರಿದವು.
ವರದಿ- ಚಂದ್ರು ತಳವಾರ ಟಿವಿ3 ನ್ಯೂಸ್ ಕನ್ನಡ ರಾಯಬಾಗ